HomeIndiaನಾಯಿಗಳಿಗಾಗಿಯೇ ಶುರುವಾಗಿದೆ ಈ ರೆಸ್ಟೋರೆಂಟ್

ನಾಯಿಗಳಿಗಾಗಿಯೇ ಶುರುವಾಗಿದೆ ಈ ರೆಸ್ಟೋರೆಂಟ್

ಶ್ವಾನಗಳನ್ನು ಪ್ರೀತಿಯಿಂದ ಸಾಕುವವರು ಅವುಗಳಿಗೆ ನೀಡುವ ಆಹಾರದ ಬಗ್ಗೆ ಹೆಚ್ಚು ಕಾಳಜಿ ಹೊಂದಿರ್ತಾರೆ. ಸಾಕು ನಾಯಿಗಳಿಗೆ ನೀಡುವ ಆಹಾರವನ್ನು ಅತಿ ಕಡಿಮೆ ಬೆಲೆಗೆ ಮಾರಾಟ ಮಾಡುವ ಅಂಗಡಿ ಮಧ್ಯಪ್ರದೇಶದಲ್ಲಿ ಆರಂಭವಾಗಿದೆ. ಅದುವೇ ಮಧ್ಯಪ್ರದೇಶದ ಇಂದೋರ್‌ನಲ್ಲಿರುವ ‘ಡಾಗಿ ಡಾಬಾ’. ಡಾಗಿ ಡಾಬಾದಲ್ಲಿ ನಾಯಿಗಳಿಗೆ ನೀಡುವ ಆಹಾರ ಪದಾರ್ಥಗಳನ್ನು ಮಾತ್ರ ಮಾರಾಟ ಮಾಡಲಾಗುತ್ತದೆ.

ಶ್ವಾನಪ್ರಿಯರಾದ ಬಾಲರಾಜ್ ಝಾಲಾ ಮತ್ತು ಅವರ ಪತ್ನಿ ಈ ಡಾಬಾವನ್ನ ಸ್ಥಾಪಿಸಿದ್ದಾರೆ. ಡಾಬಾದಲ್ಲಿ ನಾಯಿಗಳಿಗೆ ಆಹಾರ, ವಸತಿ ಮತ್ತು ಹುಟ್ಟುಹಬ್ಬದ ಆಚರಣೆಯ ಆಯ್ಕೆಗಳನ್ನು ನೀಡುತ್ತದೆ ಮತ್ತು ಸಾಕುನಾಯಿಗೆ ಆಹಾರ ವಿತರಣಾ ಸೇವೆಗಳನ್ನು ಸಹ ನೀಡಲಾಗುತ್ತದೆ.

ಸಸ್ಯಾಹಾರಿ ಮತ್ತು ಮಾಂಸಾಹಾರಿ ವಿಶೇಷತೆಗಳನ್ನೊಳಗೊಂಡಂತೆ ಅತಿ ಕಡಿಮೆ ಬೆಲೆ 7 ರೂಪಾಯಿಯಿಂದ ಹಿಡಿದು 500 ರೂ. ವರೆಗಿನ ಬೆಲೆಯಲ್ಲಿ ಡಾಬಾದಲ್ಲಿ ವಿವಿಧ ನಾಯಿ ಆಹಾರವನ್ನು ಒದಗಿಸಲಾಗುತ್ತದೆ. ಹೆಚ್ಚುವರಿಯಾಗಿ ನಾಯಿಗಳ ಜನ್ಮದಿನ ಆಚರಣೆಗಾಗಿ ವೈಯಕ್ತಿಕ ವಿಶೇಷ ಕೇಕ್ ಗಳನ್ನೂ ಸಹ ತಯಾರಿಸಲಾಗುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular