HomeSportsಐಪಿಎಲ್ ಮೈದಾನದಲ್ಲಿ ಶೆಹನಾಜ್ ಗಿಲ್ ಹವಾ: ಕನ್ನಡಿಗ ದೇವದತ್ ಪಡಿಕ್ಕಲ್ ಜೊತೆ ಡೇಟಿಂಗ್ ವದಂತಿ ನಿಜವೇ?

ಐಪಿಎಲ್ ಮೈದಾನದಲ್ಲಿ ಶೆಹನಾಜ್ ಗಿಲ್ ಹವಾ: ಕನ್ನಡಿಗ ದೇವದತ್ ಪಡಿಕ್ಕಲ್ ಜೊತೆ ಡೇಟಿಂಗ್ ವದಂತಿ ನಿಜವೇ?

ಐಪಿಎಲ್ ಕ್ರಿಕೆಟ್ ಮತ್ತು ಚಿತ್ರರಂಗದ ನಡುವಿನ ನಂಟು ಹಳೆಯದು. ಸದ್ಯ ಐಪಿಎಲ್ 2026ರ ಕಳೆ ಏರಿರುವ ಬೆನ್ನಲ್ಲೇ, ಸಿನಿತಾರೆಯರು ಮತ್ತು ಕ್ರಿಕೆಟಿಗರ ನಡುವಿನ ಡೇಟಿಂಗ್ ವದಂತಿಗಳು ಮತ್ತೆ ಮುನ್ನೆಲೆಗೆ ಬಂದಿವೆ. ಈ ಬಾರಿ ಈ ಚರ್ಚೆಯ ಕೇಂದ್ರಬಿಂದುವಾಗಿರುವುದು ಪಂಜಾಬಿ ಮೂಲದ ನಟಿ ಶೆಹನಾಜ್ ಗಿಲ್ ಹಾಗೂ ಕನ್ನಡಿಗ ಕ್ರಿಕೆಟಿಗ ದೇವದತ್ ಪಡಿಕ್ಕಲ್.

ರಾಯ್‌ಪುರದಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ ಸಿಬಿ) ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ನಡುವಿನ ರೋಚಕ ಪಂದ್ಯಕ್ಕೆ ಶೆಹನಾಜ್ ಗಿಲ್ ಸಾಕ್ಷಿಯಾಗಿದ್ದರು. ಸ್ಟೇಡಿಯಂನಲ್ಲಿ ಕುಳಿತು ಅತ್ಯಂತ ಉತ್ಸಾಹದಿಂದ ಆರ್ ಸಿಬಿ ತಂಡವನ್ನು ಬೆಂಬಲಿಸುತ್ತಿದ್ದ ಶೆಹನಾಜ್ ಅವರ ವಿಡಿಯೋಗಳು ಮತ್ತು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿವೆ. ಶೆಹನಾಜ್ ಅವರು ಆರ್ ಸಿಬಿ ತಂಡವನ್ನು ಇಷ್ಟೊಂದು ಜೋಶ್‌ನಿಂದ ಬೆಂಬಲಿಸಲು ಕಾರಣ ಅವರು ದೇವದತ್ ಪಡಿಕ್ಕಲ್ ಅವರೊಂದಿಗೆ ಡೇಟಿಂಗ್ ನಡೆಸುತ್ತಿರುವುದೇ ಇರಬಹುದು ಎಂದು ನೆಟ್ಟಿಗರು ಊಹಿಸುತ್ತಿದ್ದಾರೆ.

ಇನ್ಸ್ಟಾಗ್ರಾಮ್‌ನಲ್ಲಿ ತಾವೇ ಹಂಚಿಕೊಂಡಿರುವ ವಿಡಿಯೋದಲ್ಲಿ ಶೆಹನಾಜ್ ಆರ್ ಸಿಬಿ ಪರವಾಗಿ ಘೋಷಣೆಗಳನ್ನು ಕೂಗುತ್ತಾ ಸಂಭ್ರಮಿಸಿದ್ದಾರೆ. ಇದು ಸಹಜವಾಗಿಯೇ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಆದರೆ, ಈ ವದಂತಿಗಳ ಬೆನ್ನಲ್ಲೇ ಶೆಹನಾಜ್ ಪರವಾಗಿ ಕೆಲವರು ಬ್ಯಾಟಿಂಗ್ ನಡೆಸಿದ್ದಾರೆ. ಪ್ರಸಿದ್ಧ ವ್ಯಕ್ತಿಗಳು ಸ್ಟೇಡಿಯಂಗೆ ಬಂದು ಪಂದ್ಯ ವೀಕ್ಷಿಸುವುದು ಮತ್ತು ನೆಚ್ಚಿನ ತಂಡವನ್ನು ಬೆಂಬಲಿಸುವುದು ಸಹಜ. ಅವರಿಗೆ ವಿರಾಟ್ ಕೊಹ್ಲಿ ಅಂದರೆ ಇಷ್ಟ, ಹಾಗಾಗಿ ಅವರು ಬಂದಿರಬಹುದು. ಸಣ್ಣ ವಿಷಯಗಳಿಗೂ ಡೇಟಿಂಗ್ ಪಟ್ಟ ಕಟ್ಟುವುದು ಸರಿಯಲ್ಲ ಎಂದು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಗಮನಾರ್ಹ ಅಂಶವೆಂದರೆ, ಶೆಹನಾಜ್ ಗಿಲ್ ಮತ್ತು ದೇವದತ್ ಪಡಿಕ್ಕಲ್ ಇಬ್ಬರೂ ಇನ್ಸ್ಟಾಗ್ರಾಮ್‌ನಲ್ಲಿ ಪರಸ್ಪರ ಫಾಲೋ ಮಾಡುತ್ತಿಲ್ಲ. ಈ ಡೇಟಿಂಗ್ ಸುದ್ದಿಯ ಬಗ್ಗೆ ಇಬ್ಬರೂ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ. ರಾಯ್‌ಪುರದಲ್ಲಿ ಶೆಹನಾಜ್ ಅವರು ಮಾಜಿ ಕ್ರಿಕೆಟಿಗ ರವಿಶಾಸ್ತ್ರಿ ಅವರನ್ನು ಸಹ ಭೇಟಿ ಮಾಡಿ ಫೋಟೋ ಹಂಚಿಕೊಂಡಿದ್ದಾರೆ. ಒಟ್ಟಿನಲ್ಲಿ ಈ “ಗಾಸಿಪ್” ಎಷ್ಟು ನಿಜ ಎಂಬುದು ಮುಂದಿನ ದಿನಗಳಲ್ಲಿ ತಿಳಿಯಬೇಕಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular