HomeBusiness2 ಸಾವಿರ ಹೊಸ ಉದ್ಯೋಗಿಗಳಿಗೆ ಇನ್ಫೋಸಿಸ್ ನಲ್ಲಿ ಕೆಲಸ: ಸಿಇಒ ಸಲೀಲ್ ಪರೇಖ್

2 ಸಾವಿರ ಹೊಸ ಉದ್ಯೋಗಿಗಳಿಗೆ ಇನ್ಫೋಸಿಸ್ ನಲ್ಲಿ ಕೆಲಸ: ಸಿಇಒ ಸಲೀಲ್ ಪರೇಖ್

ನವದೆಹಲಿ: ಆಫರ್ ನೀಡಿರುವ 2000 ಜನರಿಗೆ ಕೆಲಸ ಕೊಡುವುದಾಗಿ ಇನ್ಫೋಸಿಸ್ ಸಿಇಒ ಸಲೀಲ್ ಪರೇಖ್ ತಿಳಿಸಿದ್ದಾರೆ.

2000 ಹೊಸ ಉದ್ಯೋಗಿಗಳಿಗೆ ಆಫರ್ ನೀಡಲಾಗಿದ್ದರೂ ಅವರನ್ನು ಕೆಲಸಕ್ಕೆ ಸೇರಿಸಿಕೊಳ್ಳದೆ ಎರಡು ವರ್ಷಗಳಿಂದ ಕಾಯಿಸಲಾಗುತ್ತಿದೆ ಎಂಬ ಆರೋಪಗಳಿಗೆ ಅವರು ಸ್ಪಷ್ಟನೆ ನೀಡಿದ್ದಾರೆ. ಆಫರ್ ನೀಡಿದವರಿಗೆ ಇನ್ಫೋಸಿಸ್ ಕೆಲಸಕ್ಕೆ ಸೇರಿಸಿಕೊಳ್ಳಲಿದೆ. ಈ ಪ್ರಕ್ರಿಯೆ ದಿನಾಂಕ ಮುಂದೂಡಲಾಗಿದೆಯೇ ಹೊರತು ನೇಮಕಾತಿಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲವೆಂದು ಅವರು ಹೇಳಿದ್ದಾರೆ.

2022ನೇ ಬ್ಯಾಚ್ ನ 2000 ಬಿಇ ವಿದ್ಯಾರ್ಥಿಗಳ ನೇಮಕಾತಿ ಮತ್ತು ವೇತನವಿಲ್ಲದ ತರಬೇತಿ, ಅನಿರೀಕ್ಷಿತ ಹೆಚ್ಚುವರಿ ಮೌಲ್ಯಮಾಪನ ನಡೆಸುವಲ್ಲಿ ಕಂಪನಿ ವಿಳಂಬ ಮಾಡುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಐಟಿ ಮತ್ತು ಐಟಿಇಎಸ್ ಒಕ್ಕೂಟವಾದ ಎನ್ಇಟಿಇಎಸ್ ವತಿಯಿಂದ ಈ ಬಗ್ಗೆ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದಲ್ಲಿ ದೂರು ದಾಖಲಿಸಿದ್ದು, ಇದರ ಬೆನ್ನಲ್ಲೇ ಸಲೀಲ್ ಪರೇಖ್ ಸ್ಪಷ್ಟನೆ ನೀಡಿ, ಆಫರ್ ಕೊಟ್ಟಿರುವ 2,000 ಜನರಿಗೆ ಕೆಲಸ ಕೊಡುವುದಾಗಿ ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular