HomeInternationalಇರಾನ್ ವಿರುದ್ಧ ಅಮೆರಿಕ ಸೆಣೆಸಾಟ, ಮತ್ತೊಂದು F-35 ಫೈಟರ್ ಜೆಟ್ ಢಮಾರ್? F-35 Jet

ಇರಾನ್ ವಿರುದ್ಧ ಅಮೆರಿಕ ಸೆಣೆಸಾಟ, ಮತ್ತೊಂದು F-35 ಫೈಟರ್ ಜೆಟ್ ಢಮಾರ್? F-35 Jet

ಅಮೆರಿಕ ಎಂಬ ದೈತ್ಯ ಹಾಗೂ ಬಲಿಷ್ಠ ದೇಶದ ಹಣೆಬರಹ ಈಗ ಇಡೀ ಜಗತ್ತಿಗೇ ಗೊತ್ತಾಗುತ್ತಿದೆ. ತಾನೇ ಇಡೀ ಜಗತ್ತಿನ ಬಾಸ್ ಎಂದು ಮೆರೆಯುತ್ತಿದ್ದ ಅಮೆರಿಕ ವೀಕ್ ಆಗಿ ಹೋಯ್ತಾ? ಅಮೆರಿಕ ಸೇನೆ ಕೈಯಲ್ಲಿ ಇರಾನ್‌ನ ಸೋಲಿಸಲು ಆಗುತ್ತಿಲ್ಲವಾ? ಎಂಬ ಪ್ರಶ್ನೆಗಳು ಮೂಡುತ್ತಿವೆ. ಇಂಟರ್‌ನ್ಯಾಷನಲ್ ಲೆವೆಲ್‌ಗೆ ಅಮೆರಿಕ ಸೇನೆ & ಸರ್ಕಾರ ತನ್ನ ಮಾನ ಕಳೆದುಕೊಳ್ಳುವ ಹಂತಕ್ಕೆ ಬಂದಿದೆ. ಇರಾನ್ ವಿರುದ್ಧ ಸುಮ್ಮನೆ ಇರದೆ ಯುದ್ಧ ಸಾರಿ, ಇದೀಗ ಕೈಸುಟ್ಟುಕೊಂಡು ಚಿಂತೆ ಮಾಡುತ್ತಿರುವ ಅಮೆರಿಕಗೆ ಮತ್ತೊಂದು ಭೀಕರ ಆಘಾತ ಎದುರಾಗಿದೆ. ಈಗ ದಿಢೀರ್ ಮತ್ತೊಂದು F-35 ಫೈಟರ್ ಜೆಟ್ ಹೊಡೆದು ಉರುಳಿಸಿರುವ ಬಗ್ಗೆ ಇರಾನ್ ಮಾಹಿತಿ ನೀಡಿದೆ.

ಹೌದು ಇರಾನ್ ಸೇನೆ ಮತ್ತೊಂದು ಅಮೆರಿಕ ಯುದ್ಧ ವಿಮಾನ ಹೊಡೆದುರುಳಿಸಿದೆ ಎಂಬ ವಿಚಾರವನ್ನು ಫೋಟೋ ತೋರಿಸಿ ವಾದಿಸುತ್ತಿದೆ. ಇರಾನ್ ಸರ್ಕಾರಿ ಮಾಧ್ಯಮಗಳು ಈ ಬಗ್ಗೆ ವರದಿ ಪ್ರಕಟಿಸಿದ್ದು, ಅಮೆರಿಕ ಸೇನೆಯಲ್ಲಿ ಅತ್ಯಂತ ಶಕ್ತಿಶಾಲಿ ಎಂದು ಕರೆಯಲಾಗುವ F-35 ಫೈಟರ್ ಜೆಟ್‌ಗಳನ್ನೇ ಬಲಿ ಪಡೆಯುತ್ತಿರುವ ಆರೋಪ ಇದು. ಅದರಲ್ಲೂ ಇರಾನ್ & ಅಮೆರಿಕ ನಡುವೆ ಘೋರ ಯುದ್ಧ ಆರಂಭವಾದ 1 ತಿಂಗಳ ಒಳಗೆ ಈವರೆಗೆ ಒಟ್ಟು 2 F-35 ಫೈಟರ್ ಜೆಟ್‌ಗಳು ಪೀಸ್ ಆದಂತಾಗಿದೆ. ಆದರೆ ಇರಾನ್ ಹೀಗೆಲ್ಲಾ ಅಮೆರಿಕ ಸೇನೆಯ ಬಗ್ಗೆ ಸ್ಫೋಟಕ ಮಾಹಿತಿ ನೀಡಿ, ಯುದ್ಧ ವಿಮಾನಗಳನ್ನೇ ನಾಶ ಮಾಡಿರುವ ಹೇಳಿಕೆ ನೀಡಿದರೂ ಈ ಬೆಳವಣಿಗೆ ಕುರಿತು ಅಮೆರಿಕ ಸೂಕ್ತ ಪ್ರತಿಕ್ರಿಯೆ ನೀಡದಿರುವುದು ಅನುಮಾನ ಹೆಚ್ಚಿಸಿದೆ.

ಯುದ್ಧ ವಿಮಾನದ ಪೈಲಟ್ ಕಥೆ?
ಅಂದಹಾಗೆ ಶುಕ್ರವಾರ ಇರಾನ್‌ ಸರ್ಕಾರಿ ಸ್ಥಳೀಯ ವಾಹಿನಿ, ದಕ್ಷಿಣ-ಪಶ್ಚಿಮ ಇರಾನ್‌ನ ಪ್ರದೇಶದಲ್ಲಿ ಅಮೆರಿಕದ ಯುದ್ಧ ವಿಮಾನ ಪೈಲಟ್‌ ವಿಮಾನದಿಂದ ಹೊರಬಿದ್ದಿದ್ದಾರೆ ಎಂದು ತಿಳಿಸಿದೆ. ಈ ಆಧಾರದಲ್ಲಿ ಅಂತಾರಾಷ್ಟ್ರೀಯ ಮಾಧ್ಯಮಗಳು ಸುದ್ದಿ ಪ್ರಕಟಿಸಿದ್ದು, F-35 ಫೈಟರ್ ಜೆಟ್ ಇರಾನ್ ಕೊಟ್ಟ ಏಟಿಗೆ ನೆಲಕ್ಕೆ ಅಪ್ಪಳಿಸಿದೆ ಎನ್ನುವ ಆರೋಪ ಮಾಡಿವೆ. ಅಲ್ಲದೇ ಶತ್ರು ಪಡೆಯ ಫೈಟರ್ ಜೆಟ್ ಪೈಲಟ್‌ ಜೀವಂತವಾಗಿ ಸಿಕ್ಕಿದರೆ ತಕ್ಷಣ ಪೊಲೀಸರಿಗೆ ಒಪ್ಪಿಸಿದವರಿಗೆ ಬಹುಮಾನ ನೀಡಲಾಗುತ್ತದೆ ಎಂಬ ಘೋಷಣೆ ಕೂಡ ಹೊರಡಿಸಿರುವ ಬಗ್ಗೆ ಮಾಹಿತಿ ಹರಿದಾಡ್ತಾ ಇದೆ. ಈ ವಿಚಾರ ಇದೀಗ ಹೊಸ ಕಿಚ್ಚು ಹೊತ್ತಿಸಿದ್ದು, ಭಾರಿ ದೊಡ್ಡ ಚರ್ಚೆಗೆ ಗ್ರಾಸವಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

F-35 ಫೈಟರ್ ಜೆಟ್ ಬೆಲೆ ಬರೋಬ್ಬರಿ 82 ಮಿಲಿಯನ್ ಅಮೆರಿಕನ್ ಡಾಲರ್ ಮೂಲಕ ಆರಂಭವಾಗಿ, ಭರ್ಜರಿ 100 ಮಿಲಿಯನ್ ಡಾಲರ್ ತನಕ ಮುಟ್ಟುತ್ತದೆ. ಅಂದ್ರೆ ಭಾರತದ ರೂಪಾಯಿ ಲೆಕ್ಕದಲ್ಲಿ ಸುಮಾರು 900 ಕೋಟಿ ರೂಪಾಯಿ ಆಸುಪಾಸು ವೆಚ್ಚವಾಗುತ್ತದೆ F-35 ಯುದ್ಧ ವಿಮಾನಗಳಿಗೆ. ಹೀಗಿದ್ದಾಗ ಇರಾನ್ ಸೇನೆ ತನ್ನ ಬಳಿ ಇರುವ ಕೆಲವೇ ಲಕ್ಷ ರೂಪಾಯಿ ಮೌಲ್ಯದ ಆಯುಧಗಳನ್ನು ಬಳಸಿ ಈಗ ದಾಳಿ ಮಾಡುತ್ತಿದೆ ಎಂಬ ವಿಚಾರ ಚರ್ಚೆಯಾಗುತ್ತಿದೆ.

ಯುದ್ಧ ನಿಲ್ಲುವುದು ಕೂಡ ಅನುಮಾನ
ಮತ್ತೊಂದು ಕಡೆ ಈ ಘಟನೆ ವೇಳೆ ಸಂಭವಿಸಿದ ಭಾರೀ ಸ್ಫೋಟದಿಂದ ಪೈಲಟ್‌ ಬದುಕಿರುವ ಸಾಧ್ಯತೆ ಅತೀ ಕಡಿಮೆ ಎಂದು ತಜ್ಞರು ಹೇಳುತ್ತಿದ್ದಾರೆ. ಒಟ್ನಲ್ಲಿ ಇದನ್ನೆಲ್ಲಾ ನೋಡುತ್ತಿದ್ದರೆ ಅಮೆರಿಕ ಸೇನೆ ಈಗ ಇರಾನ್ ವಿರುದ್ಧ ಸಾಲು ಸಾಲು ಆಘಾತ ಎದುರಿಸುತ್ತಿರುವ ರೀತಿ ಕಾಣಿಸುತ್ತಿದೆ. ಮುಂದಿನ ದಿನಗಳಲ್ಲಿ ಯುದ್ಧ ನಿಲ್ಲುತ್ತಾ? ಎಂಬ ಪ್ರಶ್ನೆಗೆ ಇಲ್ಲೇ ಉತ್ತರ ಸಿಗಬಹುದು ಎನ್ನಲಾಗಿತ್ತು, ಆದರೆ ಈಗಿನ ಪರಿಸ್ಥಿತಿ ನೋಡಿದರೆ ಸದ್ಯಕ್ಕೆ ಯುದ್ಧ ನಿಲ್ಲುವ ಯಾವುದೇ ಮುನ್ಸೂಚನೆ ಕೂಡ ಈಗ ಕಾಣಿಸುತ್ತಿಲ್ಲ. ಹಾಗೇ ಅಮೆರಿಕ ಸೇನೆಯ F-35 ಫೈಟರ್ ಜೆಟ್‌ಗಳು ನಾಶವಾಗುತ್ತಿರುವ ಸುದ್ದಿ ಜಗತ್ತಿನ ಮೂಲೆ ಮೂಲೆಯಲ್ಲೂ ಸಂಚಲನ ಸೃಷ್ಟಿ ಮಾಡುತ್ತಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular