HomeIPL 2026IPL 2026: ಆ ಮೂವರನ್ನು ನಂಬಿ ತಪ್ಪು ಮಾಡಿಬಿಟ್ಟೆ; ರಾಜಸ್ಥಾನ್ ವಿರುದ್ಧ ಸೋಲಿಗೆ ಕಾರಣ ಬಿಚ್ಚಿಟ್ಟ...

IPL 2026: ಆ ಮೂವರನ್ನು ನಂಬಿ ತಪ್ಪು ಮಾಡಿಬಿಟ್ಟೆ; ರಾಜಸ್ಥಾನ್ ವಿರುದ್ಧ ಸೋಲಿಗೆ ಕಾರಣ ಬಿಚ್ಚಿಟ್ಟ ರಜತ್ ಪಟಿದಾರ್

ನಿನ್ನೆ ( ಏಪ್ರಿಲ್ 10 ) ಗುವಾಹಟಿಯ ಬರ್ಸಾಪರ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026ರ ಲೀಗ್ ಹಂತದ 16ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ರಾಜಸ್ಥಾನ್ ರಾಯಲ್ಸ್ 6 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿ ಟೂರ್ನಿಯಲ್ಲಿ ಸತತ ನಾಲ್ಕನೇ ಜಯ ಕಂಡಿತು.

ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಆರಂಭಿಕ ಆಘಾತ ಅನುಭವಿಸಿ ನಾಯಕ ರಜತ್ ಪಟಿದಾರ್ ಅರ್ಧಶತಕ, ಶೆಫರ್ಡ್ ಹಾಗೂ ವೆಂಕಟೇಶ್ ಐಯ್ಯರ್ ಉತ್ತಮ ಆಟದ ನೆರವಿನಿಂದ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 201 ರನ್ ಕಲೆಹಾಕಿ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ 202 ರನ್‌ಗಳ ಸವಾಲಿನ ಗುರಿ ನೀಡಿತು. ಈ ಗುರಿಯನ್ನು ಬೆನ್ನಟ್ಟುವಲ್ಲಿ ಯಶಸ್ವಿಯಾದ ರಾಜಸ್ಥಾನ್ ರಾಯಲ್ಸ್ ವೈಭವ್ ಸೂರ್ಯವಂಶಿ ಹಾಗೂ ಧ್ರುವ್ ಜುರೆಲ್ ಅರ್ಧಶತಕಗಳ ನೆರವಿನಿಂದ 18 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 202 ರನ್ ಕಲೆಹಾಕಿತು.

ಟೂರ್ನಿಯಲ್ಲಿನ ತನ್ನ ಮೊದಲ ಎರಡು ಪಂದ್ಯಗಳಲ್ಲಿ ಗೆದ್ದುಬೀಗಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ರಾಜಸ್ಥಾನ್ ರಾಯಲ್ಸ್ ಸೋಲುಣಿಸಿದ್ದು, ಆರ್‌ಸಿಬಿ ತನ್ನ ಮುಂದಿನ ಪಂದ್ಯಕ್ಕೆ ತಪ್ಪುಗಳನ್ನು ತಿದ್ದಿಕೊಂಡು ಆಡುವ ಬಳಗದಲ್ಲಿ ಬದಲಾವಣೆಯ ಕುರಿತು ಚಿಂತಿಸುವ ಹಾಗೆ ಮಾಡಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇನ್ನು ಪಂದ್ಯದ ಬಳಿಕ ತಂಡದ ನಾಯಕ ರಜತ್ ಪಟಿದಾರ್ ಮಾತನಾಡಿದ್ದು ‘ನಾವು ಪವರ್‌ಪ್ಲೇನಲ್ಲಿ ಬೇಗನೆ ವಿಕೆಟ್ ಕಳೆದುಕೊಂಡಿದ್ದು, ಅಲ್ಲಿಂದ 202 ರನ್ ಟಾರ್ಗೆಟ್ ನೀಡಿದ್ದು, ನನಗನಿಸುತ್ತೆ ಅದೊಂದು ಪಾಸಿಟಿವ್ ಅಂಶ. ಅದೇ ರೀತಿ ಎದುರಾಳಿ ತಂಡದ ಬ್ಯಾಟ್ಸ್‌ಮನ್‌ಗಳು ಆಡಿದ ರೀತಿ, ವಿಶೇಷವಾಗಿ ಪವರ್‌ಪ್ಲೇನಲ್ಲಿ ವೈಭವ್ ಸೂರ್ಯವಂಶಿ ಆಡಿದ್ದು ದೊಡ್ಡ ವ್ಯತ್ಯಾಸವನ್ನು ತಂದಿತು. ನಮ್ಮ ಕೊನೆಯ ಪಂದ್ಯಗಳು ಈ ಪಂದ್ಯಕ್ಕಿಂತ ವಿಭಿನ್ನವಾಗಿದ್ದು, ಈ ಪಂದ್ಯದಿಂದ ಕಲಿಯುವುದು ಸಾಕಷ್ಟಿದೆ’ ಎಂದು ಸೋಲಿಗೆ ವೈಭವ್ ಅಬ್ಬರ ಕಾರಣ ಎಂದರು.

ಇನ್ನು ಇಂಪ್ಯಾಕ್ಟ್ ಪ್ಲೇಯರ್ ಆಗಿ ಸುಯಶ್ ಶರ್ಮಾರನ್ನು ಬಳಸದೇ ವೆಂಕಟೇಶ್‌ ಐಯ್ಯರ್‌ರನ್ನು ಬಳಸಿದ್ದರ ಕುರಿತು ಸಹ ಸ್ಪಷ್ಟನೆ ಕೊಟ್ಟ ರಜತ್ ‘ವೆಂಕಟೇಶ್, ಶೆಫರ್ಡ್ ಹಾಗೂ ಕೃನಾಲ್ ಪಾಂಡ್ಯ ಇರುತ್ತಾರೆ, ಈ ಮೂವರು ಬೌಲರ್‌ಗಳನ್ನು ಬಳಸಿ ನಿಭಾಯಿಸಬಹುದು ಎಂದುಕೊಂಡೆವು. ಆದರೆ ಅದು ದೊಡ್ಡ ಪರಿಣಾಮವನ್ನೇನೂ ಭೀರಲಿಲ್ಲ. ಈ ರೀತಿಯ ಸ್ಪರ್ಧಾತ್ಮಕ ಕ್ರಿಕೆಟ್‌ ಆಡುವಾಗ, ವಿಶೇಷವಾಗಿ ಐಪಿಎಲ್‌ನಂತಹ ಟೂರ್ನಿಗಳಲ್ಲಿ ತಪ್ಪುಗಳಾಗುವುದು ಸಹಜ. ಮುಖ್ಯವಾದುದ್ದೇನೆಂದರೆ ಅವುಗಳನ್ನು ಗುರುತಿಸಿ ತಪ್ಪುಗಳನ್ನು ತಿದ್ದಿಕೊಳ್ಳುವುದು’ ಎಂದು ಹೇಳಿಕೆ ನೀಡಿ ತಮ್ಮ ನಿರ್ಧಾರವನ್ನೂ ತಪ್ಪು ಎಂದರು.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular