HomeIPL 2026ಐಪಿಎಲ್ 2026 ಪ್ಲೇಆಫ್ ಲೆಕ್ಕಾಚಾರ: ಈ 4 ತಂಡಗಳು ಕೇವಲ ಇನ್ನೆರಡು ಪಂದ್ಯ ಗೆದ್ದರೆ ಸಾಕು;...

ಐಪಿಎಲ್ 2026 ಪ್ಲೇಆಫ್ ಲೆಕ್ಕಾಚಾರ: ಈ 4 ತಂಡಗಳು ಕೇವಲ ಇನ್ನೆರಡು ಪಂದ್ಯ ಗೆದ್ದರೆ ಸಾಕು; ಮುಂಬೈ ಸೇರಿ ಆ 3 ತಂಡಗಳು ಕಷ್ಟಕಷ್ಟ!

ನಿನ್ನೆ ( ಏಪ್ರಿಲ್ 29 ) ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026ರ ಲೀಗ್ ಹಂತದ 41ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಸನ್ ರೈಸರ್ಸ ಹೈದರಾಬಾದ್ 6 ವಿಕೆಟ್‌ಗಳ ಗೆಲುವನ್ನು ದಾಖಲಿಸಿತು.

ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ರಯಾನ್ ರಿಕೆಲ್ಟನ್ ಅಬ್ಬರದ ಶತಕದ ನೆರವಿನಿಂದ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 243 ರನ್ ಕಲೆಹಾಕಿ ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ 244 ರನ್‌ಗಳ ಕಠಿಣ ಗುರಿಯನ್ನು ನೀಡಿತು. ಈ ಗುರಿಯನ್ನು ಬೆನ್ನಟ್ಟಿ ಬೌಂಡರಿಗಳ ಸುರಿಮಳೆಗೈದ ಸನ್ ರೈಸರ್ಸ್ ಹೈದರಾಬಾದ್ 18.4 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 249 ರನ್ ಚಚ್ಚಿತು.

ಹೀಗೆ ತವರಿನಲ್ಲೇ ಮುಂಬೈ ಇಂಡಿಯನ್ಸ್ ತಂಡಕ್ಕೆ ಮಣ್ಣು ಮುಕ್ಕಿಸಿದ ಸನ್ ರೈಸರ್ಸ್ ಹೈದರಾಬಾದ್ 12 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಜಿಗಿದಿದ್ದು, ಪ್ಲೇಆಫ್ ಹಾದಿಯನ್ನು ಇನ್ನಷ್ಟು ಸುಲಭ ಮಾಡಿಕೊಂಡಿದೆ. ಹಾಗಿದ್ದರೆ ಈ ಪಂದ್ಯದ ಬಳಿಕ ಯಾವ ತಂಡ ಉಳಿದ ಪಂದ್ಯಗಳಲ್ಲಿ ಪ್ಲೇಆಫ್ ಪ್ರವೇಶವನ್ನು ಭದ್ರಪಡಿಸಿಕೊಳ್ಳಬೇಕು ಎಂದರೆ ಇನ್ನೆಷ್ಟು ಪಂದ್ಯಗಳನ್ನು ಗೆಲ್ಲಬೇಕು ಎಂಬ ಮಾಹಿತಿ ಮುಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪಂಜಾಬ್ ಕಿಂಗ್ಸ್: ಸದ್ಯ ಅಂಕಪಟ್ಟಿಯಲ್ಲಿ 13 ಅಂಕಗಳನ್ನು ಹೊಂದಿರುವ ಈ ತಂಡ ಉಳಿದ 6 ಪಂದ್ಯಗಳಲ್ಲಿ 2 ಪಂದ್ಯಗಳನ್ನು ಗೆದ್ದರೆ ಸಾಕು ಪ್ಲೇಆಫ್ ಪ್ರವೇಶ ಖಚಿತವಾಗಲಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು: 12 ಅಂಕಗಳನ್ನು ಹೊಂದಿರುವ ಆರ್‌ಸಿಬಿ ಉಳಿದ 6 ಪಂದ್ಯಗಳಲ್ಲಿ 2 ಪಂದ್ಯಗಳನ್ನು ಗೆದ್ದರೆ ಪ್ಲೇಆಫ್ ಪ್ರವೇಶ ಪಕ್ಕಾ.

ಸನ್‌ರೈಸರ್ಸ್ ಹೈದರಾಬಾದ್: 12 ಅಂಕಗಳನ್ನು ಹೊಂದಿರುವ ಎಸ್‌ಆರ್‌ಎಚ್ ಉಳಿದ 5 ಪಂದ್ಯಗಳಲ್ಲಿ 2 ಪಂದ್ಯಗಳನ್ನು ಗೆದ್ದರೆ ಪ್ಲೇಆಫ್‌ ಖಚಿತವಾಗಲಿದೆ.

ರಾಜಸ್ಥಾನ್ ರಾಯಲ್ಸ್: 12 ಅಂಕಗಳನ್ನು ಹೊಂದಿರುವ ಆರ್‌ಆರ್ ಉಳಿದ 5 ಪಂದ್ಯಗಳಲ್ಲಿ 2 ಪಂದ್ಯಗಳನ್ನು ಗೆದ್ದರೆ ಪ್ಲೇಅಫ್‌ಗೆ ಲಗ್ಗೆ ಇಡಲಿದೆ.

ಗುಜರಾತ್ ಟೈಟನ್ಸ್: 8 ಅಂಕಗಳನ್ನು ಹೊಂದಿರುವ ಗುಜರಾತ್ ಟೈಟನ್ಸ್ ಉಳಿದ 6 ಪಂದ್ಯಗಳಲ್ಲಿ 4 ಪಂದ್ಯಗಳನ್ನು ಗೆಲ್ಲಬೇಕಿದೆ.

ಚೆನ್ನೈ ಸೂಪರ್ ಕಿಂಗ್ಸ್: 6 ಅಂಕಗಳನ್ನು ಹೊಂದಿರುವ ಸಿಎಸ್‌ಕೆ ಉಳಿದ 6 ಪಂದ್ಯಗಳಲ್ಲಿ 5 ಪಂದ್ಯಗಳನ್ನು ಗೆಲ್ಲಬೇಕು.

ಡೆಲ್ಲಿ ಕ್ಯಾಪಿಟಲ್ಸ್: 6 ಅಂಕಗಳನ್ನು ಹೊಂದಿರುವ ಡಿಸಿ ಉಳಿದ 6 ಪಂದ್ಯಗಳಲ್ಲಿ 5 ಪಂದ್ಯಗಳನ್ನು ಗೆಲ್ಲಬೇಕಿದೆ.

ಕೊಲ್ಕತ್ತಾ ನೈಟ್ ರೈಡರ್ಸ್: 5 ಅಂಕಗಳನ್ನು ಹೊಂದಿರುವ ಕೆಕೆಆರ್ ಉಳಿದ 6 ಪಂದ್ಯಗಳಲ್ಲಿ 6 ಪಂದ್ಯಗಳನ್ನು ಗೆಲ್ಲಬೇಕು.

ಮುಂಬೈ ಇಂಡಿಯನ್ಸ್: 4 ಅಂಕಗಳನ್ನು ಹೊಂದಿರುವ ಮುಂಬೈ ಉಳಿದ 6 ಪಂದ್ಯಗಳಲ್ಲಿ ಎಲ್ಲ ಪಂದ್ಯಗಳನ್ನು ಗೆಲ್ಲಬೇಕು.

ಲಕ್ನೋ ಸೂಪರ್ ಜೈಂಟ್ಸ್: 4 ಅಂಕಗಳನ್ನು ಹೊಂದಿರುವ ಲಕ್ನೋ ಸಹ ಉಳಿದ 6 ಪಂದ್ಯಗಳಲ್ಲಿ ಎಲ್ಲ ಪಂದ್ಯಗಳನ್ನು ಗೆಲ್ಲಬೇಕು.

ಪ್ಲೇಆಫ್ ಪ್ರವೇಶಕ್ಕೆ ಕನಿಷ್ಟ 16 ಅಂಕಗಳ ಅಗತ್ಯವಿದೆ. ಹೀಗಾಗಿ ಉಳಿದ ಪಂದ್ಯಗಳು ಟಾಪ್ 4 ಸ್ಥಾನದಲ್ಲಿರುವ ತಂಡಗಳಿಗಿಂತ ಉಳಿದ ತಂಡಗಳಿಗೆ ಮಾಡು ಇಲ್ಲವೇ ಮಡಿ ಪಂದ್ಯಗಳಾಗಿ ಪರಿಣಿಮಿಸಿವೆ. ಇನ್ನು ಟಾಪ್ 4 ಸ್ಥಾನಗಳಲ್ಲಿರುವ ಪಂಜಾಬ್, ಬೆಂಗಳೂರು, ಹೈದರಾಬಾದ್ ಹಾಗೂ ರಾಜಸ್ಥಾನ್ ತಂಡಗಳಿಗೆ ಕೇವಲ ಇನ್ನೆರಡು ಗೆಲುವು ಬೇಕಿರುವುದರಿಂದ ಪ್ಲೇಆಫ್ ಹಾದಿ ಸುಲಭವಾಗಿದ್ದು, ಉಳಿದ ಎಲ್ಲ 6 ಪಂದ್ಯಗಳನ್ನು ಗೆಲ್ಲಲೇಬೇಕಿರುವ ಕೊಲ್ಕತ್ತಾ, ಮುಂಬೈ ಹಾಗೂ ಲಕ್ನೋ ಪ್ಲೇಆಫ್ ಹಾದಿ ಅತಿ ಕಠಿಣದ್ದಾಗಿದೆ.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular