HomeIPL 2026IPL 2026: ಪಂಜಾಬ್ vs ಹೈದರಾಬಾದ್ ಪಂದ್ಯದಲ್ಲಿ ಯಾರು ಗೆದ್ದರೆ ಆರ್‌ಸಿಬಿಗೆ ಲಾಭ? ಈ ತಂಡಕ್ಕೆ...

IPL 2026: ಪಂಜಾಬ್ vs ಹೈದರಾಬಾದ್ ಪಂದ್ಯದಲ್ಲಿ ಯಾರು ಗೆದ್ದರೆ ಆರ್‌ಸಿಬಿಗೆ ಲಾಭ? ಈ ತಂಡಕ್ಕೆ ಆರ್‌ಸಿಬಿ ಫ್ಯಾನ್ಸ್ ಫುಲ್ ಸಪೋರ್ಟ್

ಇಂದು ( ಮೇ 6 ) ಹೈದರಾಬಾದ್‌ನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಐಪಿಎಲ್ 206ರ ಲೀಗ್ ಹಂತದ 49ನೇ ಪಂದ್ಯ ನಡೆಯಲಿದ್ದು, ಸನ್ ರೈಸರ್ಸ್ ಹೈದರಾಬಾದ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿವೆ.

ಸತತ ಗೆಲುವುಗಳನ್ನು ಕಂಡು ಪ್ಲೇಆಫ್ ಪ್ರವೇಶದ ಸನಿಹಕ್ಕೆ ಬಂದು ಕಳೆದ ಪಂದ್ಯಗಳಲ್ಲಿ ಮಣ್ಣು ಮುಕ್ಕಿರುವ ಉಭಯ ತಂಡಗಳಿಗೂ ಈ ಪಂದ್ಯದಲ್ಲಿ ಗೆಲ್ಲುವುದು ಬಹು ಮುಖ್ಯದ್ದಾಗಿದೆ. ಗೆಲ್ಲುವ ತಂಡ ಪ್ಲೇಆಫ್ ಸುತ್ತಿಗೆ ಒಂದು ಹೆಜ್ಜೆ ಹತ್ತಿರವಾಗಲಿದ್ದು, ಕುತೂಹಲ ಹೆಚ್ಚಿಸಿದೆ.

ಈ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡ ಗೆದ್ದರೆ 15 ಅಂಕಗಳನ್ನು ಹೊಂದುವ ಮೂಲಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಮುಂದುವರಿಯಲಿದ್ದು, ಒಂದು ವೇಳೆ ಸನ್ ರೈಸರ್ಸ್ ಹೈದರಾಬಾದ್ ಗೆದ್ದರೆ 14 ಅಂಕಗಳ ಜತೆಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇನ್ನು ಈ ಪಂದ್ಯ ಉಭಯ ತಂಡಗಳು ಮಾತ್ರವಲ್ಲದೇ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೂ ಸಹ ಬಹು ಮುಖ್ಯದ್ದಾಗಿದೆ. ಹೌದು, ಸಾಮಾಜಿಕ ಜಾಲತಾಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳು ಈ ತಂಡ ಗೆದ್ದರೆ ತಮ್ಮ ನೆಚ್ಚಿನ ತಂಡಕ್ಕೆ ಹೆಚ್ಚಿನ ಅನುಕೂಲ ಎಂದು ಚರ್ಚೆಗಳನ್ನು ನಡೆಸುತ್ತಿದ್ದಾರೆ.

ಹೌದು, ಇಂದಿನ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ ಗೆದ್ದರೆ ಆರ್‌ಸಿಬಿಗೆ ಹೆಚ್ಚು ಅನುಕೂಲ. ಏಕೆಂದರೆ ಪಂಜಾಬ್ ಕಿಂಗ್ಸ್ ತಂಡ ಗೆದ್ದರೆ ಟಾಪ್ 2 ಸ್ಥಾನವನ್ನು ಆ ತಂಡ ಖಚಿತಪಡಿಸಿಕೊಳ್ಳಲು ಸುಲಭವಾಗಲಿದ್ದು, ಇಂದಿನ ಪಂದ್ಯದಲ್ಲಿ ಸೋತರೆ ಟಾಪ್ 2 ಸ್ಥಾನಕ್ಕೆ ರೇಸ್ ಇನ್ನೂ ಉಳಿದುಕೊಳ್ಳಲಿದೆ.

ಆರ್‌ಸಿಬಿ ಹಾಗೂ ಪಂಜಾಬ್ ಎರಡೂ ತಂಡಗಳು 9 ಪಂದ್ಯಗಳನ್ನು ಆಡಿ ಸಮಬಲ ಸಾಧಿಸಿರುವುದರಿಂದ ಇಂದಿನ ಪಂದ್ಯದಲ್ಲಿ ಪಂಜಾಬ್ ಸೋತರೆ ಆರ್‌ಸಿಬಿಗೆ ಹೆಚ್ಚು ಲಾಭ ಎನ್ನಬಹುದು.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular