ನಿನ್ನೆ ( ಮೇ 24 ) ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಐಪಿಎಲ್ 2026ರ ಲೀಗ್ ಹಂತದ 69ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ 30 ರನ್‌ಗಳ ಗೆಲುವನ್ನು ದಾಖಲಿಸುವ ಮೂಲಕ ಪ್ಲೇಆಫ್‌ಗೆ ಪ್ರವೇಶ ಪಡೆದುಕೊಂಡಿತು.
ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ಬೌಲಿಂಗ್ ಆರಿಸಿಕೊಂಡು ರಾಜಸ್ಥಾನ್ ರಾಯಲ್ಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಅದರಂತೆ ರಾಜಸ್ಥಾನ್ ರಾಯಲ್ಸ್ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 205 ರನ್ ಕಲೆಹಾಕಿ ಮುಂಬೈ ಇಂಡಿಯನ್ಸ್ ತಂಡಕ್ಕೆ 206 ರನ್‌ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲವಾದ ಮುಂಬೈ ಇಂಡಿಯನ್ಸ್ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 175 ರನ್ ಗಳಿಸಿತು.
ಈ ಮೂಲಕ ರಾಜಸ್ಥಾನ್ ರಾಯಲ್ಸ್ ಆರ್‌ಸಿಬಿ, ಗುಜರಾತ್ ಟೈಟನ್ಸ್ ಹಾಗೂ ಸನ್ ರೈಸರ್ಸ್ ಹೈದರಾಬಾದ್ ಬಳಿಕ ರಾಜಸ್ಥಾನ್ ರಾಯಲ್ಸ್ ಪ್ಲೇಆಫ್ ಸುತ್ತಿಗೆ ಲಗ್ಗೆ ಇಟ್ಟಿದೆ.
ಇನ್ನು ಕೇವಲ ಒಂದು ಅಂಕದ ಅಂತರದಿಂದ ಪ್ಲೇಆಫ್ ಕೈತಪ್ಪಿಸಿಕೊಂಡ ಪಂಜಾಬ್ ಕಿಂಗ್ಸ್ ತಂಡ ಸಾಮಾಜಿಕ ಜಾಲತಾಣದಲ್ಲಿ ತನ್ನದೇ ಅತಿಯಾದ ಹಳೆಯ ವರ್ತನೆಗಳಿಂದ ಟ್ರೋಲ್‌ಗೀಡಾಗಿದೆ.
ಮೊದಲಿಗೆ ಏಪ್ರಿಲ್ 28ರಂದು ಪಂಜಾಬ್ ಕಿಂಗ್ಸ್ ತಂಡ ರಾಜಸ್ಥಾನ್ ರಾಯಲ್ಸ್ ವಿರುದ್ಧ ಗೆಲುವು ಕಂಡಿತ್ತು. ಈ ವೇಳೆ ರಾಜಸ್ಥಾನ್ ರಾಯಲ್ಸ್ ತಂಡ ತನ್ನ ವಿರುದ್ಧ ಪಂಜಾನ್ ಮಾಡಿದ್ದ ಟ್ರೋಲ್‌ಗಳಿಗೆ ಟಕ್ಕರ್ ಕೊಟ್ಟಿತ್ತು. ಈ ಹಿಂದೆ ಸಲ್ಮಾನ್ ಖಾನ್ ‘ಪ್ರೀತಿ ಜಿಂಟಾ ಟೀಮ್ ಗೆಲ್ತಾ ಇಲ್ವಾ?’ ಎಂದು ರಾತ್ರೋರಾತ್ರಿ ಮಾಡಿದ್ದ ಟ್ವೀಟ್ ಅನ್ನು ಪುನಃ ಶೇರ್ ಮಾಡಿ ‘ಇಲ್ಲ ಭಾಯ್ ಈ ದಿನ ಆಗಲಿಲ್ಲ’ ಎಂದು ತಾವು ಪಂಜಾಬ್ ಸೋಲಿಸಿದ್ದಾಗಿ ಕಾಲೆಳೆದಿದ್ದರು.
ಇದರಿಂದ ಕುಪಿತಗೊಂಡ ಪಂಜಾಬ್ ಕಿಂಗ್ಸ್ ರಾಜಸ್ಥಾನ್ ರಾಯಲ್ಸ್ ತಂಡವು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೋತಾಗ ಇದೇ ರೀತಿಯ ಟ್ವೀಟ್ ಮಾಡಿ ಕಾಲೆಳೆದಿತ್ತು. ‘ಇಲ್ಲ ಭಾಯ್ ಈ ದಿನ ಸಾಧ್ಯವಾಗಲಿಲ್ಲ’ ಎಂದು ರಾಜಸ್ಥಾನ್ ರೀತಿಯೇ ಕೌಂಟರ್ ಕೊಟ್ಟಿತ್ತು. ಈ ಟ್ವೀಟ್‌ಗೆ ಈಗ ಕೌಂಟರ್ ಕೊಟ್ಟಿರುವ ರಾಜಸ್ಥಾನ್ ರಾಯಲ್ಸ್ ನಟ ಅರ್ಜುನ್ ಕಪೂರ್ ಮನೆಯೊಳಗೆ ಎಲ್ಲರನ್ನೂ ಕಳುಹಿಸಿ ಕೊನೆಗೆ ತಾನೇ ಉಳಿದುಕೊಳ್ಳುವ ವಿಡಿಯೊವನ್ನು ಹಂಚಿಕೊಂಡು ‘ನಮ್ ಹತ್ರ ಇದೆಲ್ಲ ಇಟ್ಕೋಬೇಡಿ’ ಎಂದು ಬರೆದುಕೊಂಡು ಟೂರ್ನಿಯಿಂದ ಹೊರಬಿದ್ದಿದ್ದನ್ನು ಸಂಭ್ರಮಿಸಿ ಪಂಜಾಬ್‌ನ ಕಾಲೆಳೆದಿದೆ.

