HomeIPL 2026IPL 2026: 256 ರನ್ ಗುರಿ ನೀಡಿ ಸನ್‌ರೈಸರ್ಸ್ ರೌದ್ರಾವತಾರ; ಇಷ್ಟು ರನ್‌ಗಳಿಂದ ಸೋತರೆ 3ನೇ...

IPL 2026: 256 ರನ್ ಗುರಿ ನೀಡಿ ಸನ್‌ರೈಸರ್ಸ್ ರೌದ್ರಾವತಾರ; ಇಷ್ಟು ರನ್‌ಗಳಿಂದ ಸೋತರೆ 3ನೇ ಸ್ಥಾನಕ್ಕೆ ಕುಸಿಯಲಿದೆ ಆರ್‌ಸಿಬಿ!

19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಹಂತದ 67ನೇ ಪಂದ್ಯ ಇಂದು ( ಮೇ 22 ) ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಿವೆ.

ಪಂದ್ಯದಲ್ಲಿ ಟಾಸ್ ಗೆದ್ದಿರುವ ಸನ್ ರೈಸರ್ಸ್ ಹೈದರಾಬಾದ್ ಬ್ಯಾಟಿಂಗ್ ಆರಿಸಿಕೊಂಡು 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 255 ರನ್ ಕಲೆಹಾಕಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ 256 ರನ್‌ಗಳ ಗುರಿಯನ್ನು ನೀಡಿ ರೌದ್ರಾವತಾರ ಪ್ರದರ್ಶಿಸಿತು.

ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಪಂದ್ಯದನ್ನು ಗೆದ್ದರೆ ಅಂಕಪಟ್ಟಿಯಲ್ಲಿ ಮೊದಲನೇ ಸ್ಥಾನದಲ್ಲೇ ಮುಂದುವರಿಯಲಿದ್ದು, 166 ರನ್‌ಗಳನ್ನು ಬಾರಿಸಿದರೆ ಟಾಪ್ 2 ಸ್ಥಾನದಲ್ಲಿ ಉಳಿದುಕೊಳ್ಳಲಿದೆ. ಒಂದು ವೇಳೆ ಇದಕ್ಕಿಂತ ಕಡಿಮೆ ಮೊತ್ತಕ್ಕೆ ಆಲ್‌ಔಟ್ ಆದರೆ ಅಥವಾ ಕಡಿಮೆ ರನ್ ಗಳಿಸಿದರೆ ಆರ್‌ಸಿಬಿ ಮೂರನೇ ಸ್ಥಾನಕ್ಕೆ ಕುಸಿಯಲಿದೆ. ಅಂದರೆ ಆರ್‌ಸಿಬಿ ಯಾವುದೇ ಕಾರಣಕ್ಕೂ ರನ್‌ಗಳ ಅಂತರದ ಸೋಲನ್ನು ಕಾಣಬಾರದು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ತಂಡದ ಪರ ಎಂದಿನಂತೆ ಅಭಿಷೇಕ್ ಶರ್ಮಾ ಹಾಗೂ ಟ್ರಾವಿಸ್ ಹೆಡ್ ಆರಂಭಿಕರಾಗಿ ಕಣಕ್ಕಿಳಿದರು. ಮೊದಲ ಓವರ್‌ನಿಂದಲೇ ಉತ್ತಮ ಆರಂಭ ಮಾಡಿದ ಈ ಜೋಡಿ 4 ಓವರ್‌ಗಳಲ್ಲಿ 45 ರನ್ ಬಾರಿಸಿ ಟ್ರಾವಿಸ್ ಹೆಡ್ ವಿಕೆಟ್ ಕಳೆದುಕೊಳ್ಳುವ ಮೂಲಕ ಜತೆಯಾಟವನ್ನು ಅಂತ್ಯಗೊಳಿಸಿತು. ಹೆಡ್ 16 ಎಸೆತಗಳಲ್ಲಿ 26 ರನ್ ಬಾರಿಸಿದರೆ, ಅಭಿಷೇಕ್ ಶರ್ಮಾ 22 ಎಸೆತಗಳಲ್ಲಿ 56 ರನ್ ಬಾರಿಸಿದರು. ಮೂರನೇ ವಿಕೆಟ್‌ಗೆ ಜತೆಯಾದ ಇಶಾನ್ ಕಿಶನ್ ಹಾಗೂ ಹೆನ್ರಿಕ್ ಕ್ಲಾಸೆನ್ ಜೋಡಿ 48 ಎಸೆತಗಳಲ್ಲಿ 113 ರನ್ ಚಚ್ಚಿ ಅಬ್ಬರಿಸಿತು. ಕ್ಲಾಸೆನ್ 24 ಎಸೆತಗಳಲ್ಲಿ 51 ರನ್ ಬಾರಿಸಿದರೆ, ಇಶಾನ್ ಕಿಶನ್ 46 ಎಸೆತಗಳಲ್ಲಿ 79 ರನ್ ಬಾರಿಸಿ ಅಬ್ಬರಿಸಿದರು ಹಾಗೂ ನಿತಿಶ್ ಕುಮಾರ್ ರೆಡ್ಡಿ 12 ಎಸೆತಗಳಲ್ಲಿ ಅಜೇಯ 29 ರನ್ ಚಚ್ಚಿದರು.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular