HomeIPL 2026ಡಿಯರ್ ಸಿಎಸ್‌ಕೆ ಅಭಿಮಾನಿಗಳೇ ಬರೀ ಒಂದು ಸೋಲಿಗೆ ಇಷ್ಟು ಗೋಳಾಟ ಯಾಕೆ? ಎಲ್ಲ ಶುರು ಮಾಡಿದ್ದು...

ಡಿಯರ್ ಸಿಎಸ್‌ಕೆ ಅಭಿಮಾನಿಗಳೇ ಬರೀ ಒಂದು ಸೋಲಿಗೆ ಇಷ್ಟು ಗೋಳಾಟ ಯಾಕೆ? ಎಲ್ಲ ಶುರು ಮಾಡಿದ್ದು ನೀವೇ, ನಿಮ್ಮವರೇ!

ಮೊನ್ನೆ ( ಏಪ್ರಿಲ್ 5 ) ಬೆಂಗಳೂರಿನ ಎಂ ಚಿನ್ನಸ್ವಾಮಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026ರ ಲೀಗ್ ಹಂತದ 11ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 43 ರನ್‌ಗಳ ಬೃಹತ್ ಗೆಲುವನ್ನು ದಾಖಲಿಸಿತು.

ಟೂರ್ನಿಯಲ್ಲಿ ಇನ್ನೂ ಗೆಲುವಿನ ಖಾತೆಯನ್ನು ತೆರೆಯದ ಚೆನ್ನೈ ಸೂಪರ್ ಕಿಂಗ್ಸ್ ಮೂರನೇ ಪಂದ್ಯವನ್ನು ಸೋತು ಭಾರೀ ಮುಖಭಂಗಕ್ಕೆ ಒಳಗಾಯಿತು. ಇನ್ನು ಈ ಪಂದ್ಯ ಎರಡು ತಂಡಗಳ ನಡುವಿನ ಕಾಳಗ ಮಾತ್ರವಲ್ಲದೇ ಎರಡು ತಂಡಗಳ ನಡುವಿನ ಅಭಿಮಾನಿಗಳ ನಡುವಿನ ಪೈಪೋಟಿ ಸಹ ಹೌದು.

ನಿಜ, ಐಪಿಎಲ್ ಇತಿಹಾಸದಲ್ಲಿ ಎರಡು ತಂಡಗಳ ನಡುವೆ ಅತಿಯಾದ ವೈರತ್ವ, ಜಿದ್ದು ಇದೆ ಎಂದರೆ ಅದು ಆರ್‌ಸಿಬಿ ಹಾಗೂ ಸಿಎಸ್‌ಕೆ ಅಭಿಮಾನಿಗಳ ನಡುವೆಯೇ. ಇದಕ್ಕೆ ತಾಜಾ ಉದಾಹರಣೆಯೇ ಈ ಪಂದ್ಯ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಚಿನ್ನಸ್ವಾಮಿಯಲ್ಲಿ ನೆರೆದಿದ್ದ ಎರಡು ತಂಡಗಳ ಅಭಿಮಾನಿಗಳು ತಮ್ಮ ತಂಡಕ್ಕೆ ಬೆಂಬಲ ಸೂಚಿಸುವುದು ಮಾತ್ರವಲ್ಲದೇ ಎದುರಾಳಿ ತಂಡಕ್ಕೆ ಹಿನ್ನಡೆಯಾದಾಗ ಆ ತಂಡದ ಅಭಿಮಾನಿಗಳ ಬಳಿ ತೆರಳಿ ಕಿರುಚಾಡಿ ಕೀಟಲೆ ಮಾಡಿದ್ದಾರೆ.

ಇದು ಕೇವಲ ಕ್ರೀಡಾಂಗಣದ ದೃಶ್ಯವಲ್ಲ, ದೇಶದ ಇತರೆ ನಗರಗಳಲ್ಲಿ ಆಯೋಜಿಸಿದ್ದ ಫ್ಯಾನ್‌ ಪಾರ್ಕ್‌ನಲ್ಲೂ ಸಹ ಇದೇ ಪರಿಸ್ಥಿತಿ. ಈ ಘಟನೆಗಳ ಕುರಿತು ಇದೀಗ ಸಿಎಸ್‌ಕೆ ತಂಡದ ಅಭಿಮಾನಿಗಳು ಹಾಗೂ ಕಂಟೆಂಟ್ ಕ್ರಿಯೇಟರ್‌ಗಳು ವಿಡಿಯೊಗಳನ್ನು ಮಾಡಿ ಹಂಚಿಕೊಳ್ಳುತ್ತಿದ್ದು, ಕಿಡಿಕಾರುತ್ತಿದ್ದಾರೆ.

ಅಷ್ಟೇ ಅಲ್ಲದೇ ಚಿನ್ನಸ್ವಾಮಿ ಕ್ರೀಡಾಂಗಣದ ಡಿಜೆ ಕುರಿತು ಅತಿಯಾದ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸಂಜು ಸ್ಯಾಮ್ಸನ್ ಔಟ್ ಆದಾಗ ಚೆನ್ನೈಗೆ ತೆರಳುವ ರೈಲು ಬೆಂಗಳೂರಿನಿಂದ ಹೊರಟಿದೆ ಎಂದು ಘೋಷಣೆ ಮಾಡುತ್ತಾರೆ, ಅಲ್ಲದೇ ಇನ್ನಿಂಗ್ಸ್ ಮುಗಿದ ಬಳಿಕ ‘ದೋಸಾ, ಇಡ್ಲಿ, ಸಾಂಬಾರ್, ಚಟ್ನಿ, ಚಟ್ನಿ’ ಹಾಡು ಹಾಕಿ ಗೇಲಿ ಮಾಡುತ್ತಾರೆ, ಅಂತಾರಾಷ್ಟ್ರೀಯ ಕ್ರಿಕೆಟಿಗರಿಗೆ ನೀಡುವ ಗೌರವ ಇದೇನಾ ಎಂದು ಪ್ರಶ್ನಿಸಿದ್ದಾರೆ.

ಆದರೆ ಇದಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳು ಕೌಂಟರ್ ಕೊಟ್ಟಿದ್ದು, ಕೇವಲ ಒಂದೇ ಒಂದು ಸೋಲಿಗೆ ಬಂದ ಟ್ರೋಲ್‌ಗಳಿಗೆ ಇಷ್ಟು ತಲೆ ಕೆಡಿಸಿಕೊಂಡರೆ ಹೇಗೆ? ನಾವು ಇದನ್ನು 17 ವರ್ಷ ಎದುರಿಸಿದ್ದೇವೆ, ನಿಮ್ಮ ತಂಡದ ವಿರುದ್ಧ ಆರ್‌ಸಿಬಿ ಸೋತಾಗ ನಮ್ಮ ಅಭಿಮಾನಿಗಳಿಗೆ ನೀವು ಟೀ ಕಪ್ ತೋರಿಸಿ ರೇಗಿಸಿದ್ದು ಮರೆತುಹೋದ್ರಾ, ಈ ಸಲ ಕಪ್ಪು ಲಾಲಿ ಪಪ್ಪು ಎಂದು ಚಿನ್ನಸ್ವಾಮಿಯಲ್ಲೇ ಕಿರುಚಾಡಿದ್ದು ಮರೆತುಹೋಯ್ತಾ ಎಂದು ಪ್ರಶ್ನಿಸಿದ್ದಾರೆ.

ಇನ್ನು ಡಿಜೆ ವಿರುದ್ಧದ ಆಕ್ರೋಶಕ್ಕೆ ಸಹ ಕೌಂಟರ್ ನೀಡಿದ್ದು, ಕಳೆದ ವರ್ಷ ಜಿತೇಶ್ ಶರ್ಮಾ ನಿಮ್ಮ ಚೆಪಾಕ್ ಕ್ರೀಡಾಂಗಣದಲ್ಲಿ ಔಟ್ ಆದಾಗ ಅಲ್ಲಿನ ಡಿಜೆ ‘ದೋಸಾ, ಇಡ್ಲಿ, ಸಾಂಬಾರ್, ಚಟ್ನಿ, ಚಟ್ನಿ’ ಹಾಡನ್ನು ಹಾಕಿ ಕಾಲೆಳೆದಿದ್ದರು. ಆಗ ನಿಮಗೆ ಆತ ಕ್ರಿಕೆಟಿಗ ಎಂಬ ಗೌರವ ಕೊಡಬೇಕೆಂಬ ಪರಿಜ್ಞಾನ ಇರಲಿಲ್ಲವೇ? ಹಲವು ವರ್ಷಗಳ ಕಾಲ ನೀವು ಮಾಡಿದ ಟ್ರೋಲ್‌ಗೆ ಈಗ ಸಣ್ಣ ಕೌಂಟರ್ ಸಿಕ್ಕಿದೆ ಅಷ್ಟೇ, ನಾವು ಅನುಭವಿಸಿದ ಹಾಗೆ ನೀವೂ ಸಹ ಅನುಭವಿಸಿ ಎಂದಿದ್ದಾರೆ.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular