HomeLatest NewsIPL 2026: ರಾಜಸ್ಥಾನ್ ವಿರುದ್ಧ ಮುಂಬೈ ಇಷ್ಟು ರನ್ ಬಾರಿಸದಿದ್ದರೆ ಪಂಜಾಬ್ ಟೂರ್ನಿಯಿಂದ ಔಟ್; ರಾಜಸ್ಥಾನ್...

IPL 2026: ರಾಜಸ್ಥಾನ್ ವಿರುದ್ಧ ಮುಂಬೈ ಇಷ್ಟು ರನ್ ಬಾರಿಸದಿದ್ದರೆ ಪಂಜಾಬ್ ಟೂರ್ನಿಯಿಂದ ಔಟ್; ರಾಜಸ್ಥಾನ್ ಕ್ವಾಲಿಫೈಗೆ ಎಂಟ್ರಿ!

ಇಂದು ( ಮೇ 24 ) ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಐಪಿಎಲ್ 2026ರ ಲೀಗ್ ಹಂತದ 69ನೇ ಪಂದ್ಯ ನಡೆಯುತ್ತಿದ್ದು, ರಾಜಸ್ಥಾನ್ ರಾಯಲ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿಯಾಗಿವೆ.

ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ಬೌಲಿಂಗ್ ಆರಿಸಿಕೊಂಡು ರಾಜಸ್ಥಾನ್ ರಾಯಲ್ಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು.

ಅದರಂತೆ ರಾಜಸ್ಥಾನ್ ರಾಯಲ್ಸ್ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 205 ರನ್ ಕಲೆಹಾಕಿ ಮುಂಬೈ ಇಂಡಿಯನ್ಸ್ ತಂಡಕ್ಕೆ 206 ರನ್‌ಗಳ ಗುರಿಯನ್ನು ನೀಡಿದೆ. ಮುಂಬೈ ಇಂಡಿಯನ್ಸ್ ಈ ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲವಾದರೆ ರಾಜಸ್ಥಾನ್ ರಾಯಲ್ಸ್ 16 ಅಂಕಗಳನ್ನು ಹೊಂದಿ ಪ್ಲೇಆಫ್‌ಗೆ ಪ್ರವೇಶ ಪಡೆದುಕೊಳ್ಳಲಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಒಂದು ವೇಳೆ ಈ ಮೊತ್ತವನ್ನು ಮುಂಬೈ ಇಂಡಿಯನ್ಸ್ ಚೇಸ್ ಮಾಡಿದರೆ, ರಾಜಸ್ಥಾನ್ ರಾಯಲ್ಸ್ 14 ಅಂಕಗಳ ಜತೆ ಎಲಿಮಿನೇಟ್ ಆಗಲಿದೆ. ಅಲ್ಲದೇ ಸಂಜೆ ನಡೆಯುವ ಪಂದ್ಯದಲ್ಲಿ ಏನಾದರೂ ಡೆಲ್ಲಿ ವಿರುದ್ಧ ಕೆಕೆಆರ್ ಗೆದ್ದು ಪಂಜಾಬ್‌ನ ಹಾಗೆ 15 ಅಂಕ ಪಡೆದರೆ ನೆಟ್ ರನ್ ರೇಟ್ ಮೇಲೆ ಪ್ಲೇಆಫ್‌ಗೆ ತಂಡದ ಆಯ್ಕೆ ನಡೆಯಲಿದೆ.

ರಾಜಸ್ಥಾನ್ ರಾಯಲ್ಸ್ ಪರ ಯಶಸ್ವಿ ಜೈಸ್ವಾಲ್ 27 ರನ್ ಗಳಿಸಿದರೆ, ವೈಭವ್ ಸೂರ್ಯವಂಶಿ ಕೇವಲ 4 ರನ್ ಕಲೆಹಾಕಿದರು. ಇನ್ನುಳಿದಂತೆ ಧ್ರುವ್ ಜುರೆಲ್ 38, ರಿಯಾನ್ ಪರಾಗ್ 14, ದಾಸನ್ ಶನಕ 29, ಡೊನೊವನ್ ಫೆರೆರಾ 18, ಜೋಫ್ರಾ ಆರ್ಚರ್ 32, ಶುಭಮ್ ದುಬೆ 5, ರವೀಂದ್ರ ಜಡೇಜಾ ಅಜೇಯ 19 ಹಾಗೂ ನಾಂದ್ರೆ ಬರ್ಗರ್ ಅಜೇಯ 10 ರನ್ ಕಲೆಹಾಕಿದರು.

ಮುಂಬೈ ಇಂಡಿಯನ್ಸ್ ಪರ ದೀಪಕ್ ಚಹಲ್ ಹಾಗೂ ಶಾರ್ದೂಲ್ ಠಾಕೂರ್ ತಲಾ ಎರಡು ವಿಕೆಟ್ ಪಡೆದರೆ, ವಿಲ್ ಜಾಕ್ಸ್, ಎಎಂ ಘಜನ್ಫರ್ ಹಾಗೂ ಕಾರ್ಬಿನ್ ಬಾಷ್ ತಲಾ ಒಂದೊಂದು ವಿಕೆಟ್ ಪಡೆದರು.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular