ಭಾರತೀಯ ರೈಲ್ವೆಯು ತನ್ನ ಡಿಜಿಟಲ್ ಸೇವೆಯಲ್ಲಿ ಕ್ರಾಂತಿಕಾರಿ ಬದಲಾವಣೆ ತರುತ್ತಿದೆ. ಡಿಸೆಂಬರ್ 27, 2014 ರಂದು ಆರಂಭವಾಗಿದ್ದ ಹಳೆಯ UTS (Unreserved Ticketing System) ಮೊಬೈಲ್ ಅಪ್ಲಿಕೇಶನ್ ಸೇವೆಯನ್ನು ರೈಲ್ವೆ ಸಚಿವಾಲಯವು ಸ್ಥಗಿತಗೊಳಿಸಲಿದೆ. ಇದರ ಬದಲಾಗಿ ಕಳೆದ ವರ್ಷ ಬಿಡುಗಡೆಯಾದ ಹೆಚ್ಚು ಬಳಕೆದಾರ ಸ್ನೇಹಿ ‘ರೈಲ್ ಒನ್’ (RailOne) ಸೂಪರ್ ಆ್ಯಪ್ ಅನ್ನು ಬಳಸಲು ಪ್ರಯಾಣಿಕರಿಗೆ ಸೂಚಿಸಲಾಗಿದೆ.
ರೈಲ್ವೆ ಮಂಡಳಿಯ ಎಕ್ಸಿಕ್ಯೂಟಿವ್ ಡೈರೆಕ್ಟರ್ ದಿಲೀಪ್ ಕುಮಾರ್ ಅವರ ಪ್ರಕಾರ, ”ರೈಲ್ ಒನ್’ ‘ ಪ್ರಯಾಣಿಕರಿಗೆ ಬೇಕಾದ ಎಲ್ಲಾ ಡಿಜಿಟಲ್ ಸೌಲಭ್ಯಗಳನ್ನು ಒಂದೇ ವೇದಿಕೆಯಲ್ಲಿ ನೀಡುವ ‘ಒನ್-ಸ್ಟಾಪ್’ ಸೊಲ್ಯೂಷನ್ ಆಗಿದೆ. ಈ ಆ್ಯಪ್ ಈಗಾಗಲೇ ಬಳಕೆಯಲ್ಲಿರುವ ರೈಲ್ ಕನೆಕ್ಟ್ (RailConnect) ಮತ್ತು UTS ಆ್ಯಪ್ಗಳ ಲಾಗಿನ್ ವಿವರಗಳನ್ನು (Credentials) ಬೆಂಬಲಿಸುತ್ತದೆ.
ಒಂದೇ ಆ್ಯಪ್’ನಲ್ಲಿ ಸಿಗುವ ಸಮಗ್ರ ಸೇವೆಗಳು
• ಕಾಯ್ದಿರಿಸದ (Unreserved), ಕಾಯ್ದಿರಿಸಿದ (Reserved) ಮತ್ತು ಪ್ಲಾಟ್ಫಾರ್ಮ್ ಟಿಕೆಟ್ಗಳ ಬುಕಿಂಗ್.
• IRCTC ರೈಲ್ ಕನೆಕ್ಟ್, NTES (ರೈಲು ಮಾಹಿತಿ), ರೈಲ್ ಮದದ್ (ದೂರುಗಳು) ಮತ್ತು ಫುಡ್ ಆನ್ ಟ್ರ್ಯಾಕ್ (ಆಹಾರ ಆರ್ಡರ್) ಸೇವೆಗಳ ಏಕೀಕರಣ.
ಅನ್ರಿಸರ್ವ್ಡ್ ಟಿಕೆಟ್ ಬುಕಿಂಗ್ ಮೇಲೆ 3% ರಿಯಾಯಿತಿ!
ಡಿಜಿಟಲ್ ಟಿಕೆಟಿಂಗ್ ಅನ್ನು ಉತ್ತೇಜಿಸಲು ರೈಲ್ವೆಯು ಜನವರಿ 2026 ರಿಂದ ಆಕರ್ಷಕ ರಿಯಾಯಿತಿಗಳನ್ನು ಘೋಷಿಸಿದೆ:
• 3% ರಿಯಾಯಿತಿ: ರೈಲ್ವನ್ ಆ್ಯಪ್ನಲ್ಲಿ UPI, ಡೆಬಿಟ್/ಕ್ರೆಡಿಟ್ ಕಾರ್ಡ್ ಅಥವಾ ನೆಟ್ ಬ್ಯಾಂಕಿಂಗ್ ಮೂಲಕ ಅನ್ರಿಸರ್ವ್ಡ್ ಟಿಕೆಟ್ ಬುಕ್ ಮಾಡುವವರಿಗೆ ಶೇ. 3 ರಷ್ಟು ರಿಯಾಯಿತಿ ಸಿಗಲಿದೆ.
• ಆರ್-ವ್ಯಾಲೆಟ್ (R-Wallet): ಆರ್-ವ್ಯಾಲೆಟ್ ಮೂಲಕ ಬುಕ್ ಮಾಡುವವರಿಗೆ ಪ್ರಸ್ತುತ ಇರುವ 3% ಬೋನಸ್ ಕ್ಯಾಶ್ಬ್ಯಾಕ್ ಸೌಲಭ್ಯ ಯಾವುದೇ ಬದಲಾವಣೆ ಇಲ್ಲದೆ ಮುಂದುವರಿಯಲಿದೆ.
• ಅವಧಿ: ಈ 3% ರಿಯಾಯಿತಿ ಯೋಜನೆಯು 14.01.2026 ರಿಂದ 14.07.2026 ರವರೆಗೆ (ಆರು ತಿಂಗಳು) ಚಾಲ್ತಿಯಲ್ಲಿರುತ್ತದೆ ಎಂದು ರೈಲ್ವೆ ಪ್ರಕಟಿಸಿದೆ.
RailOne ಆ್ಯಪ್ ಪ್ರಮುಖ ವೈಶಿಷ್ಟ್ಯಗಳು
• ಸುಲಭ ಬುಕಿಂಗ್: ಸುರಕ್ಷಿತ ಪಾವತಿ ಆಯ್ಕೆಗಳೊಂದಿಗೆ (UPI, ಕಾರ್ಡ್ಗಳು, ನೆಟ್ ಬ್ಯಾಂಕಿಂಗ್) ಸುಲಭವಾಗಿ ಟಿಕೆಟ್ ಬುಕ್ ಮಾಡಬಹುದು.
• ಲೈವ್ ರೈಲು ಮಾಹಿತಿ: ರೈಲು ಟ್ರ್ಯಾಕಿಂಗ್, ವಿಳಂಬದ ಮಾಹಿತಿ, ಆಗಮನ/ನಿರ್ಗಮನ ಸಮಯ, ಪ್ಲಾಟ್ಫಾರ್ಮ್ ಮಾಹಿತಿ ಮತ್ತು ಕೋಚ್ ಇರುವ ಸ್ಥಳವನ್ನು ನೈಜ ಸಮಯದಲ್ಲಿ ತಿಳಿಯಬಹುದು.
• PNR ಸ್ಥಿತಿ: ಕನ್ಫರ್ಮ್ ಆಗಿರುವ ಅಥವಾ ವೇಟಿಂಗ್ ಲಿಸ್ಟ್ನಲ್ಲಿರುವ PNR ಸ್ಥಿತಿಯನ್ನು ಸುಲಭವಾಗಿ ಪರಿಶೀಲಿಸಬಹುದು.
• ಸೀಟಿಗೆ ಆಹಾರ: IRCTC ಅನುಮೋದಿತ ವಿಕ್ರೇತರಿಂದ ನೇರವಾಗಿ ನಿಮ್ಮ ಸೀಟಿಗೆ ಆಹಾರವನ್ನು ಆರ್ಡರ್ ಮಾಡಬಹುದು.

