ಪಶ್ಚಿಮ ಏಷ್ಯಾ ಪ್ರದೇಶದಲ್ಲಿ ವಾಯುಪ್ರದೇಶ ಬಹುತೇಕ ತೆರೆದ ಬಳಿಕ 52,000 ಭಾರತಿಯರು ದೇಶಕ್ಕೆ ಸುರಕ್ಷುತವಾಗಿ ವಾಪಸ್ ಆಗಿದ್ದಾರೆ ಎಂದು ಕೇಂದ್ರ ವಿದೇಶಾಂಗ ಸಚಿವಾಲಯ ಮಾಹಿತಿ ನೀಡಿದೆ.
ಸ್ಥಳೀಯ ಅಧಿಕಾರಿಗಳ ಮಾರ್ಗಸೂಚಿ ಹಾಗೂ ಭಾರತೀಯ ಕಾರ್ಯಾಚರಣೆಯ ತಂಡ ನೀಡುವ ಸಲಹೆ ಗಳನ್ನು ಅನುಸರಿಸುವಂತೆ ಪಶ್ಚಿಮ ಏಷ್ಯಾ ದೇಶಗಳಲ್ಲಿ ನೆಲೆಸಿರುವ ಭಾರತೀಯ ಪ್ರಜೆಗಳನ್ನು ಒತ್ತಾಯಿಸುದೆ.
ವಿದೇಶಗಳಲ್ಲಿ ಭಾರತೀಯ ಪ್ರಜೆಗಳ ಕ್ಷೇಮ ಹಾಗೂ ಸುರಕ್ಷತೆ ಮೊದಲ ಆದುತೆ. ಸಹಾಯದ ಅಗತ್ಯವಿರುವ ಎಲ್ಲರಿಗೂ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಪಶ್ಚಿಮ ಏಷ್ಯಾ ಪ್ರದೇಶದಲ್ಲಿರುವ ಸರ್ಕಾರಗಳೊಂದಿಗೆ ನಿರಂತರ ಸಂಪರ್ಕದಲ್ಲಿರುವುದಾಗಿ ವಿದೇಶಾಂಗ ಇಲಾಖೆ ತಿಳಿಸಿದೆ.
ಅಮೆರಿಕಾ ಹಾಗೂ ಇಸ್ರೇಲ್ ಇರಾನ್ ಮೇಲೆ ಬಾಂಬ್ ದಾಳಿ ಮುಂದುವರೆಸಿದ್ದು ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಭಾರತ ಸರ್ಕಾರ ಪಶ್ಚಿಮ ಏಷ್ಯಾ ಹಾಗೂ ಗಲ್ಫ್ ದೇಶಗಳಲ್ಲಿ ಉಲ್ಬಣಗೊಳ್ಳುತ್ತಿರುವ ಪರಿಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದೆ. ಮಾರ್ಚ್1ರಿಂದ 7ರವರೆಗೆ 52,000ಕ್ಕೂ ಹೆಚ್ಚು ಭಾರತೀಯರು ಗಲ್ಫ್ ದೇಶಗಳಿಂದ ಭಾರತಕ್ಕೆ ಸುರಕ್ಷಿತವಾಗಿ ಆಗಮಿಸಿದ್ದಾರೆ ಎಂದು ತಿಳಿಸಿದೆ.

