HomeIPL 2026IPL 2026: 12 ಬಾಲ್ ಆಡಿದ್ರೂ ಸಿಕ್ಸ್ ಬಾರಿಸಲಾಗದ ಪಾಂಡ್ಯಗೆ ನಾಯಕತ್ವ ಬರಲ್ಲ, ರೋಹಿತ್‌ಗೆ ಬಿಟ್ಟುಕೊಡಿ;...

IPL 2026: 12 ಬಾಲ್ ಆಡಿದ್ರೂ ಸಿಕ್ಸ್ ಬಾರಿಸಲಾಗದ ಪಾಂಡ್ಯಗೆ ನಾಯಕತ್ವ ಬರಲ್ಲ, ರೋಹಿತ್‌ಗೆ ಬಿಟ್ಟುಕೊಡಿ; ಮಾಜಿ ಕ್ರಿಕೆಟಿಗ ಕಿಡಿ

ನಿನ್ನೆ ( ಏಪ್ರಿಲ್ 16 ) ಮುಂಬೈ ಇಂಡಿಯನ್ಸ್ ತನ್ನದೇ ತವರು ನೆಲ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026ರ ಲೀಗ್ ಹಂತದ 24ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಹೀನಾಯ ಸೋಲನ್ನು ಕಾಣುವ ಮೂಲಕ ಟೂರ್ನಿಯಲ್ಲಿ ಸತತ ನಾಲ್ಕನೇ ಸೋಲನ್ನು ಕಂಡಿತು.

ಬ್ಯಾಟಿಂಗ್ ಹಾಗೂ ಬೌಲಿಂಗ್‌ ಎರಡರಲ್ಲೂ ಮುಗ್ಗರಿಸಿದ ಮುಂಬೈ ಇಂಡಿಯನ್ಸ್ ತಂಡ ಹಾಲಿ ರನ್ನರ್ ಅಪ್ ತಂಡವಾದ ಪಂಜಾಬ್ ಕಿಂಗ್ಸ್‌ ಮುಂದೆ ಶರಣಾಗಿ ಮಂಡಿಯೂರಿತು. ಪಂದ್ಯ ಮುಗಿದ ಬಳಿಕ ಸೋಲಿನ ಬಗ್ಗೆ ಮಾತ್ರವಲ್ಲದೇ ತಂಡದ ನಾಯಕತ್ವದ ಬಗ್ಗೆ ದೊಡ್ಡ ಚರ್ಚೆಗಳು ಹುಟ್ಟಿಕೊಂಡವು.

ಹಾರ್ದಿಕ್ ಪಾಂಡ್ಯ ನಾಯಕನಾಗಿ ವಿಫಲನಾಗಿದ್ದು, ಮತ್ತೆ ರೋಹಿತ್ ಶರ್ಮಾ ಹೆಗಲಿಗೆ ನಾಯಕತ್ವ ಕೊಟ್ಟು ನೋಡಿ ತಂಡ ಯಶಸ್ಸಿನ ಹಾದಿಗೆ ಮರಳಲಿದೆ ಎಂದು ಕ್ರಿಕೆಟ್ ಪ್ರಿಯರು ಅಭಿಪ್ರಾಯ ವ್ಯಕ್ತಪಡಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಸಾಲಿಗೆ ಮಾಜಿ ಕ್ರಿಕೆಟಿಗ ಮನೋಜ್ ತಿವಾರಿ ಸಹ ಸೇರಿಕೊಂಡಿದ್ದು ಕ್ರಿಕ್‌ಬಜ್‌ನಲ್ಲಿ ಮಾತನಾಡುವಾಗ ಪಾಂಡ್ಯ ಕಳಪೆ ನಾಯಕತ್ವವನ್ನು ಉಲ್ಲೇಖಿಸಿದರು. ‘ಕೇವಲ ಈ ವರ್ಷ ಯಶಸ್ಸು ಸಿಗುತ್ತಿಲ್ಲ ಎಂದರೆ ಕೇವಲ ಈ ವರ್ಷ ತಪ್ಪಾಗಿದೆ ಎಂದರ್ಥವಲ್ಲ. ಆ ತಂಡದ ಹಿನ್ನೆಲೆ ನೋಡಿ. 2015ರಿಂದ 2023ರವರೆಗೆ ಮುಂಬೈ ಇಂಡಿಯನ್ಸ್‌ಗೆ ರೋಹಿತ್ ಶರ್ಮಾ ನಾಯಕನಾಗಿ ಹಲವಾರು ಟ್ರೋಫಿಗಳನ್ನು ತಂದುಕೊಟ್ಟಿದ್ದಾರೆ. ಆದರೆ 2024ರಲ್ಲಿ ಟ್ರೋಫಿ ಇಲ್ಲ, ಕಳೆದ ವರ್ಷವೂ ಇಲ್ಲ, ಅದೇ ರೀತಿಯ ಫಲಿತಾಂಶ ಈ ವರ್ಷವೂ ಬರುವ ಹಾಗೆ ಕಾಣುತ್ತಿದೆ. ನನಗನಿಸುತ್ತೆ ನಾಯಕತ್ವ ಕಳಪೆಯಾಗಿದೆ. ಹಾರ್ದಿಕ್ ತಂಡಕ್ಕೆ ಅನುಗುಣವಾಗಿ ನಾಯಕತ್ವವನ್ನು ನಿಭಾಯಿಸುತ್ತಿಲ್ಲ. ನಾಯಕನಾಗಿ ಆತ ಇನ್ನೂ ಸಕ್ರಿಯನಾಗಬೇಕು’ ಎಂದು ಮನೋಜ್ ತಿವಾರಿ ತಿಳಿಸಿದರು.

ಮುಂದುವರಿದು ಮಾತನಾಡಿದ ತಿವಾರಿ ‘ನಾಯಕನಾಗಿ ಪಾಂಡ್ಯ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ತನ್ನನ್ನು ತಾನು ಸಾಬೀತುಪಡಿಸಿಕೊಳ್ಳಲಿಲ್ಲ. 12 ಎಸೆತಕ್ಕೆ ಕೇವಲ 14 ರನ್ ಬಾರಿಸಿದರು. ರುದರ್‌ಫೋರ್ಡ್ ಕೇವಲ ಐದು ಎಸೆತ ಎದುರಿಸಿದರು. ಪಾಂಡ್ಯನಷ್ಟು ಎಸೆತಗಳು ಆತನಿಗೆ ಸಿಕ್ಕಿದ್ದರೆ ಮೂರ್ನಾಲ್ಕು ಸಿಕ್ಸರ್ ಬಂದಿರುತ್ತಿದ್ದವು. ಹಾರ್ದಿಕ್ ಪಾಂಡ್ಯ ಅದನ್ನು ಮಾಡಲಿಲ್ಲ. ರುದರ್‌ಫೋರ್ಡ್ ಮುಂಚೆ ಕಣಕ್ಕಿಳಿಯಬೇಕಿತ್ತು. ಹಾಗೆಯೇ ಬುಮ್ರಾಗೆ ಮೊದಲ ಓವರ್ ಕೊಡಲಿಲ್ಲ ಎಂದಮೇಲೆ ಎರಡನೇ ಓವರ್ ಕೊಡುವುದರಲ್ಲಿ ಅರ್ಥವಿಲ್ಲ. ದೀಪಕ್ ಚಹರ್‌ಗೆ ಸ್ವಿಂಗ್ ಬರುವುದಿಲ್ಲ. ಶ್ರೇಯಸ್ ಐಯ್ಯರ್ ಒಂದೆಡೆ ಅದ್ಭುತ ನಾಯಕತ್ವ ಪ್ರದರ್ಶಿಸಿದರೆ, ಇತ್ತ ಹಾರ್ದಿಕ್ ನಾಯಕತ್ವ ಕಳಪೆಯಾಗಿತ್ತು. ಇದಕ್ಕೆ ಪರಿಹಾರ ಏನಾದರೂ ಇದ್ದರೆ ಹಾರ್ದಿಕ್ ಪಾಂಡ್ಯ ನಾಯಕತ್ವದಿಂದ ಹಿಂದೆ ಸರಿದು ಮರಳಿ ರೋಹಿತ್‌ಗೆ ಜವಾಬ್ದಾರಿ ಬಿಟ್ಟುಕೊಡಬೇಕು’ ಎಂದು ಹೇಳಿಕೆ ನೀಡಿದ್ದಾರೆ.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular