HomeIPL 2026ಬೌಲರ್‌ ಯಾರಾದರೂ ಚಚ್ತಾನೆ, ಬುಮ್ರಾಗೂ ಯೋಚನೆ ತಂದಿಟ್ಟುಬಿಟ್ಟ; ರಾಜಸ್ಥಾನ್ ಆಟಗಾರನಿಗೆ ಪಠಾಣ್ ಫಿದಾ

ಬೌಲರ್‌ ಯಾರಾದರೂ ಚಚ್ತಾನೆ, ಬುಮ್ರಾಗೂ ಯೋಚನೆ ತಂದಿಟ್ಟುಬಿಟ್ಟ; ರಾಜಸ್ಥಾನ್ ಆಟಗಾರನಿಗೆ ಪಠಾಣ್ ಫಿದಾ

ನಿನ್ನೆ ( ಏಪ್ರಿಲ್ 7 ) ಗುವಾಹಟಿಯ ಬರ್ಸಾಪರ ಕ್ರೀಡಾಂಗಣ ಈ ಬಾರಿಯ ಐಪಿಎಲ್‌ನ ಮೊದಲ ಓವರ್ ಕಡಿತಕ್ಕೊಳಗಾದ ಪಂದ್ಯಕ್ಕೆ ವೇದಿಕೆಯಾಯಿತು. ಮಳೆ ಕಾರಣದಿಂದಾಗಿ ರಾಜಸ್ಥಾನ್ ರಾಯಲ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳ ನಡುವೆ 11 ಓವರ್‌ಗಳ ಪಂದ್ಯ ನಡೆದು ರಾಜಸ್ಥಾನ್ 27 ರನ್‌ಗಳ ಭರ್ಜರಿ ಗೆಲುವು ಕಂಡಿತು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್ ಪರ ಆರಂಭಿಕರಾದ ಯಶಸ್ವಿ ಜೈಸ್ವಾಲ್ ಹಾಗೂ ವೈಭವ್ ಸೂರ್ಯವಂಶಿ ಅಬ್ಬರದ ಆರಂಭ ನೀಡಿದರು. 30 ಎಸೆತಗಳಲ್ಲಿ ಸಿಕ್ಸರ್‌ಗಳ ಸುರಿಮಳೆ ಸುರಿಸಿ ಅಬ್ಬರಿಸಿದ ಈ ಜೋಡಿ 80 ರನ್‌ಗಳ ಜತೆಯಾಟವನ್ನಾಡಿತು.

ಜೈಸ್ವಾಲ್ ಅಂತಿಮ ಹಂತದವರೆಗೂ ಇದ್ದು 32 ಎಸೆತಗಳಲ್ಲಿ ಅಜೇಯ 77 ರನ್ ಚಚ್ಚಿದರೆ, ವೈಭವ್ ಸೂರ್ಯವಂಶಿ 14 ಎಸೆತಗಳಲ್ಲಿ 1 ಬೌಂಡರಿ ಹಾಗೂ 5 ಸಿಕ್ಸರ್ ಸಿಡಿಸಿ 39 ರನ್ ಬಾರಿಸಿ ಅಬ್ಬರಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕಳೆದ ವರ್ಷ ಸಿಕ್ಸರ್ ಬಾರಿಸುವ ಮೂಲಕ ಐಪಿಎಲ್ ಆಂದೋಲನ ಆರಂಭಿಸಿದ್ದ ವೈಭವ್ ಸೂರ್ಯವಂಶಿ ಈ ಬಾರಿಯ ಆವೃತ್ತಿಯಲ್ಲೂ ಸಹ ಅಬ್ಬರಿಸುವ ಮೂಲಕ ತಾನು ಅದೃಷ್ಟದಿಂದ ಹೊಡೆದ ಆಟಗಾರನಲ್ಲ, ಪ್ರತಿಭೆಯಿಂದ ಹೊಡೆದ ಆಟಗಾರ ಎಂಬುದನ್ನು ಸಾಬೀತುಪಡಿಸಿದ್ದಾರೆ.

ಜಸ್‌ಪ್ರೀತ್ ಬುಮ್ರಾ ರೀತಿಯ ವರ್ಲ್ಡ್ ಕ್ಲಾಸ್ ಬೌಲರ್‌ಗೂ ಸಹ ಮೊದಲ ಎಸೆತವನ್ನು ಸಿಕ್ಸರ್‌ಗೆ ಅಟ್ಟಿದ ವೈಭವ್ ಅದೇ ಓವರ್‌ನಲ್ಲಿ ನಿಧಾನವಾಗಿ ಎಸೆತ ಹಾಕುವ ಹಾಗೆ ಒತ್ತಡ ತಂದಿಟ್ಟು ಮತ್ತೊಂದು ಸಿಕ್ಸರ್ ಬಾರಿಸಿ ತಮ್ಮ ಪರಾಕ್ರಮ ತೋರಿಸಿದ್ದಾರೆ.

ಅನುಭವಿ ಆಟಗಾರರೇ ಹೆದರುವ ಬುಮ್ರಾ ವಿರುದ್ಧ ವೈಭವ್ ಆಡಿದ ಆಟ ಕಂಡು ನೆಟ್ಟಿಗರು ಹಾಗೂ ಹಲವಾರು ಮಾಜಿ ಕ್ರಿಕೆಟಿಗರು ಬೆರಗಾಗಿದ್ದು ಇರ್ಫಾನ್ ಪಠಾಣ್ ಸಹ ಈ ಸಾಲಿಗೆ ಸೇರಿದ್ದಾರೆ.

‘ಜಸ್‌ಪ್ರೀತ್ ಬುಮ್ರಾ ಯಾವುದೇ ಯೋಜನೆ ತಿಳಿಯದೇ ಹೋದದ್ದು ಹಾಗೂ ನಂತರ ಸ್ಲೋ ಬಾಲ್ ಎಸೆಯುವ ಹಾಗೆ ಮಾಡಿದ್ದು ವೈಭವ್ ಸೂರ್ಯವಂಶಿ ಬುಮ್ರಾರನ್ನು ಒತ್ತಡಕ್ಕೆ ತಳ್ಳಿದ ಕಾರಣದಿಂದ. ವೈಟ್‌ ಬಾಲ್ ಕ್ರಿಕೆಟ್‌ನಲ್ಲಿ ಭಾರತ ಜಸ್‌ಪ್ರೀತ್ ಬುಮ್ರಾ ರೀತಿಯ ಇನ್ನೊಬ್ಬ ಬೌಲರನ್ನು ಹುಟ್ಟುಹಾಕಿಯೇ ಇಲ್ಲ. ಅಂತಹ ಗೋಟ್ ಆತ. ಆತನ ವಿರುದ್ಧ ಈ ರೀತಿ ಆಡಿರುವುದು ದೊಡ್ಡ ಸಾಧನೆಯೇ ಸರಿ’ ಎಂದು ಇರ್ಫಾನ್ ಪಠಾಣ್ ವೈಭವ್ ಸೂರ್ಯವಂಶಿ ಆಟವನ್ನು ಕೊಂಡಾಡಿದ್ದಾರೆ.

‘ಬೌಲರ್ ಯಾರಾದರೂ ಬರಲಿ, ಆತ ಹೆಚ್ಚೇನೂ ತಲೆ ಕೆಡಿಸಿಕೊಳ್ಳುವುದಿಲ್ಲ. ಆತ ಕೇವಲ ಚೆಂಡನ್ನು ನೋಡುತ್ತಿರುತ್ತಾನೆ. ಆತನಿಗೆ ಸಿಕ್ಕರೆ ಸಾಕು ಚಚ್ಚುತ್ತಾ ಇರುತ್ತಾನೆ. ಈ ಯೋಚನೆಯೇ ಆತನನ್ನು ವಿಶೇಷವಾಗಿಸಿದೆ’ ಎಂದು ಪಠಾಣ್ ವೈಭವ್ ಯೋಜನೆಯನ್ನು ಹಾಡಿಹೊಗಳಿದರು.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular