HomeInternationalWAR BREAKING: ಇರಾಕ್ ನ ಎರಡು ತೈಲ ಟ್ಯಾಂಕರ್ ಗಳ ಮೇಲೆ ಇರಾನ್ ಭೀಕರ ದಾಳಿ:...

WAR BREAKING: ಇರಾಕ್ ನ ಎರಡು ತೈಲ ಟ್ಯಾಂಕರ್ ಗಳ ಮೇಲೆ ಇರಾನ್ ಭೀಕರ ದಾಳಿ: ಭಾರತೀಯ ಪ್ರಜೆ ಸಾವು

ಟೆಹ್ರಾನ್: ಇಸ್ರೇಲ್-ಅಮೆರಿಕಾ-ಇರಾನ್ ಯುದ್ಧ ಮುಂದುವರೆದಿದೆ. ಈ ನಡುವೆ ಇರಾಕ್‌ನ ಕರಾವಳಿ ಬಳಿ ಇರಾನ್ ಎರಡು ತೈಲ ಟ್ಯಾಂಕರ್‌ಗಳ ಮೇಲೆ ದಾಳಿ ನಡೆಸಿದೆ.ಘಟನೆಯಲ್ಲಿ ಭಾರತೀಯ ಪ್ರಜೆಯೊಬ್ಬರು ಮೃತಪಟ್ಟಿದ್ದಾರೆ.

ಸುಮಾರು 2 ವಾರಗಳಿಂದ ನಡೆಯುತ್ತಿರುವ ಅಮೆರಿಕ-ಇಸ್ರೇಲ್-ಇರಾನ್ ನಡುವಿನ ಯುದ್ಧದಿಂದ ಈಗಾಗಲೇ ಉಂಟಾಗಿರುವ ಉದ್ವಿಗ್ನತೆ ಮತ್ತಷ್ಟು ಹೆಚ್ಚಿಸದೆ. ಹಾರ್ಮುಜ್ ಜಲಸಂಧಿಯ ಮೂಲಕ ಒಂದು ಲೀಟರ್ ತೈಲ ಕೂಡ ಹಾದುಹೋಗಲು ಅನುಮತಿ ನೀಡುವುದಿಲ್ಲ ಎಂದು ಎಚ್ಚರಿಸಿದ ನಂತರ ಇರಾನ್ ನೇರವಾಗಿ ತೈಲ ಟ್ಯಾಂಕರ್‌ಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇರಾಕ್‌ನ ಖೋರ್ ಅಲ್ ಜುಬೈರ್ ಬಂದರಿನ ಬಳಿ ಇರಾನ್​ನ ಹಡಗು ಅಮೆರಿಕದ ಒಡೆತನದ ಕಚ್ಚಾ ತೈಲ ಟ್ಯಾಂಕರ್ ಸಫೀಯಾ ವಿಷ್ಣುವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ. ಇದರ ಜೊತೆಗೆ ಮಾಲ್ಡೀವ್ಸ್​​ನ ಇನ್ನೊಂದು ಟ್ಯಾಂಕರ್ ಮೇಲೂ ದಾಳಿ ನಡೆಸಲಾಗಿದೆ. ಈ ದಾಳಿಯಲ್ಲಿ ಭಾರತೀಯ ಪ್ರಜೆ ಸಾವನ್ನಪ್ಪಿದ್ದಾರೆ. ಈ ಮೂಲಕ ಗಲ್ಫ್ ಪ್ರದೇಶದಲ್ಲಿ ನಡೆಯುತ್ತಿರುವ ಯುದ್ಧ ಮತ್ತೋರ್ವ ಭಾರತೀಯನನ್ನು ಬಲಿ ತೆಗೆದುಕೊಂಡಿದೆ. ಹಡಗಿನಲ್ಲಿದ್ದ ಉಳಿದ 27 ಸಿಬ್ಬಂದಿಯನ್ನು ರಕ್ಷಿಸಿ ಬಸ್ರಾಗೆ ಸ್ಥಳಾಂತರಿಸಲಾಗಿದೆ.

ಜಾಗತಿಕ ಕಡಲ ಕಾರ್ಯಪಡೆಯ ಶೇ. 15ಕ್ಕಿಂತ ಹೆಚ್ಚು ಜನರು ಭಾರತೀಯರು ಇರುವುದರಿಂದ, ಮುಂದಿನ ಯಾವುದೇ ದಾಳಿಯಲ್ಲಿ ಇನ್ನಷ್ಟು ಭಾರತೀಯ ಪ್ರಜೆಗಳಿಗೂ ಅಪಾಯಗಳು ಎದುರಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಸಫೆಸಿಯಾ ವಿಷ್ಣು 2007ರಲ್ಲಿ ನಿರ್ಮಿಸಲಾದ ಕಚ್ಚಾ ತೈಲ ಟ್ಯಾಂಕರ್ ಆಗಿದೆ. ಈ ಹಡಗು 228.6 ಮೀಟರ್ ಉದ್ದ, 32.57 ಮೀಟರ್ ಅಗಲವಿದ್ದು, ಮಾರ್ಷಲ್ ದ್ವೀಪಗಳ ಧ್ವಜದ ಅಡಿಯಲ್ಲಿ ಸಾಗುತ್ತದೆ. ಇದು 42,010 ಒಟ್ಟು ಟನ್ ಮತ್ತು 73,976 ಡೆಡ್‌ವೈಟ್ ಟನ್ ಹೊಂದಿದೆ.

ಮಾರ್ಚ್ 1 ಮತ್ತು 2ರಂದು ಇರಾನಿನ ಡ್ರೋನ್ ಮತ್ತು ಕ್ಷಿಪಣಿ ದಾಳಿಗಳು ಒಮನ್ ಕರಾವಳಿಯಲ್ಲಿ MV MKD ವ್ಯೋಮ್ ಮತ್ತು MV ಸ್ಕೈಲೈಟ್ ಎಂಬ ವ್ಯಾಪಾರಿ ಹಡಗುಗಳನ್ನು ಗುರಿಯಾಗಿಸಿಕೊಂಡಿದ್ದವು. ಈ ದಾಳಿಗಳಲ್ಲಿ ಮೂವರು ಭಾರತೀಯರು ಸಾವನ್ನಪ್ಪಿದ್ದರು. ಈ ದಾಳಿಯಲ್ಲಿ 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು, ಒಬ್ಬ ವ್ಯಕ್ತಿಯ ಸ್ಥಿತಿ ಗಂಭೀರವಾಗಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular