HomeEntertainmentಚಿತ್ರಮಂದಿರಗಳಲ್ಲಿ ಅಬ್ಬರಿಸಿ ಒಟಿಟಿಗೆ ಲಗ್ಗೆ ಇಡಲು ಸಜ್ಜಾದ 'ಇರುಮುಡಿ': ಶೀಘ್ರದಲ್ಲೇ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆ!

ಚಿತ್ರಮಂದಿರಗಳಲ್ಲಿ ಅಬ್ಬರಿಸಿ ಒಟಿಟಿಗೆ ಲಗ್ಗೆ ಇಡಲು ಸಜ್ಜಾದ ‘ಇರುಮುಡಿ’: ಶೀಘ್ರದಲ್ಲೇ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆ!

ಟಾಲಿವುಡ್‌ನ ಮಾಸ್ ಮಹಾರಾಜ ರವಿತೇಜ ಅಭಿನಯದ ಅತ್ಯಂತ ನಿರೀಕ್ಷಿತ ಚಿತ್ರ ‘ಇರುಮುಡಿ’ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಂಡು ಬಾಕ್ಸ್ ಆಫೀಸ್‌ನಲ್ಲಿ ನಯಾ ದಾಖಲೆಗಳನ್ನು ಬರೆದಿದೆ. ಪ್ರೇಕ್ಷಕರಿಂದ ಹಾಗೂ ವಿಮರ್ಶಕರಿಂದ ಅಭೂತಪೂರ್ವ ಮೆಚ್ಚುಗೆ ಪಡೆದುಕೊಂಡಿರುವ ಈ ಸಿನಿಮಾ ಈಗಾಗಲೇ ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ ಬರೋಬ್ಬರಿ 200 ಕೋಟಿ ರೂಪಾಯಿಗಳ ಬಿಸಿನೆಸ್ ಮಾಡುವ ಮೂಲಕ ಸಿನಿರಂಗದಲ್ಲಿ ಹೊಸ ಇತಿಹಾಸ ಸೃಷ್ಟಿಸಿದೆ. ಪ್ರಸ್ತುತ ಹಲವು ದೊಡ್ಡ ಸಿನಿಮಾಗಳು ತೆರೆಗೆ ಬಂದಿದ್ದರೂ ಸಹ ಚಿತ್ರಮಂದಿರಗಳಲ್ಲಿ ತನ್ನ ಯಶಸ್ವಿ ಓಟವನ್ನು ಮುಂದುವರಿಸಿರುವ ಈ ಸಿನಿಮಾ, ಇದೀಗ ಒಟಿಟಿ ಪ್ಲಾಟ್‌ಫಾರ್ಮ್‌ಗೆ ಶುಭಾರಂಭ ಮಾಡಲು ಸಜ್ಜಾಗುತ್ತಿದೆ.

ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡಿದ ಈ ಬಿಗ್ ಬಜೆಟ್ ಸಿನಿಮಾದ ಡಿಜಿಟಲ್ ಹಕ್ಕುಗಳನ್ನು ಪ್ರಸಿದ್ಧ ಒಟಿಟಿ ದೈತ್ಯ ಸಂಸ್ಥೆಯಾದ ‘ನೆಟ್‌ಫ್ಲಿಕ್ಸ್’ (Netflix) ಭಾರಿ ಮೊತ್ತಕ್ಕೆ ಕೊಡುಕೊಂಡಿದೆ. ಹೊರಬಿದ್ದಿರುವ ವರದಿಗಳ ಪ್ರಕಾರ, ಬರುವ ಸೆಪ್ಟೆಂಬರ್ 18 ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ‘ಇರುಮುಡಿ’ ಸಿನಿಮಾ ತೆಲುಗು ಸೇರಿದಂತೆ ಹಲವು ಭಾರತೀಯ ಭಾಷೆಗಳಲ್ಲಿ ಡಿಜಿಟಲ್ ಸ್ಟ್ರೀಮಿಂಗ್ ಆರಂಭಿಸಲಿದೆ ಎನ್ನಲಾಗಿದೆ. ಶೀಘ್ರದಲ್ಲೇ ಈ ಕುರಿತು ನೆಟ್‌ಫ್ಲಿಕ್ಸ್ ಸಂಸ್ಥೆಯು ತನ್ನ ಅಧಿಕೃತ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿಯನ್ನು ಹಂಚಿಕೊಳ್ಳಲಿದೆ.

ಚಿತ್ರದ ಕಥಾಹಂದರ ಹಾಗೂ ನಿರ್ದೇಶನದ ಕುರಿತು ಹೇಳುವುದಾದರೆ, ಖ್ಯಾತ ನಿರ್ದೇಶಕ ಶಿವನಿರ್ವಾಣ ಈ ಭಾವನಾತ್ಮಕ ಹಾಗೂ ಆಕ್ಷನ್ ಆಧಾರಿತ ಚಿತ್ರವನ್ನು ಅದ್ಭುತವಾಗಿ ತೆರೆಗೆ ತಂದಿದ್ದಾರೆ. ಮೈತ್ರಿ ಮೂವಿ ಮೇಕರ್ಸ್ ಅತ್ಯಂತ ಅದ್ದೂರಿಯಾಗಿ ನಿರ್ಮಿಸಿರುವ ಈ ಚಿತ್ರದಲ್ಲಿ ರವಿತೇಜ ಅವರ ನಟನೆಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಅವರ ಜೊತೆಗೆ ಬೇಬಿ ನಕ್ಷತ್ರ, ಪ್ರಿಯಾ ಭವಾನಿ ಶಂಕರ್, ಹಿರಿಯ ನಟ ಸಾಯಿ ಕುಮಾರ್, ರಮೇಶ್ ಇಂದಿರಾ ಹಾಗೂ ಸ್ವಾಸಿಕಾ ವಿಜಯ್ ಸೇರಿದಂತೆ ದೊಡ್ಡ ತಾರಾಗಣವೇ ಈ ಚಿತ್ರದಲ್ಲಿದ್ದು, ಪ್ರತಿಯೊಬ್ಬರೂ ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಜಿ.ವಿ. ಪ್ರಕಾಶ್ ಕುಮಾರ್ ಅವರ ಸಂಗೀತ ಹಾಗೂ ಹಿನ್ನೆಲೆ ಸಂಗೀತ ಚಿತ್ರಕ್ಕೆ ಮತ್ತಷ್ಟು ಶಕ್ತಿ ನೀಡಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಮನಸ್ಸನ್ನು ಗೆದ್ದ ಈ ಭಾವನಾತ್ಮಕ ಕಥಾಹಂದರವು ಒಟಿಟಿ ವೇದಿಕೆಯಲ್ಲೂ ಅದೇ ರೀತಿಯ ಸದ್ದು ಮಾಡಲಿದ್ದು, ಡಿಜಿಟಲ್ ಪ್ರೇಕ್ಷಕರನ್ನು ಅಪಾರವಾಗಿ ಆಕರ್ಷಿಸಲಿದೆ ಎಂದು ಸಿನಿರಂಗದ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular