HomeIPL 2026ಆ ತಂಡ ಗೆದ್ದರೆ ಸಾಕು ನಾವು ಸೇಫಾಗಿ ಪ್ಲೇಆಫ್ ತಲುಪುತ್ತೇವೆ ಎಂದಿದ್ದ ಶ್ರೇಯಸ್ ಸ್ಥಿತಿ ಅಯ್ಯೋ...

ಆ ತಂಡ ಗೆದ್ದರೆ ಸಾಕು ನಾವು ಸೇಫಾಗಿ ಪ್ಲೇಆಫ್ ತಲುಪುತ್ತೇವೆ ಎಂದಿದ್ದ ಶ್ರೇಯಸ್ ಸ್ಥಿತಿ ಅಯ್ಯೋ ಪಾಪ, ಕೈಕೊಟ್ಟ ತಂಡ; ನಂಬಿ ಕೆಟ್ಟ ಐಯ್ಯರ್!

ನಿನ್ನೆ ( ಮೇ 24 ) ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಐಪಿಎಲ್ 2026ರ ಲೀಗ್ ಹಂತದ 69ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ 30 ರನ್‌ಗಳ ಗೆಲುವನ್ನು ದಾಖಲಿಸುವ ಮೂಲಕ ಪ್ಲೇಆಫ್‌ಗೆ ಪ್ರವೇಶ ಪಡೆದುಕೊಂಡಿತು.


ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ಬೌಲಿಂಗ್ ಆರಿಸಿಕೊಂಡು ರಾಜಸ್ಥಾನ್ ರಾಯಲ್ಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಅದರಂತೆ ರಾಜಸ್ಥಾನ್ ರಾಯಲ್ಸ್ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 205 ರನ್ ಕಲೆಹಾಕಿ ಮುಂಬೈ ಇಂಡಿಯನ್ಸ್ ತಂಡಕ್ಕೆ 206 ರನ್‌ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲವಾದ ಮುಂಬೈ ಇಂಡಿಯನ್ಸ್ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 175 ರನ್ ಗಳಿಸಿತು.


ಈ ಮೂಲಕ ರಾಜಸ್ಥಾನ್ ರಾಯಲ್ಸ್ ಬೆಂಗಳೂರು, ಗುಜರಾತ್, ಹೈದರಾಬಾದ್ ಬಳಿಕ ಪ್ಲೇಆಫ್ ತಲುಪಿದ್ದು, ಹೈದರಾಬಾದ್ ಜತೆ ಎಲಿಮಿನೇಟರ್ ಆಡಲಿದೆ.
ಇನ್ನು ಪಂಜಾಬ್ ಕಿಂಗ್ಸ್ ಮೊನ್ನೆ ಲಕ್ನೋ ವಿರುದ್ಧ ನಡೆದಿದ್ದ ಪಂದ್ಯದಲ್ಲಿ ಶತಕ ಬಾರಿಸಿ ತನ್ನ ತಂಡವನ್ನು ಗೆಲ್ಲಿಸಿ 15 ಅಂಕಗಳನ್ನು ಸಂಪಾದಿಸಿ ಪ್ಲೇಆಫ್ ಆಸೆಯನ್ನು ಜೀವಂತವನ್ನಾಗಿ ಉಳಿಸಿದ್ದರು. ಅಲ್ಲದೇ ಪಂದ್ಯದ ಬಳಿಕ ನಾಳೆ ಮುಂಬೈ ಗೆದ್ದರೆ ಸಾಕು, ನಾವು ಪ್ಲೇಆಫ್ ಹೋಗಬಹುದು, ಹೀಗಾಗಿ ಮುಂಬೈಗೆ ನಾವು ಬೆಂಬಲ ನೀಡುತ್ತೇವೆ ಎಂದೂ ಸಹ ಘೋಷಣೆ ಮಾಡಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ


ಈ ಮೂಲಕ ನಿನ್ನೆ ಮುಂಬೈ ರಾಜಸ್ಥಾನ್ ತಂಡವನ್ನು ಸೋಲಿಸಿ ತಮ್ಮ ಪ್ಲೇಆಫ್ ಹಾದಿ ಸುಲಭ ಮಾಡಲಿದೆ ಎಂದು ಶ್ರೇಯಸ್ ಐಯ್ಯರ್ ನಂಬಿದ್ದರು. ಆದರೆ ಅದು ಆಗಲೇ ಇಲ್ಲ ಮುಂಬೈ ಹೀನಾಯವಾಗಿ ರಾಜಸ್ಥಾನ್‌ಗೆ ಶರಣಾಯಿತು. ರೋಹಿತ್ ಶರ್ಮಾ ರನ್ ಖಾತೆಯನ್ನೇ ತೆರೆಯಲಿಲ್ಲ, ಬುಮ್ರಾ ಕಣಕ್ಕೆ ಇಳಿಯಲಿಲ್ಲ, ಅತ್ತ ಸೂರ್ಯಕುಮಾರ್ ಯಾದವ್‌ ಕಣದಲ್ಲಿದ್ದರೂ ಗೆಲುವು ತಂದುಕೊಡುವ ಸಾಮರ್ಥ್ಯ ತೋರಲಿಲ್ಲ. ಹೀಗೆ ಸಾಲು ಸಾಲು ನ್ಯೂನತೆಗಳು ಮುಂಬೈ ತಂಡವನ್ನು ಸೋಲುವಂತೆ ಮಾಡಿದವು. ಇತ್ತ ಮುಂಬೈ ಗೆದ್ದು ತಮಗೆ ಸಹಾಯ ಮಾಡಲಿದೆ ಎಂದು ನಂಬಿಕೆ ಇಟ್ಟಿದ್ದ ಶ್ರೇಯಸ್ ಐಯ್ಯರ್ ನಿರಾಸೆಗೊಳಗಾದರು.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular