HomeKarnatakaಕರ್ನಾಟಕ ನೀರಾವರಿ ನಿಗಮಕ್ಕೆ ಸಚಿವ ಚಲುವರಾಯಸ್ವಾಮಿ ದಿಢೀರ್ ಭೇಟಿ; ಅಡ್ಡಾದಿಡ್ಡ ಕಡತಗಳನ್ನು ಕಂಡು ಕೆಂಡ

ಕರ್ನಾಟಕ ನೀರಾವರಿ ನಿಗಮಕ್ಕೆ ಸಚಿವ ಚಲುವರಾಯಸ್ವಾಮಿ ದಿಢೀರ್ ಭೇಟಿ; ಅಡ್ಡಾದಿಡ್ಡ ಕಡತಗಳನ್ನು ಕಂಡು ಕೆಂಡ

ಬೆಂಗಳೂರು- ಕರ್ನಾಟಕ ನೀರಾವರಿ ನಿಗಮ ಕಚೇರಿಯ ಲೆಕ್ಕ ವಿಭಾಗಕ್ಕೆ ಜಲಸಂಪನೂಲ ಸಚಿವ ಎನ್‌. ಚಲುವರಾಯಸ್ವಾಮಿ ದಿಢೀರ್‌ ಭೇಟಿ ನೀಡಿ ಪರಿಶೀಲಿಸಿದರು.

ಈ ಸಂದರ್ಭದಲ್ಲಿ ಕಡತಗಳ ಅವ್ಯವಸ್ಥೆ ಕಂಡು ಅಧಿಕಾರಿಗಳಿಗೆ ತರಾಟೆ, ಕಚೇರಿ ಕಾರ್ಯವೈಖರಿ ಸುಧಾರಣೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಅನಿರೀಕ್ಷಿತ ಭೇಟಿಯಲ್ಲಿ ಹೆಚ್ಚುವರಿ ವಿಚಾರಣೆ

ಕರ್ನಾಟಕ ನೀರಾವರಿ ನಿಗಮ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಸಚಿವರು ಕಚೇರಿಯ ಲೆಕ್ಕಪತ್ರ ಹಾಗೂ ಆಡಳಿತ ವಿಭಾಗಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಕಚೇರಿಯ ಮೇಜುಗಳು ಹಾಗೂ ಕಪಾಟುಗಳ ಮೇಲೆ ಯಾವುದೇ ಕ್ರಮಬದ್ಧತೆ ಇಲ್ಲದೆ ರಾಶಿ ಬಿದ್ದಿದ್ದ ಕಡತಗಳು ಹಾಗೂ ಅವ್ಯವಸ್ಥೆಯನ್ನು ಕಂಡು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕ ಕೆಲಸ-ಕಾರ್ಯಗಳು ನಿಗದಿತ ಅವಧಿಯಲ್ಲಿ ಪಾರದರ್ಶಕವಾಗಿ ನಡೆಯಬೇಕಾದರೆ ಕಡತಗಳ ನಿರ್ವಹಣೆ ಅತ್ಯಂತ ವ್ಯವಸ್ಥಿತವಾಗಿರಬೇಕು. ಆದರೆ ಇಲ್ಲಿ ಪ್ರಮುಖ ಯೋಜನಾ ಹಾಗೂ ಲೆಕ್ಕಪತ್ರ ಕಡತಗಳನ್ನು ಅಡ್ಡಾದಿಡ್ಡಿಯಾಗಿ ಜೋಡಿಸಿಟ್ಟಿರುವುದು ಆಡಳಿತ ವೈಫಲ್ಯವನ್ನು ಎತ್ತಿ ತೋರಿಸುತ್ತದೆ ಎಂದು ಅಸಮಾಧಾನ ಹೊರಹಾಕಿದರು.

ಕಡತಗಳ ಉತ್ತಮ ನಿರ್ವಹಣೆಗಾಗಿ ಸೂಚನೆಗಳು

ಅಗತ್ಯ ಕಡತಗಳು ತಕ್ಷಣವೇ ಲಭ್ಯವಾಗುವಂತೆ ಪ್ರತ್ಯೇಕ ರೆಕಾರ್ಡ್‌ ರೂಮ್‌ ನಿರ್ಮಿಸುವುದು, ರ್ಯಾಕ್‌ಗಳ ವ್ಯವಸ್ಥೆ ಮಾಡುವುದು ಹಾಗೂ ಕಡತಗಳನ್ನು ಸೂಕ್ತವಾಗಿ ವಿಂಗಡಿಸಿ ನಿರ್ವಹಣೆ ಮಾಡುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.

ಆಡಳಿತ ಯಂತ್ರ ಚುರುಕಾಗಿರಲು ಕಚೇರಿಯ ವಾತಾವರಣ ಸ್ವಚ್ಛ ಮತ್ತು ಶಿಸ್ತುಬದ್ಧವಾಗಿರಬೇಕು. ತಕ್ಷಣವೇ ಈ ಎಲ್ಲಾ ಅವ್ಯವಸ್ಥೆಗಳನ್ನು ಸರಿಪಡಿಸಿ, ಕಡತಗಳ ವ್ಯವಸ್ಥಿತ ನಿರ್ವಹಣೆಗೆ ತುರ್ತು ಕ್ರಮ ಕೈಗೊಳ್ಳಬೇಕು. ಮುಂದಿನ ಭೇಟಿಯ ವೇಳೆಗೆ ಈ ರೀತಿಯ ಲೋಪಗಳು ಕಂಡುಬಂದರೆ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಸಚಿವರು ಅಧಿಕಾರಿಗಳಿಗೆ ಖಡಕ್‌ ಎಚ್ಚರಿಕೆ ನೀಡಿದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular