HomeIndiaBREAKING: ರಣ ಬಿಸಿಲ ಝಳಕ್ಕೆ ಮತ್ತೋರ್ವ ವ್ಯಕ್ತಿ ಬಲಿ: ಉರುಸ್ ಮುಗಿಸಿ ವಾಪಸ್ ಆಗುವಾಗ ಕುಸಿದು...

BREAKING: ರಣ ಬಿಸಿಲ ಝಳಕ್ಕೆ ಮತ್ತೋರ್ವ ವ್ಯಕ್ತಿ ಬಲಿ: ಉರುಸ್ ಮುಗಿಸಿ ವಾಪಸ್ ಆಗುವಾಗ ಕುಸಿದು ಬಿದ್ದು ಸಾವು

ಹೈದರಾಬಾದ್: ರಣಬಿಸಿಲ ಹೊಡೆತಕ್ಕೆ ಜಗಳೂರು ಮೂಲದ ವ್ಯಕ್ತಿಯೊಬ್ಬರು ಆಂಧ್ರಪ್ರದೇಶದ ಆದೋನಿಯಲ್ಲಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ಚಿತ್ರದುರ್ಗ ಜಿಲ್ಲೆಯ ಜಗಳೂರು ಮೂಲದ ಫಯಾಜ್ ಮೃತ ದುರ್ದೈವಿ. ಬಿಸಿಲ ಝಳದಿಂದ ಕುಸ್ದು ಬಿದ್ದು ಕೊನೆಯುಸಿರೆಳೆದಿದ್ದಾರೆ. ಕುಟುಂಬದವರ ಜೊತೆಗೆ ಫಯಾಜ್, ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಆದೋನಿಯ ಗುಡಿಕಲ್ ದರ್ಗಾದ ಉರುಸ್ ಗೆ ತೆರಳಿದ್ದರು.

ಉರುಸ್ ಮುಗಿಸಿಕೊಂಡು ವಾಪಾಸ್ ಆಗುವಾಗ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ರಣ ಬಿಸಿಲ ಝಳದಿಂದಾಗಿ ಕುಸಿದು ಬಿದ್ದು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ದೇಶಾದ್ಯಂತ ತಾಪಮಾನ ಹೆಚ್ಚುತ್ತಿದ್ದು, ಕೆಲವೆಡೆ ಗುಡುಗು ಸಹಿತ ಭಾರಿ ಮಳೆಯಾಗುತ್ತಿದ್ದರೂ ಉಷ್ಣ ಗಾಳಿ ಮಾತ್ರ ಕಡಿಮೆಯಾಗಿಲ್ಲ. ಬಿಸಿ ಗಾಳಿ, ಸುಡು ಬಿಸಿಲಿನಿಂದಾಗಿ ಸಾವು-ನೋವಿನ ವರದಿಯಾಗುತ್ತಿದೆ. ತಾಪಮಾನ ಹೆಚ್ಚುತ್ತಿರುವುದರಿಂದ ಸುಡು ಬಿಸಿಲಿನ ವೇಳೆ ಅನಗತ್ಯವಾಗಿ ಮನೆಯಿಂದ ಹೊರ ಹೋಗುವುದನ್ನು ತಪ್ಪಿಸುವುದು ಒಳಿತು ಎಂದು ಈಗಾಗಲೇ ಹವಾಮಾನ ಇಲಾಖೆ ಕೂಡ ಮುನ್ಸೂಚನೆ ನೀಡಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular