ನವದೆಹಲಿ: ಭಾರತೀಯ ರೈಲ್ವೆ ಪರಿಸರ ಸ್ನೇಹಿ ಸಾರಿಗೆ ಕ್ಷೇತ್ರದಲ್ಲಿ ಮಹತ್ವದ ಹೆಜ್ಜೆ ಇಡುತ್ತಿದೆ. ದೇಶದ ಮೊದಲ ಹೈಡ್ರೋಜನ್ ರೈಲುಗೆ ಪ್ರಧಾನಿ Narendra Modi ಅವರು ಜುಲೈ 17ರಂದು ಚಾಲನೆ ನೀಡಲಿದ್ದಾರೆ.ಈ ರೈಲು ಹರಿಯಾಣದ ಜಿಂದ್‌ನಿಂದ ಸೋನಿಪತ್ ಮಾರ್ಗದಲ್ಲಿ ಸಂಚರಿಸಲಿದೆ. ಆರಂಭಿಕ ಹಂತದಲ್ಲಿ ಗಂಟೆಗೆ 75 ಕಿ.ಮೀ. ವೇಗದಲ್ಲಿ ಓಡಲಿದ್ದು, ಪರಿಸರ ಸ್ನೇಹಿ ಹಾಗೂ ಸ್ವಚ್ಛ ಸಾರಿಗೆ ವ್ಯವಸ್ಥೆಗೆ ಇದು ಹೊಸ ಮೈಲಿಗಲ್ಲಾಗಲಿದೆ.
ಹೌದು.ಭಾರತೀಯ ರೈಲ್ವೆ ಇತಿಹಾಸದಲ್ಲಿ ಹೊಸ ಅಧ್ಯಾಯ ಆರಂಭವಾಗಲಿದ್ದು, ದೇಶದ ಮೊದಲ ಹೈಡ್ರೋಜನ್ ರೈಲು ಜುಲೈ 17ರಂದು ಸಂಚಾರ ಆರಂಭಿಸಲಿದೆ. ಪ್ರಧಾನಿ Narendra Modi ಅವರು ಹರಿಯಾಣದ ಜಿಂದ್‌ನಲ್ಲಿ ರೈಲಿಗೆ ಹಸಿರು ನಿಶಾನೆ ತೋರಿಸಲಿದ್ದು, ಇದು ಜಿಂದ್–ಸೋನಿಪತ್ ಮಾರ್ಗದಲ್ಲಿ ಸಂಚರಿಸಲಿದೆ. ಪರಿಸರ ಸ್ನೇಹಿ ಇಂಧನ ತಂತ್ರಜ್ಞಾನ ಹೊಂದಿರುವ ಈ ರೈಲು ಒಮ್ಮೆ ಇಂಧನ ತುಂಬಿದರೆ ಸುಮಾರು 250 ಕಿ.ಮೀ. ಸಂಚರಿಸುವ ಸಾಮರ್ಥ್ಯ ಹೊಂದಿದ್ದು, ಆರಂಭಿಕ ಹಂತದಲ್ಲಿ ಗಂಟೆಗೆ 75 ಕಿ.ಮೀ. ವೇಗದಲ್ಲಿ ಓಡಲಿದೆ.
ಕಾರ್ಯಕ್ರಮಕ್ಕೂ ಮುನ್ನ, Nayab Singh Saini ಅವರು ಜಿಂದ್‌ಗೆ ಭೇಟಿ ನೀಡಿ ಸಿದ್ಧತೆಗಳನ್ನು ಪರಿಶೀಲಿಸಲಿದ್ದಾರೆ.ಈ ರೈಲು 1,200 ಕಿಲೋವಾಟ್ ಹೈಡ್ರೋಜನ್ ಫ್ಯೂಯೆಲ್ ಸೆಲ್ ಪ್ರೊಪಲ್ಷನ್ ಸಿಸ್ಟಂ ಮೂಲಕ ಕಾರ್ಯನಿರ್ವಹಿಸಲಿದೆ. ಪ್ರಯೋಗಾತ್ಮಕ ಸಂಚಾರದ ವೇಳೆ ಇದು ಗಂಟೆಗೆ 75 ಕಿ.ಮೀ. ವೇಗ ತಲುಪಿದೆ. ಒಮ್ಮೆ ಇಂಧನ ತುಂಬಿದರೆ ಸುಮಾರು 250 ಕಿ.ಮೀ. ದೂರ ಸಂಚರಿಸುವ ಸಾಮರ್ಥ್ಯ ಹೊಂದಿದೆ.
ರೈಲಿನ ವಿಶೇಷತೆಗಳು
- ಎರಡು 1,200 ಕಿಲೋವಾಟ್ ಚಾಲನಾ ಘಟಕಗಳು
- 8 ಪ್ರಯಾಣಿಕರ ಬೋಗಿಗಳು
- ಫ್ಯೂಯೆಲ್ ಸೆಲ್ ವ್ಯವಸ್ಥೆ
- ಹೈಡ್ರೋಜನ್ ಸಂಗ್ರಹ ಸಿಲಿಂಡರ್‌ಗಳು
- ಬ್ಯಾಟರಿ ಹಾಗೂ ನಿಯಂತ್ರಣ ವ್ಯವಸ್ಥೆಗೆ ಪ್ರತ್ಯೇಕ ಸ್ಥಳ
ಹೈಡ್ರೋಜನ್ ತಂತ್ರಜ್ಞಾನವು ರಾಸಾಯನಿಕ ಕ್ರಿಯೆಯ ಮೂಲಕ ವಿದ್ಯುತ್ ಉತ್ಪಾದಿಸುತ್ತದೆ. ಇದರ ಉಪ ಉತ್ಪನ್ನವಾಗಿ ನೀರಿನ ಆವಿ ಮತ್ತು ಶಾಖ ಮಾತ್ರ ಹೊರಬರುತ್ತದೆ. ಹಾನಿಕಾರಕ ಹೊಗೆ ಅಥವಾ ಕಾರ್ಬನ್ ಉತ್ಸರ್ಜನೆ ಇರುವುದಿಲ್ಲ.
54 ಹೈಡ್ರೋಜನ್ ಸಿಲಿಂಡರ್‌ಗಳು
ಈ ರೈಲಿನಲ್ಲಿ ಒಟ್ಟು 54 ಹೈಡ್ರೋಜನ್ ಸಿಲಿಂಡರ್‌ಗಳನ್ನು ಅಳವಡಿಸಲಾಗಿದೆ. ಮುಂಭಾಗದಲ್ಲಿ 27 ಹಾಗೂ ಹಿಂಭಾಗದಲ್ಲಿ 27 ಸಿಲಿಂಡರ್‌ಗಳಿವೆ. ಸುರಕ್ಷತೆಯ ದೃಷ್ಟಿಯಿಂದ ಹೈಡ್ರೋಜನ್ ಸೋರಿಕೆ ಪತ್ತೆ ಸಾಧನಗಳು ಹಾಗೂ ಅಗ್ನಿ ಪತ್ತೆ ವ್ಯವಸ್ಥೆಯನ್ನು ವಿವಿಧ ಭಾಗಗಳಲ್ಲಿ ಅಳವಡಿಸಲಾಗಿದೆ. ಇವುಗಳನ್ನು ನಿಯಮಿತವಾಗಿ ಪರಿಶೀಲಿಸಿ ನಿರ್ವಹಿಸಲಾಗುತ್ತದೆ.
ಸಂಪೂರ್ಣ ಸ್ವದೇಶಿ ಅಭಿವೃದ್ಧಿ
ಈ ಹೈಡ್ರೋಜನ್ ರೈಲಿನ ವಿನ್ಯಾಸವನ್ನು Research Designs and Standards Organisation (RDSO), ಲಖನೌ ಅಭಿವೃದ್ಧಿಪಡಿಸಿದ್ದು, ನಿರ್ಮಾಣದ ಜವಾಬ್ದಾರಿಯನ್ನು Integral Coach Factory (ICF), ಚೆನ್ನೈ ನಿರ್ವಹಿಸಿದೆ.
ಏಕೆ ಹೈಡ್ರೋಜನ್ ರೈಲು?
ಪರ್ವತ ಪ್ರದೇಶಗಳು ಅಥವಾ ಭೌಗೋಳಿಕ ಸವಾಲುಗಳಿರುವ ಮಾರ್ಗಗಳಲ್ಲಿ ಓವರ್‌ಹೆಡ್ ವಿದ್ಯುತ್ ಲೈನ್‌ಗಳನ್ನು ಅಳವಡಿಸುವುದು ಕಷ್ಟಕರ. ಇಂತಹ ಪ್ರದೇಶಗಳಿಗೆ ಹೈಡ್ರೋಜನ್ ರೈಲು ಅತ್ಯುತ್ತಮ ಪರ್ಯಾಯವಾಗಿದೆ. ಸ್ವಚ್ಛ ಇಂಧನ ಬಳಕೆಯ ರೈಲು ತಂತ್ರಜ್ಞಾನ ಅಭಿವೃದ್ಧಿಯಲ್ಲಿ ಭಾರತ, Germany, China ಹಾಗೂ United States ಸೇರಿದಂತೆ ಹಲವು ದೇಶಗಳು ಕಾರ್ಯನಿರ್ವಹಿಸುತ್ತಿವೆ.

