ಇಸ್ರೇಲ್–ಇರಾನ್ ನಡುವಿನ ಉದ್ವಿಗ್ನ ಪರಿಸ್ಥಿತಿ ಕಾರಣ ವಿಮಾನಗಳ ಹಾರಾಟ ರದ್ದಾಗಿದೆ. ವಿವಿಧ ದೇಶಗಳು ತಮ್ಮ ವಾಯು ಪ್ರದೇಶದಲ್ಲಿ ವಿಮಾನಗಳ ಹಾರಾಟ ನಿರ್ಬಂಧಿಸಿವೆ. ಯಾವಾಗ ವಿಮಾನ ಹಾರಾಟ ಪುನಃ ಪ್ರಾರಂಭವಾಗಲಿದೆ? ಎಂಬುದು ಇನ್ನೂ ತಿಳಿದುಬಂದಿಲ್ಲ.
ದುಬೈ ಸೇರಿದಂತೆ ವಿವಿಧ ದೇಶಗಳಲ್ಲಿ ಸಿಲುಕಿರುವ ಜನರ ನೆರವಿಗೆ ಚಾಮರಾಜನಗರ ಜಿಲ್ಲಾಡಳಿತ ತುರ್ತು ಸಹಾಯವಾಣಿ ತೆರೆದಿದೆ. ಮಧ್ಯಪ್ರಾಚ್ಯ ಪ್ರದೇಶದ ಇತ್ತೀಚಿನ ಬಿಕ್ಕಟ್ಟು ಹಿನ್ನೆಲೆಯಲ್ಲಿ ಅಲ್ಲಿ ಸಿಲುಕಿರುವ ಜಿಲ್ಲೆ ನಿವಾಸಿಗಳಿಗಾಗಿ 24/7 ತುರ್ತು ಸಹಾಯವಾಣಿ ಕಾರ್ಯಾಚರಣೆ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಜಿಲ್ಲಾಡಳಿತ ಹೇಳಿದೆ.
- ಚಾಮರಾಜನಗರ DEOC: 08226-223160 / 223161 / 223163
- ಮೊಬೈಲ್ 9740942901
- ರಾಜ್ಯ ಕಾರ್ಯಾಚರಣೆ ಕೇಂದ್ರ: 1070
- ಟೋಲ್-ಫ್ರೀ 080-22340676/ 22253707
ದಯವಿಟ್ಟು ಸ್ಥಳೀಯ ಸರ್ಕಾರದ ಸುರಕ್ಷತಾ ಸೂಚನೆಗಳನ್ನು ಪಾಲಿಸಿ ಹಾಗೂ ಸಂಕಷ್ಟದಲ್ಲಿದ್ದಲ್ಲಿ ಭಾರತೀಯ ರಾಯಭಾರಿ ಕಚೇರಿ ಅಥವಾ Sarthi Sahayata ಪೋರ್ಟಲ್‌ನಲ್ಲಿ ನೋಂದಣಿ ಮಾಡಿಕೊಳ್ಳಿ ಎಂದು ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದಾರೆ.

