HomeLatest Newsಇನ್ನೆರಡು ವರ್ಷಗಳಲ್ಲಿ ಭಾರತದ ಆರ್ಥಿಕತೆ 5 ಟ್ರಿಲಿಯನ್ ಡಾಲರ್‌; ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಣೆ

ಇನ್ನೆರಡು ವರ್ಷಗಳಲ್ಲಿ ಭಾರತದ ಆರ್ಥಿಕತೆ 5 ಟ್ರಿಲಿಯನ್ ಡಾಲರ್‌; ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಣೆ

ನವದೆಹಲಿ: ಭಾರತದ ಆರ್ಥಿಕತೆ 2028–29ರ ವೇಳೆಗೆ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಿ ಬೆಳೆಯಲಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ರಾಜ್ಯಸಭೆಯಲ್ಲಿ ಮಂಗಳವಾರ ತಿಳಿಸಿದ್ದಾರೆ.

ಭಾರತದ ಆರ್ಥಿಕತೆ ಇನ್ನೆರಡು ವರ್ಷಗಳಲ್ಲಿ 5 ಟ್ರಿಲಿಯನ್ ಡಾಲರ್ ಗಡಿ ದಾಟಲಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ಐಎಂಎಫ್ ಅಂದಾಜಿನಂತೆ 2028–29ರ ವೇಳೆಗೆ ಭಾರತದ ಜಿಡಿಪಿ 5.1 ಟ್ರಿಲಿಯನ್ ಡಾಲರ್ಗೆ ತಲುಪಲಿದ್ದು, ಕೃಷಿ, ಉತ್ಪಾದನೆ, ಮೂಲಸೌಕರ್ಯ, ಎಂಎಸ್ಎಂಇ ಹಾಗೂ ಡಿಜಿಟಲ್ ಕ್ಷೇತ್ರಗಳಿಗೆ ಉತ್ತೇಜನ ನೀಡುವ ಮೂಲಕ ಈ ಗುರಿ ಸಾಧಿಸಲಾಗುವುದು ಎಂದು ತಿಳಿಸಿದ್ದಾರೆ.ಅಂತರರಾಷ್ಟ್ರೀಯ ಹಣಕಾಸು ನಿಧಿ (IMF) ಅಂದಾಜಿನ ಪ್ರಕಾರ, ಇನ್ನೆರಡು ವರ್ಷಗಳಲ್ಲಿ ಭಾರತದ ಜಿಡಿಪಿ 5.1 ಟ್ರಿಲಿಯನ್ ಡಾಲರ್ಗೆ ಏರಿಕೆಯಾಗಲಿದೆ ಎಂದು ಅವರು ಉಲ್ಲೇಖಿಸಿದರು.

ಎಲ್ಲಾ ಕ್ಷೇತ್ರಗಳಲ್ಲಿ ಸಮತೋಲನದ ಬೆಳವಣಿಗೆ ಸಾಧಿಸುವ ಮೂಲಕ ಈ ಮೈಲುಗಲ್ಲು ತಲುಪಲು ಸರ್ಕಾರ ವ್ಯಾಪಕ ಅಭಿವೃದ್ಧಿ ತಂತ್ರ (Broad-Based Strategy) ಜಾರಿಗೆ ತಂದಿದೆ ಎಂದು ತಿಳಿಸಿದರು. ಕೃಷಿ ಉತ್ಪಾದನೆ ಹೆಚ್ಚಿಸುವುದು, ಉತ್ಪಾದನಾ ವಲಯಕ್ಕೆ ಉತ್ತೇಜನ ನೀಡುವುದು, ಎಂಎಸ್ಎಂಇಗಳಿಗೆ ಬೆಂಬಲ, ಮೂಲಸೌಕರ್ಯ ಅಭಿವೃದ್ಧಿ, ಲಾಜಿಸ್ಟಿಕ್ಸ್ ಸುಧಾರಣೆ ಹಾಗೂ Ease of Doing Businessಗೆ ಆದ್ಯತೆ ನೀಡಲಾಗುತ್ತಿದೆ ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಜಿಎಸ್ಟಿ ಮತ್ತು ಆದಾಯ ತೆರಿಗೆ ಸುಧಾರಣೆಗಳ ಮೂಲಕ ಅಡೆತಡೆರಹಿತ ತೆರಿಗೆ ವ್ಯವಸ್ಥೆ ರೂಪಿಸಲಾಗಿದೆ ಎಂದು ಅವರು ಹೇಳಿದರು.”ಸರ್ಕಾರದ ಬಂಡವಾಳ ವೆಚ್ಚವನ್ನು ಹೆಚ್ಚಿಸುವುದು, ನೇರ ವಿದೇಶಿ ಹೂಡಿಕೆ (FDI) ನಿಯಮಗಳನ್ನು ಸರಳಗೊಳಿಸುವುದು, ರಫ್ತು ಹೆಚ್ಚಿಸುವುದು ಹಾಗೂ ಆರ್ಥಿಕತೆಯನ್ನು ಮತ್ತಷ್ಟು ಬಲಪಡಿಸುವ ಮೂಲಕ ಈ ಗುರಿ ಸಾಧಿಸಲಾಗುತ್ತಿದೆ. ಹಣಕಾಸಿನ ಶಿಸ್ತು ಕಾಪಾಡುತ್ತಾ ಹಣಕಾಸು ಕೊರತೆಯನ್ನು ನಿಯಂತ್ರಿಸಲಾಗುತ್ತಿದೆ. ಮುಕ್ತ ವ್ಯಾಪಾರ ಒಪ್ಪಂದಗಳಿಂದ (FTA) ರಫ್ತು ಹೆಚ್ಚುತ್ತಿದೆ,” ಎಂದು ನಿರ್ಮಲಾ ಸೀತಾರಾಮನ್ ವಿವರಿಸಿದರು.

ವಿವಿಧ ಕ್ಷೇತ್ರಗಳ ಅಭಿವೃದ್ಧಿಗೆ ಸರ್ಕಾರದ ಕ್ರಮಗಳು
ಕೃಷಿ ಕ್ಷೇತ್ರ
• ನೀರಾವರಿ ಯೋಜನೆಗಳಲ್ಲಿ ಹೂಡಿಕೆ
• ತಂತ್ರಜ್ಞಾನ ಬಳಕೆಗೆ ಉತ್ತೇಜನ
• ಡಿಜಿಟಲ್ ಕೃಷಿ ಮಿಷನ್
• ಬೆಳೆ ವೈವಿಧ್ಯೀಕರಣ
• ಮಾರುಕಟ್ಟೆ ಸೌಲಭ್ಯಗಳ ಸುಧಾರಣೆ ಮೂಲಕ ಉತ್ಪಾದಕತೆ ಹೆಚ್ಚಿಸುವುದು
ಉತ್ಪಾದನೆ ಮತ್ತು ಮೂಲಸೌಕರ್ಯ
• Make in India
• Production Linked Incentive (PLI) ಯೋಜನೆ
• ರಾಷ್ಟ್ರೀಯ ಲಾಜಿಸ್ಟಿಕ್ಸ್ ನೀತಿ
• PM ಗತಿಶಕ್ತಿ ಯೋಜನೆ ಮೂಲಕ ದೇಶೀಯ ಉತ್ಪಾದನೆ ಮತ್ತು ಉದ್ಯೋಗ ವೃದ್ಧಿ

MSMEಗಳಿಗೆ ಬೆಂಬಲ
• ತುರ್ತು ಸಾಲ ಖಾತರಿ ಯೋಜನೆ (Emergency Credit Guarantee Scheme)
• ಉಚಿತ ಉದ್ಯಮ್ ನೋಂದಣಿ
• PM ವಿಶ್ವಕರ್ಮ ಯೋಜನೆ
• TReDS ವೇದಿಕೆಯ ಮೂಲಕ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಹಣಕಾಸು ನೆರವು

ಸೇವಾ ಕ್ಷೇತ್ರ ಮತ್ತು ಡಿಜಿಟಲ್ ಕ್ರಾಂತಿ
• ಡಿಜಿಟಲ್ ಪಬ್ಲಿಕ್ ಇನ್ಫ್ರಾಸ್ಟ್ರಕ್ಚರ್ (DPI)
• ಗ್ಲೋಬಲ್ ಕ್ಯಾಪೆಬಿಲಿಟಿ ಸೆಂಟರ್ಗಳು (GCCs)
• ಕೃತಕ ಬುದ್ಧಿಮತ್ತೆ (AI)ಗೆ ಉತ್ತೇಜನ
ಭವಿಷ್ಯದ ಕೈಗಾರಿಕೆಗಳು ಮತ್ತು ಕೌಶಲ್ಯಾಭಿವೃದ್ಧಿ
• ಸೆಮಿಕಂಡಕ್ಟರ್, ಬಯೋಫಾರ್ಮಾ, ಶುದ್ಧ ಇಂಧನ, ರೇರ್ ಅರ್ಥ್ ಖನಿಜ ಕ್ಷೇತ್ರಗಳಿಗೆ ವಿಶೇಷ ಒತ್ತು
• PM ಸೇತು ಯೋಜನೆಯಡಿ ನವೀಕರಿಸಿದ ಐಟಿಐಗಳ ಮೂಲಕ ಯುವಕರಿಗೆ ಕೌಶಲ್ಯ ತರಬೇತಿ

ಸರ್ಫೇಸಿ ಕಾಯ್ದೆಯಿಂದ ₹32,466 ಕೋಟಿ ವಸೂಲಿ
ಕೇಂದ್ರ ಬಜೆಟ್ 2026–27ರಲ್ಲಿ ಘೋಷಿಸಲಾದ ರಾಷ್ಟ್ರೀಯ ಆತಿಥ್ಯ ಸಂಸ್ಥೆ, ಪ್ರಾದೇಶಿಕ ವೈದ್ಯಕೀಯ ಹಬ್ಗಳು ಹಾಗೂ AVGC (Animation, Visual Effects, Gaming & Comics) ಲ್ಯಾಬ್ಗಳು 2047ರ ‘ವಿಕಸಿತ ಭಾರತ’ ಗುರಿ ಸಾಧನೆಯಲ್ಲಿ ಪ್ರಮುಖ ಪಾತ್ರ ವಹಿಸಲಿವೆ ಎಂದು ನಿರ್ಮಲಾ ಸೀತಾರಾಮನ್ ವಿಶ್ವಾಸ ವ್ಯಕ್ತಪಡಿಸಿದರು. ಇದೇ ವೇಳೆ SARFAESI ಕಾಯ್ದೆ ಮೂಲಕ ಬ್ಯಾಂಕುಗಳು ₹32,466 ಕೋಟಿ ಮೊಂಡುಬಾಕಿ ಸಾಲವನ್ನು ವಸೂಲಿ ಮಾಡಿವೆ ಎಂದು ಅವರು ತಿಳಿಸಿದರು. 2024–25 ಹಣಕಾಸು ವರ್ಷದಲ್ಲಿ ಸರ್ಫೇಸಿ ಕಾಯ್ದೆಯಡಿ ಬ್ಯಾಂಕುಗಳು 2,15,709 ಪ್ರಕರಣಗಳನ್ನು ದಾಖಲಿಸಿದ್ದು, ಅವುಗಳಲ್ಲಿ ₹1,03,180 ಕೋಟಿ ಸಾಲ ಬಾಕಿ ಉಳಿದಿತ್ತು. ಕಠಿಣ ಕ್ರಮಗಳ ಮೂಲಕ ಅದರಲ್ಲಿ ₹32,466 ಕೋಟಿ ಯಶಸ್ವಿಯಾಗಿ ವಸೂಲಿ ಮಾಡಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ರಾಜ್ಯಸಭೆಗೆ ಮಾಹಿತಿ ನೀಡಿದರು.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular