HomeIPL 2026ವೈಭವ್ ವಿಕೆಟ್ ಪಡೆದು ಕಿರುಚಿದ ಜೇಮಿಸನ್‌ಗೆ ದಂಡ ಹಾಕಿದ ಬಿಸಿಸಿಐಗೆ ಎಲ್ಲರ ಮೇಲೂ ಮನಬಂದಂತೆ ಕಿರುಚುವ...

ವೈಭವ್ ವಿಕೆಟ್ ಪಡೆದು ಕಿರುಚಿದ ಜೇಮಿಸನ್‌ಗೆ ದಂಡ ಹಾಕಿದ ಬಿಸಿಸಿಐಗೆ ಎಲ್ಲರ ಮೇಲೂ ಮನಬಂದಂತೆ ಕಿರುಚುವ ಕೊಹ್ಲಿಗೆ ದಂಡ ಹಾಕುವ ಧೈರ್ಯ ಇಲ್ವಾ?

ನಿನ್ನೆ ( ಮೇ 1 ) ಜೈಪುರದ ಸವಾಯಿ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026ರ ಲೀಗ್ ಹಂತದ 43ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ 7 ವಿಕೆಟ್‌ಗಳ ಭರ್ಜರಿ ಗೆಲುವನ್ನು ಸಾಧಿಸಿತು.

ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 225 ರನ್ ಬಾರಿಸಿ ಡೆಲ್ಲಿ ಕ್ಯಾಪಿಟಲ್ಸ್‌ಗೆ 226 ರನ್‌ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ 19.1 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 226 ರನ್ ಬಾರಿಸಿತು.

ಇನ್ನು ರಾಜಸ್ಥಾನ್ ರಾಯಲ್ಸ್ ಇನ್ನಿಂಗ್ಸ್ ವೇಳೆ ಡೆಲ್ಲಿ ಕ್ಯಾಪಿಟಲ್ಸ್ ಬೌಲರ್ ಕೈಲ್ ಜೇಮಿಸನ್ ವೈಭವ್ ಸೂರ್ಯವಂಶಿ ವಿಕೆಟ್ ಪಡೆದು ಮಾಡಿದ ಸೆಲೆಬ್ರೇಷನ್ ಸದ್ಯ ವಿವಾದಕ್ಕೀಡಾಗಿದೆ. ತಾನು ಮಾಡಿದ ಎರಡನೇ ಓವರ್‌ನ ಐದನೇ ಎಸೆತದಲ್ಲಿ ವೈಭವ್ ಕ್ಲೀನ್ ಬೌಲ್ಡ್ ಮಾಡಿದ ಕೈಲ್ ಜೇಮಿಸನ್ ವೈಭವ್ ನೋಡುತ್ತಾ ಕಿರುಚಿ ಚಪ್ಪಾಳೆ ತಟ್ಟಿ ಸಂಭ್ರಮಿಸಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇದರ ವಿರುದ್ಧ ಕ್ರಮ ಕೈಗೊಂಡಿರುವ ಬಿಸಿಸಿಐ ಕೈಲ್ ಜೇಮಿಸನ್‌ಗೆ ಎರಡು ಡಿಮೆರಿಟ್ ಪಾಯಿಂಟ್ ದಂಡ ವಿಧಿಸಿದ್ದು ಮಾತ್ರವಲ್ಲದೆ ಇಂತಹ ಸೆಲೆಬ್ರೇಷನ್ ಮಾಡದಂತೆ ಎಚ್ಚರಿಕೆ ನೀಡಿದೆ.

ಹೀಗೆ ಜೇಮಿಸನ್‌ ಮಾಡಿದ ಸಂಭ್ರಮಾಚರಣೆ ವಿರುದ್ಧ ಬಿಸಿಸಿಐ ಕ್ರಮ ಕೈಗೊಳ್ಳುತ್ತಿದ್ದಂತೆ ಈ ಕುರಿತು ಪ್ರತಿಕ್ರಿಯಿಸಿರುವ ಹಲವು ನೆಟ್ಟಿಗರು ವಿರಾಟ್ ಕೊಹ್ಲಿಯನ್ನು ಎಳೆದುತಂದು ಬಿಸಿಸಿಐಗೆ ಕೌಂಟರ್ ಕೊಟ್ಟಿದ್ದಾರೆ.

ಕೇವಲ ಚಪ್ಪಾಳೆ ತಟ್ಟಿ ಕಿರುಚಿ ಸಂಭ್ರಮಿಸಿದ ಜೇಮಿಸನ್ ಮೇಲೆ ಕ್ರಮ ಕೈಗೊಳ್ಳುವ ನಿಮಗೆ ಎಲ್ಲ ಆಟಗಾರರ ವಿಕೆಟ್ ಉರುಳಿದಾಗ ಇದಕ್ಕಿಂತ ಹೆಚ್ಚು ಕಿರುಚಿ ಅತಿರೇಕದ ವರ್ತನೆ ತೋರುವ ಕೊಹ್ಲಿ ವಿರುದ್ಧ ಕ್ರಮ ಕೈಗೊಳ್ಳುವ ಧೈರ್ಯ ಇಲ್ವಾ ಎಂದು ಪ್ರಶ್ನಿಸಿದ್ದಾರೆ.

ಇತ್ತೀಚೆಗಷ್ಟೆ ಕೆಎಲ್ ರಾಹುಲ್ ವಿಕೆಟ್ ಪಡೆದಾಗ ರಾಹುಲ್ ಸಮೀಪ ಬಂದು ಕಿರುಚಾಡಿದ್ದ ಕೊಹ್ಲಿ ಗಿಲ್ ಕ್ಯಾಚ್ ಪಡೆದು ನೆಲಕ್ಕೆ ಚೆಂಡನ್ನು ಕುಕ್ಕಿ ಕೂಗಾಡಿದ್ದರು. ಈ ಎರಡೂ ಸಂಭ್ರಮಾಚರಣೆಗೆ ಹೋಲಿಸಿದರೆ ಜೇಮಿಸನ್ ಮಾಡಿದ ಸಂಭ್ರಮಾಚರಣೆ ಏನೇನೂ ಇಲ್ಲ ಎಂದೇ ಹೇಳಬಹುದು.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular