HomeInternationalವಿಮಾನದಲ್ಲೇ ಸಮೋಸಾ, ಧೋಕ್ಲಾ ದರ್ಬಾರ್: ಫ್ಲೈಟ್‌ ಅನ್ನು ‘ಮಿನಿ ಕ್ಯಾಫೆಟೇರಿಯಾ’ ಮಾಡಿದ ಕುಟುಂಬದ ವಿಡಿಯೋ ವೈರಲ್

ವಿಮಾನದಲ್ಲೇ ಸಮೋಸಾ, ಧೋಕ್ಲಾ ದರ್ಬಾರ್: ಫ್ಲೈಟ್‌ ಅನ್ನು ‘ಮಿನಿ ಕ್ಯಾಫೆಟೇರಿಯಾ’ ಮಾಡಿದ ಕುಟುಂಬದ ವಿಡಿಯೋ ವೈರಲ್

ಇಂಡಿಗೋ ವಿಮಾನವೊಂದರಲ್ಲಿ ಪ್ರಯಾಣಿಕರ ಕುಟುಂಬವೊಂದು ವಿಮಾನದ ಕ್ಯಾಬಿನ್ ಅನ್ನೇ ಮಿನಿ ಕ್ಯಾಫೆಟೇರಿಯಾದಂತೆ ಮಾಡಿಕೊಂಡು ಗೃಹನಿರ್ಮಿತ ತಿಂಡಿಗಳನ್ನು ಸವಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ವೈರಲ್ ಆಗಿರುವ ವಿಡಿಯೋದಲ್ಲಿ ಮಹಿಳೆಯೊಬ್ಬರು ಪ್ಲಾಸ್ಟಿಕ್ ತಟ್ಟೆಗಳನ್ನು ತೆಗೆದು ತಮ್ಮ ಕುಟುಂಬದ ಸದಸ್ಯರಿಗೆ ಸಮೋಸಾ, ಧೋಕ್ಲಾ, ಥೇಪ್ಲಾ ಮತ್ತು ಖಾರ ತಿಂಡಿಗಳನ್ನು ಬಡಿಸುತ್ತಿರುವುದು ಕಂಡುಬಂದಿದೆ. ಕುಟುಂಬದ ಸದಸ್ಯರು ತಟ್ಟೆಗಳನ್ನು ಹಿಡಿದು ವಿಮಾನದೊಳಗೆ ಓಡಾಡುತ್ತಾ ತಿಂಡಿ ಸವಿಯುತ್ತಿದ್ದರೆ, ಕೆಲ ಯುವತಿಯರು ತಮ್ಮ ನಖಗಳಿಗೆ ನೇಲ್ ಆರ್ಟ್ ಮಾಡಿಕೊಳ್ಳುತ್ತಿರುವುದು ವಿಡಿಯೋದಲ್ಲಿದೆ. ಪ್ರಯಾಣದ ಕೊನೆಯಲ್ಲಿ ಮಹಿಳೆಯೊಬ್ಬರು ಎಲ್ಲಾ ಬಳಕೆ ಮಾಡಿದ ತಟ್ಟೆಗಳನ್ನು ದೊಡ್ಡ ಕಸದ ಚೀಲಕ್ಕೆ ಹಾಕಿ ಶುಚಿಗೊಳಿಸಿದ್ದಾರೆ.

ಈ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ವಿಮಾನದಂತಹ ಕಿರಿದಾದ ವಾತಾವರಣದಲ್ಲಿ ಇಷ್ಟೊಂದು ಖಾರ ಮತ್ತು ಘಾಟು ವಾಸನೆ ಇರುವ ಆಹಾರವನ್ನು ಸೇವಿಸುವುದು ಇತರ ಪ್ರಯಾಣಿಕರಿಗೆ ಕಿರಿಕಿರಿ ಉಂಟುಮಾಡುತ್ತದೆ ಎಂದು ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ಇದನ್ನು ತಡೆಯದ ವಿಮಾನದ ಸಿಬ್ಬಂದಿಯ ನಡೆಯನ್ನು ಪ್ರಶ್ನಿಸಿದ್ದು, ವಿಮಾನಯಾನ ಸಂಸ್ಥೆಗಳು ಹೊರಗಿನ ಆಹಾರಕ್ಕೆ ಸೂಕ್ತ ನಿಯಮ ರೂಪಿಸಬೇಕು ಎಂದು ಆಗ್ರಹಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

“>

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular