ಬೆಳಗಾವಿ: ಐಪಿಎಲ್ ಬೆಟ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಕ್ಕಿಯೋರ್ವನನ್ನು ಬೆಳಗಾವಿ ಕ್ಯಾಂಪ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಸಾಹಿಲ್ ಪಾಟೀಲ್ ಬಂಧಿತ ಆರೋಪಿ. ಆರ್ ಆರ್-ಡಿಸಿ ಪಂದ್ಯದ ಮೇಲೆ ಬೆಟ್ಟಿಂಗ್ ಪಡೆಯುತ್ತಿದ್ದ. ಸಾಹಿಲ್ ಪಾಟೀಲ್ ಬೆಳಗಾವಿಯ ಶಾಸ್ತ್ರಿನಗರದ ನಿವಾಸಿ. ಈ ಬಗ್ಗೆ ಬೆಳಗವೈ ಕ್ಯಾಂಫ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಸದ್ಯ ಬಂಧಿತ ಆರೋಪಿಯಿಂದ ಒಂದು ಮೊಬೈಲ್, 12,900 ರೂಪಾಯಿ ವಶಕ್ಕೆ ಪಡೆಯಲಾಗಿದೆ. ಮೊಬೈಲ್ ನಲ್ಲಿಯೇ ಪ್ರತಿಕ್ಷಣ ಆಟದ ಬೆಟ್ಟಿಂಗ್ ಪಡೆಯುತ್ತಿದ್ದ ಆರೋಪಿ ಎಂಬುದು ಬಯಲಾಗಿದೆ. ಪ್ರಕರಣದಲ್ಲಿ ಮತ್ತೋರ್ವ ಆರೋಪಿಯಿದ್ದು, ಆತನಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

