HomeIPL 2026ಅವನ ಬೌಲಿಂಗ್ ಕಂಡರೆ ಎಲ್ರಿಗೂ ಜ್ವರ ಬರುತ್ತೆ, ಆತನಿಗೆ ಸಿಕ್ಸರ್ ಹೊಡಿದುಬಿಟ್ಟಲ್ಲ ಇದು ನ್ಯಾಯನಾ ತಮ್ಮ?;...

ಅವನ ಬೌಲಿಂಗ್ ಕಂಡರೆ ಎಲ್ರಿಗೂ ಜ್ವರ ಬರುತ್ತೆ, ಆತನಿಗೆ ಸಿಕ್ಸರ್ ಹೊಡಿದುಬಿಟ್ಟಲ್ಲ ಇದು ನ್ಯಾಯನಾ ತಮ್ಮ?; ವೈಭವ್‌ಗೆ ಅಶ್ವಿನ್ ಪ್ರಶ್ನೆ

ನಿನ್ನೆ ( ಏಪ್ರಿಲ್ 7 ) ಗುವಾಹಟಿಯ ಬರ್ಸಾಪರ ಕ್ರೀಡಾಂಗಣದಲ್ಲಿ ನಡೆದ ಮುಂಬೈ ಇಂಡಿಯನ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳ ನಡುವಿನ 11 ಓವರ್‌ಗಳ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಬಲಿಷ್ಠ ಮುಂಬೈ ಇಂಡಿಯನ್ಸ್ ವಿರುದ್ಧ 27 ರನ್‌ಗಳ ಭರ್ಜರಿ ಜಯ ಸಾಧಿಸಿ ಟೂರ್ನಿಯಲ್ಲಿ ಹ್ಯಾಟ್ರಿಕ್ ಗೆಲುವು ಕಂಡು ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು.

ಮಳೆಯ ಕಾರಣದಿಂದಾಗಿ ತಡವಾಗಿ ಆರಂಭಗೊಂಡ ಓವರ್‌ ಕಡಿತಕ್ಕೊಳಗಾದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್ ಪರ ಆರಂಭಿಕರಾದ ಯಶಸ್ವಿ ಜೈಸ್ವಾಲ್ ಹಾಗೂ ವೈಭವ್ ಸೂರ್ಯವಂಶಿ ಅಬ್ಬರದ ಆರಂಭ ನೀಡಿದರು. 30 ಎಸೆತಗಳಲ್ಲಿ ಸಿಕ್ಸರ್‌ಗಳ ಸುರಿಮಳೆ ಸುರಿಸಿ ಅಬ್ಬರಿಸಿದ ಈ ಜೋಡಿ 80 ರನ್‌ಗಳ ಜತೆಯಾಟವನ್ನಾಡಿತು.

ಜೈಸ್ವಾಲ್ ಅಂತಿಮ ಹಂತದವರೆಗೂ ಇದ್ದು 32 ಎಸೆತಗಳಲ್ಲಿ ಅಜೇಯ 77 ರನ್ ಚಚ್ಚಿದರೆ, ವೈಭವ್ ಸೂರ್ಯವಂಶಿ 14 ಎಸೆತಗಳಲ್ಲಿ 1 ಬೌಂಡರಿ ಹಾಗೂ 5 ಸಿಕ್ಸರ್ ಸಿಡಿಸಿ 39 ರನ್ ಬಾರಿಸಿದರು. 15 ವರ್ಷದ ಸೂರ್ಯವಂಶಿ ಅಬ್ಬರ ಕಂಡು ಗುವಾಹಟಿ ಕ್ರೀಡಾಂಗಣದಲ್ಲಿದ್ದ ಕ್ರಿಕೆಟ್ ಪ್ರಿಯರು ಮತ್ತೊಮ್ಮೆ ಮನಸೋತರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇನ್ನು ವೈಭವ್ ಸೂರ್ಯವಂಶಿ ಈ ಆಟ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ಒಂದು ಕಾರಣಕ್ಕೆ ವಿಶೇಷವಾಗಿ ಭಾರೀ ಚರ್ಚೆಗೆ ಒಳಗಾಗಿದೆ. ಹೌದು, ವೈಭವ್ ವಿಶ್ವಶ್ರೇಷ್ಠ ಜಸ್‌ಪ್ರೀತ್ ಬುಮ್ರಾಗೆ ವೈಭವ್ ಸೂರ್ಯವಂಶಿ ಒಂದೇ ಓವರ್‌ನಲ್ಲಿ ಎರಡು ಸಿಕ್ಸರ್ ಚಚ್ಚಿದ್ದು ಭಾರೀ ಸದ್ದು ಮಾಡುತ್ತಿದೆ. ಹೌದು, ಇನ್ನಿಂಗ್ಸ್‌ನ ಎರಡನೇ ಓವರ್ ಮಾಡಿದ ಬುಮ್ರಾಗೆ ಮೊದಲ ಎಸೆತಕ್ಕೇ ಸಿಕ್ಸರ್ ಚಚ್ಚಿದ ವೈಭವ್ ಅದೇ ಓವರ್‌ನ ನಾಲ್ಕನೇ ಎಸೆತಕ್ಕೂ ಸಹ ಸಿಕ್ಸರ್ ಬಾರಿಸಿದರು.

ಇದರ ಬಗ್ಗೆ ಹಲವಾರು ನೆಟ್ಟಿಗರು ಮಾತನಾಡುತ್ತಿದ್ದು, ಮಾಜಿ ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್ ಸಹ ಈ ಬಗ್ಗೆ ಯುಟ್ಯೂಬ್‌ನಲ್ಲಿ ಮಾತನಾಡಿದ್ದಾರೆ. ‘ಅವರ ಹೆಸರು ಜಸ್‌ಪ್ರೀತ್ ಬುಮ್ರಾ. ವಿಶ್ವದಲ್ಲಿ ಎಲ್ಲೆಲ್ಲೋ ಹೋಗಿ ಭಾರತಕ್ಕೆ ಪಂದ್ಯವನ್ನು ಗೆಲ್ಲಿಸಿಕೊಟ್ಟಿದ್ದಾರೆ. ಅವರು ಬೌಲಿಂಗ್ ಮಾಡಿದರೆ ಕೆಲವರಿಗೆ ಜ್ವರ ಬರುತ್ತೆ. ಅದ್ಯಾವುದನ್ನೂ ಲೆಕ್ಕಿಸದೇ ಅವರ ಮೊದಲ ಎಸೆತಕ್ಕೆ ಸಿಕ್ಸರ್ ಬಾರಿಸಿದೆಯಲ್ಲ ಇದು ನ್ಯಾಯನಾ ತಮ್ಮ? ಮತ ಹಾಕುವ ಅರ್ಹತೆ ಇಲ್ಲ, ಕಾರು, ಬೈಕ್ ಓಡಿಸಲು ಲೈಸೆನ್ಸ್ ಪಡೆಯಲು ಸಹ ಆಗಲ್ಲ, ಸೈಕಲ್ ಓಡಿಸಬೇಕಾದರೆ ನಿಮ್ಮಪ್ಪ ಹಿಂದೆ ಬರುವ ವಯಸ್ಸು ನಿಂದು. ಹೀಗಿರುವಾಗ ಮನಸಾಕ್ಷಿಯಿಲ್ಲದೇ ಅವನ ಮೊದಲ ಬಾಲ್‌ಗೆ ಸಿಕ್ಸರ್ ಹೊಡೆದೆ ಓಕೆ. ಅದರ ಬಳಿಕ ಆತ ಹಾಕಿದ ನಿಧಾನಗತಿಯ ಎಸೆತಕ್ಕೂ ಸಿಕ್ಸರ್ ಬಾರಿಸಿದೆಯಲ್ಲ’ ಎಂದು ಹೇಳಿಕೆ ನೀಡಿ ವೈಭವ್ ಸೂರ್ಯವಂಶಿಯ ಆಟವನ್ನು ಹಾಡಿಹೊಗಳಿದ್ದಾರೆ.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular