HomeIPL 2026IPL 2026 | ಪ್ಲೇಆಫ್‌ಗೆ 4 ತಂಡಗಳು ಪಕ್ಕಾ: ಈ 2 ತಂಡಗಳಿಗೆ ಫೈನಲ್ ತಲುಪಲು...

IPL 2026 | ಪ್ಲೇಆಫ್‌ಗೆ 4 ತಂಡಗಳು ಪಕ್ಕಾ: ಈ 2 ತಂಡಗಳಿಗೆ ಫೈನಲ್ ತಲುಪಲು ಎರಡು ಅವಕಾಶ; ಇಲ್ಲಿದೆ ಮಾಹಿತಿ, ವೇಳಾಪಟ್ಟಿ

ನಿನ್ನೆ ( ಮೇ 24 ) ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026ರ ಲೀಗ್ ಹಂತದ 69ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ 30 ರನ್‌ಗಳ ಗೆಲುವನ್ನು ದಾಖಲಿಸುವ ಮೂಲಕ ಪ್ಲೇಆಫ್‌ಗೆ ಪ್ರವೇಶ ಪಡೆದುಕೊಂಡಿತು.

ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ಬೌಲಿಂಗ್ ಆರಿಸಿಕೊಂಡು ರಾಜಸ್ಥಾನ್ ರಾಯಲ್ಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಅದರಂತೆ ರಾಜಸ್ಥಾನ್ ರಾಯಲ್ಸ್ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 205 ರನ್ ಕಲೆಹಾಕಿ ಮುಂಬೈ ಇಂಡಿಯನ್ಸ್ ತಂಡಕ್ಕೆ 206 ರನ್‌ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲವಾದ ಮುಂಬೈ ಇಂಡಿಯನ್ಸ್ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 175 ರನ್ ಗಳಿಸಿತು.

ಮುಂಬೈ ಇಂಡಿಯನ್ಸ್ ಈ ಪಂದ್ಯವನ್ನು ಗೆದ್ದಿದ್ದರೆ 15 ಅಂಕಗಳನ್ನು ಹೊಂದಿದ್ದ ಪಂಜಾಬ್ ಕಿಂಗ್ಸ್ ಪ್ಲೇಆಫ್ ಸುತ್ತಿಗೆ ಅರ್ಹತೆ ಗಿಟ್ಟಿಸಿಕೊಳ್ಳುತ್ತಿತ್ತು. ಆದರೆ ರಾಜಸ್ತಾನ್ ರಾಯಲ್ಸ್ ಈ ಪಂದ್ಯ ಗೆದ್ದು 16 ಅಂಕ ಗಳಿಸಿದ ಕಾರಣ ಪ್ಲೇಆಫ್‌ಗೆ ಅರ್ಹತೆ ಪಡೆದುಕೊಂಡಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಗುಜರಾತ್ ಟೈಟನ್ಸ್, ಸನ್ ರೈಸರ್ಸ್ ಹೈದರಾಬಾದ್ ಹಾಗೂ ರಾಜಸ್ಥಾನ್ ರಾಯಲ್ಸ್ ಈ ಬಾರಿ ಪ್ಲೇಆಫ್ ತಲುಪಿದ ನಾಲ್ಕು ತಂಡಗಳಾಗಿವೆ.

ಈ ಪೈಕಿ ಅಂಕಪಟ್ಟಿಯಲ್ಲಿ ಟಾಪ್ 2 ಸ್ಥಾನ ಗಳಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟನ್ಸ್‌ಗೆ ಕ್ವಾಲಿಫಯರ್ ಒಂದನೇ ಪಂದ್ಯವನ್ನಾಡುವ ಅರ್ಹತೆ ಸಿಕ್ಕಿದ್ದು, ಫೈನಲ್ ಪ್ರವೇಶಿಸಲು ಎರಡು ಬಾರಿ ಅವಕಾಶ ಸಿಕ್ಕಂತಾಗಲಿದೆ ಎಂದೇ ಹೇಳಬಹುದು.

ಪ್ಲೇಆಫ್ ಸುತ್ತಿನ ವೇಳಾಪಟ್ಟಿ ಹೀಗಿದೆ..

ಮೊದಲನೇ ಕ್ವಾಲಿಫಯರ್ ಪಂದ್ಯ: ಮೇ 26, ಸಂಜೆ 7.30ಕ್ಕೆ – ಧರಂಶಾಲಾದಲ್ಲಿ ( ಈ ಪಂದ್ಯದಲ್ಲಿ ಗೆದ್ದವರು ನೇರವಾಗಿ ಫೈನಲ್‌ಗೆ, ಸೋತವರು ಎರಡನೇ ಕ್ವಾಲಿಫಯರ್ ಪಂದ್ಯ ಆಡಲಿದ್ದಾರೆ )

ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಗುಜರಾತ್ ಟೈಟನ್ಸ್ ( ಟೇಬಲ್ ಟಾಪ್ 2 ಟಾಪರ್ಸ್ )

ಎಲಿಮಿನೇಟರ್ ಪಂದ್ಯ: ಮೇ 27, ಸಂಜೆ 7.30ಕ್ಕೆ – ಮುಲ್ಲಾನ್‌ಪುರದಲ್ಲಿ ( ಈ ಪಂದ್ಯದಲ್ಲಿ ಸೋತವರು ಟೂರ್ನಿಯಿಂದ ಹೊರಕ್ಕೆ ಹಾಗೂ ಗೆದ್ದವರು ಎರಡನೇ ಕ್ವಾಲಿಫಯರ್ ಪಂದ್ಯ ಆಡಲಿದ್ದಾರೆ )

ಸನ್ ರೈಸರ್ಸ್ ಹೈದರಾಬಾದ್ vs ರಾಜಸ್ಥಾನ್ ರಾಯಲ್ಸ್

ಎರಡನೇ ಕ್ವಾಲಿಫಯರ್ ಪಂದ್ಯ: ಮೇ 29, ಸಂಜೆ 7.30ಕ್ಕೆ – ಮುಲ್ಲಾನ್‌ಪುರ

( ಮೊದಲ ಕ್ವಾಲಿಫಯರ್‌ನಲ್ಲಿ ಸೋತವರು vs ಎಲಿಮಿನೇಟರ್‌ನಲ್ಲಿ ಗೆದ್ದವರು )

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular