HomeLatest NewsIPL 2026: ಟೂರ್ನಿ ಆರಂಭದ ವೇಳೆ ಆರ್‌ಸಿಬಿಗೆ ಹಿನ್ನಡೆ; ಯಶ್ ದಯಾಳ್ ಬಳಿಕ ಮತ್ತೊಬ್ಬ ಆಟಗಾರ...

IPL 2026: ಟೂರ್ನಿ ಆರಂಭದ ವೇಳೆ ಆರ್‌ಸಿಬಿಗೆ ಹಿನ್ನಡೆ; ಯಶ್ ದಯಾಳ್ ಬಳಿಕ ಮತ್ತೊಬ್ಬ ಆಟಗಾರ ಟೂರ್ನಿಯಿಂದ ಔಟ್!

ನಾಳೆ ( ಮಾರ್ಚ್ 28 ) ಬೆಂಗಳೂರಿನ ಎಂ ಚಿನ್ನಸ್ವಾಮಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್ ರೈಸರ್ಸ್ ಹೈದರಾಬಾದ್ ತಂಡಗಳ ನಡುವೆ ಬಹು ನಿರೀಕ್ಷಿತ 19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಉದ್ಘಾಟನಾ ಪಂದ್ಯ ನಡೆಯಲಿದೆ.

ಈ ಪಂದ್ಯಕ್ಕಾಗಿ ಸಕಲ ಸಿದ್ಧತೆಗಳು ನಡೆಯುತ್ತಿದ್ದು, ಎರಡೂ ತಂಡಗಳ ಆಟಗಾರರು ತಾಲೀಮಿನಲ್ಲಿ ನಿರತರಾಗಿದ್ದಾರೆ. ಇನ್ನು ಈ ಬಾರಿಯ ಟೂರ್ನಿಯಲ್ಲಿ ವಿದೇಶಿ ಆಟಗಾರರು ಗಾಯದ ಸಮಸ್ಯೆಯಿಂದಾಗಿ ಬಳಲುತ್ತಿರುವ ಸುದ್ದಿಗಳು ಹೆಚ್ಚಾಗಿ ಕೇಳಿಬರುತ್ತಿದ್ದು, ಫ್ರಾಂಚೈಸಿಗಳಿಗೆ ತಲೆ ನೋವಾಗಿ ಪರಿಣಮಿಸಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೂ ಸಹ ಈ ಸಮಸ್ಯೆ ಕಾಡಿದ್ದು, ತಂಡದ ವೇಗಿ ಜೋಶ್ ಹೇಜಲ್‌ವುಡ್ ಈ ಬಾರಿ ಕಣಕ್ಕಿಳಿಯುವುದು ಅನುಮಾನ ಎನ್ನಲಾಗಿತ್ತು. ಆದರೆ ಸದ್ಯ ಹೇಜಲ್‌ವುಡ್ ಅರ್‌ಸಿಬಿ ಕ್ಯಾಂಪ್ ಸೇರಿಕೊಂಡಿದ್ದು ತಾನು ಆಡಲು ಸಿದ್ಧ ಎಂಬ ಸಂದೇಶವನ್ನು ಅಭಿಮಾನಿಗಳಿಗೆ ನೀಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಸಿಹಿ ಸುದ್ದಿ ಬೆನ್ನಲ್ಲೇ ಇದೀಗ ಆರ್‌ಸಿಬಿಗೆ ಹಿನ್ನಡೆಯುಂಟಾಗಿದ್ದು, ತಂಡದ ಮತ್ತೋರ್ವ ವೇಗಿ ಶ್ರೀಲಂಕಾದ ನುವಾನ್ ತುಷಾರಾ ಟೂರ್ನಿಯಿಂದ ಹೊರಬಿದ್ದಿದ್ದಾರೆ ಎಂದು ನ್ಯೂಸ್‌ವೈರ್ ವರದಿ ಮಾಡಿದೆ. ಟಿಟ್ವೆಂಟಿ ಕ್ರಿಕೆಟ್ ಆಡಲು ಶ್ರೀಲಂಕಾ ಕ್ರಿಕೆಟ್ ಬೋರ್ಡ್‌ನಿಂದ ಎನ್‌ಒಸಿ ಪಡೆದುಕೊಳ್ಳುವುದು ಕಡ್ಡಾಯವಾಗಿದ್ದು, ನುವಾನ್ ತುಷಾರಾಗೆ ಈ ಸರ್ಟಿಫಿಕೇಟ್ ಸಿಕ್ಕಿಲ್ಲ, ಹೀಗಾಗಿ ಅವರು ಆರ್‌ಸಿಬಿ ಪರ ಟೂರ್ನಿಯಲ್ಲಿ ಕಣಕ್ಕಿಳಿಯುವುದಿಲ್ಲ ಎನ್ನಲಾಗಿದೆ.

ಈ ಮೂಲಕ ಆರ್‌ಸಿಬಿ ತಂಡದಿಂದ ಯಶ್ ದಯಾಳ್ ಬಳಿಕ ಮತ್ತೋರ್ವ ಆಟಗಾರ ಟೂರ್ನಿಗೆ ಅಲಭ್ಯರಾಗಿದ್ದಾರೆ. ಯಶ್ ದಯಾಳ್ ಪೋಕ್ಸೊ ಪ್ರಕರಣವನ್ನು ಎದುರಿಸುತ್ತಿರುವ ಕಾರಣ ಈ ಬಾರಿಯ ಐಪಿಎಲ್‌ನಲ್ಲಿ ಕಣಕ್ಕಿಳಿಯುತ್ತಿಲ್ಲ .

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular