HomeKarnatakaBREAKING: ಐಪಿಎಲ್ ಟಿಕೆಟ್ ಕಾಳಸಂತೆಯಲ್ಲಿ ಮಾರಾಟ: 10 ಆರೋಪಿಗಳು ಅರೆಸ್ಟ್

BREAKING: ಐಪಿಎಲ್ ಟಿಕೆಟ್ ಕಾಳಸಂತೆಯಲ್ಲಿ ಮಾರಾಟ: 10 ಆರೋಪಿಗಳು ಅರೆಸ್ಟ್

ಬೆಂಗಳೂರು: ಕಾಳಸಂತೆಯಲ್ಲಿ ಐಪಿಎಲ್ ಟಿಕೆಟ್ ಮಾರಾಟ ಮಾಡುತ್ತಿದ್ದ 10 ಆರೋಪಿಗಳನ್ನು ಬೆಂಗಳುರಿನ ಕಬ್ಬನ್ ಪಾರ್ಕ್ ಪೊಲೀಸರು ಬಂಧಿಸಿದ್ದಾರೆ.

ಶುಕ್ರವಾರ ಚಿನ್ನಸ್ವಾಮಿ ಸ್ಟೇಡಿಯಂ ನಲ್ಲಿ ನಡೆದ ಆರ್ ಸಿಬಿ, ಜಿಟಿ ಪಂದ್ಯದ ಒಂದೇ ಮ್ಯಾಚ್ ಸಂಬಂಧ ಕಾಳಸಂತೆಯಲ್ಲಿ ಅಕ್ರಮವಾಗಿ ಟಿಕೆಟ್ ಮಾರಾಟದ ಬಗ್ಗೆ ಕಬ್ಬನ್ ಪಾರ್ಕ್ ಠಾಣೆಯಲ್ಲಿ ೭ ಎಫ್ ಐ ಆರ್ ದಾಖಲಾಗಿತ್ತು.

ಬ್ಲಾಕ್ ನಲ್ಲಿ ಟಿಕೆಟ್ ಮಾರಾಟ ಮಾಡಿದ್ದ 10 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳ ಬಳಿ ಇದ್ದ 19 ಐಪಿಎಲ್ ಟಿಕೆಟ್ ಗಳನ್ನು ವಶಕ್ಕೆ ಪಡೆಯಲಾಗಿದೆ. ಕೆ ಎಸ್ ಸಿ ಎ ಸದಸ್ಯರಿಗೆ ನೀಡಿದ್ದ ಕಾಂಪ್ಲಿಮೆಂಟರಿ ಟಿಕೆಟ್ ಗಳೇ ಮಾರಾಟವಾಗಿದ್ದವು. ಕಾಂಪ್ಲಿಮೆಂಟರಿ ಟಿಕೆಟ್ ಮೇಲೆ ಹಣ ನಮೂದು ಅಥವಾ ಸೊನ್ನೆ ಎಂದು ಬರೆದಿರುತ್ತದೆ. ತಮ್ಮಲ್ಲಿರುವ ಟಿಕೆಟ್ ಮೌಲ್ಯದ ಅರಿವಿಲ್ಲದೇ ಆರೋಪಿಗಳು ಈ ಟೆಕೆಟ್ ಗಳನ್ನು ಮಾರಾಟ ಮಾಡಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

P3 ಸ್ಟ್ಯಾಂಡ್ ನ 30-40 ಸಾವಿರ ಬೆಲೆಯ ಟಿಕೆಟ್ 8-10 ಸಾವಿರಕ್ಕೆ ಮಾರಾಟ ಮಾಡಿದ್ದರು. ಇನ್ನೊಂದೆಡೆ 4-5 ಸಾವಿರ ಮೌಲ್ಯದ ಟಿಕೆಟ್ ನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಿದ್ದರು. ಆನ್ ಲೈನ್ ನಲ್ಲಿ ಟಿಕೆಟ್ ಖರೀದಿಸ್ ಸ್ಥಳದಲ್ಲಿ ಹೆಚ್ಚಿನ ಬೆಲೆ ಮಾರಾಟ ಮಾಡಿದ್ದರು.

ಮಫ್ತಿಯಲ್ಲಿ ಟಿಕೆಟ್ ಖರೀದಿಸುವವರ ಸೋಗಿನಲ್ಲಿ ಬಂದ ಪೊಲೀಸರು ಕಾರ್ಯಾಚರಣೆ ನಡೆಸಿ 10 ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಪ್ರದೀಪ್, ಸಾಗರ್, ಕಿರಣ್, ಜೀವನ್, ಭರತೇಶ್, ಶಶಿಕುಮಾರ್, ಸೋನು, ಕುಮಾರ್, ಶ್ರೀಕಾಂತ್ ಹಾಗೂ ಕಿರಣ್ ಬಂಧಿತ ಆರೋಪಿಗಳು. ಆರೋಪಿಗಳಿಗೆ ಟಿಕೆಟ್ ನೀಡಿದವರ ಬಗ್ಗೆ ಪೊಲೀಸರಿಂದ ತನಿಖೆ ಮುಂದುವರೆದಿದೆ

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular