HomeLatest NewsBIG NEWS: ಯುದ್ಧದ ನಡುವೆ ಭಾರತಕ್ಕೆ ಬಂತು 45,000 ಮೆಟ್ರಿಕ್ ಟನ್ ಎಲ್ ಪಿಜಿ ಹೊತ್ತ...

BIG NEWS: ಯುದ್ಧದ ನಡುವೆ ಭಾರತಕ್ಕೆ ಬಂತು 45,000 ಮೆಟ್ರಿಕ್ ಟನ್ ಎಲ್ ಪಿಜಿ ಹೊತ್ತ ಶಿವಾಲಿಕ್ ಹಡಗು

ಅಹಮದಾಬಾದ್: ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಯುದ್ಧದ ನಡುವೆಯೇ 45,000 ಮೆಟ್ರಿಕ್ ಟನ್ ಎಲ್ ಪಿಜಿ ಹೊತ್ತ ಶಿವಾಲಿಕ್ ಹಡಗು ಭಾರತಕ್ಕೆ ಆಗಮಿಸಿದೆ. ಗುಜರಾತ್ ನ ಮುಂದ್ರಾ ಬಂದರಿಗೆ ಆಗಮಿಸಿದೆ.

ಈ ಬಗ್ಗೆ ಬಂದರು, ಹಡಗು ಮಾತ್ತು ಜಲಮಾರ್ಗಗಳ ಸಚಿವಲಯ ಮಾಹಿತಿ ನೀಡಿದ್ದು, 92,700 ಮೆಟ್ರಿಕ್ ಟನ್ ಎಲ್ ಪಿಜಿ ಹೊತ್ತ ನಂದಾ ದೇವಿ ಹಾಗೂ ಶಿವಾಲಿಕ್ ಎಂಬ ಎರಡು ಹಡಗುಗಳು ಹೊರ್ಮೆಜ್ ಜಲಸಂಧಿಯನ್ನು ದಾಟಿ ಭಾರತಕ್ಕೆ ಆಗಮಿಸುತ್ತಿವೆ. ಶಿವಾಲಿಕ್ ಮಾರ್ಚ್ 16ರಂದು ಹಾಗೂ ನಂದಾ ದೇವಿ ಮಾರ್ಚ್ 17 ರಂದು ಆಗಮಿಸುವ ನಿರೀಕ್ಷೆ ಇದೆ ಎಂದು ತಿಳಿಸಿತ್ತು. ಅದರಂತೆ ಶಿವಾಲಿಕ್ ಹಡಗು ಭಾರತಕ್ಕೆ ಆಗಮಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇಸ್ರೇಲ್-ಅಮೆರಿಕಾ- ಇರಾನ್ ನಡುವಿನ ಯುದ್ಧದಿಂದಾಗಿ ಅಡುಗೆ ಅನಿಲ ಪೂರೈಕೆಯಲ್ಲಿ ಭಾರಿ ವ್ಯತ್ಯಯ ಉಂಟಾದ ಪರಿಣಾಮ ಭಾರತದಲ್ಲಿ ಜನಸಾಮನ್ಯರ ಬದುಕು, ಹೋಟೆಲ್ ಉದ್ಯಮಗಳು ಸಂಕಷ್ಟಕ್ಕೆ ಸಿಲುಕಿವೆ. ಹಾಸ್ಟೆಲ್, ರೆಸ್ಟೋರೆಂಟ್, ಆಟೋ ಚಾಲಕರು ಕೂಡ ತೊಂದರೆಗೆ ಸಿಲುಕಿದ್ದಾರೆ. ಎಲ್ ಪಿಜಿ ಸರಬರಾಜಿನಲ್ಲಿ ಮತ್ತೆ ವಿಳಂಬವಾದಲ್ಲಿ ಹೋಟೆಲ್ ಉದ್ಯಮಗಳು ಸಂಪೂರ್ಣ ಬಂದ್ ಆಗುವ ಆತಂಕದಲ್ಲಿವೆ. ಇದರ ನಡುವೆಯೇ ಶಿವಾಲಿಕ್ ಹಡಗು 45,000 ಮೆಟ್ರಿಕ್ ಟನ್ ಎಲ್ ಪಿಜಿ ಹೊತ್ತು ತಂದಿದ್ದು, ಕೊಂಚ ನಿರಾವಾದಂತಾಗಿದೆ.

ಮಾರ್ಚ್ 17ರಂದು ಮತ್ತೊಂದು ಹಡಗು ನಂದಾ ದೇವಿ ಕಾಂದ್ಲಾ ಬಂದರಿಗೆ ಆಗಮಿಸಲಿದೆ. ಇದರಿಂದ ಎಲ್ ಪಿಜಿ ಸಿಲಿಂಡರ್ ಸಮಸ್ಯೆ ಸ್ವಲ್ಪ ಮಟ್ಟಿಗೆ ಪರಿಹಾರವಾಗುವ ನಿರೀಕ್ಷೆ ಇದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular