HomeLatest NewsBREAKING: ನ್ಯೂಕ್ಲಿಯರ್ ಬ್ಲಾಕ್ ಮೇಲ್ ಗೆ ಭಾರತ ಬಗ್ಗಲ್ಲ: ಉಗ್ರವಾದ ನಿಲ್ಲಿಸದಿದ್ರೆ ಬಗ್ಗು ಬಡಿಯುತ್ತೇವೆ: ಪಾಕಿಸ್ತಾನಕ್ಕೆ...

BREAKING: ನ್ಯೂಕ್ಲಿಯರ್ ಬ್ಲಾಕ್ ಮೇಲ್ ಗೆ ಭಾರತ ಬಗ್ಗಲ್ಲ: ಉಗ್ರವಾದ ನಿಲ್ಲಿಸದಿದ್ರೆ ಬಗ್ಗು ಬಡಿಯುತ್ತೇವೆ: ಪಾಕಿಸ್ತಾನಕ್ಕೆ ಮೋದಿ ನೇರ ಎಚ್ಚರಿಕೆ

ನವದೆಹಲಿ: ನ್ಯೂಕ್ಲಿಯರ್ ಬ್ಲಾಕ್ ಮೇಲ್ ಗೆ ಭಾರತ ಬಗ್ಗುವುದಿಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಇದೀಗ ದೇಶವನ್ನುದ್ದೇಶಿಸಿ ಮಾತನಾಡಿದ ಅವರು, ಇಂತಹ ಬೆದರಿಕೆಗೆ ನಾವು ಸರಿಯಾದ ಉತ್ತರವನ್ನೇ ಕೊಡುತ್ತೇವೆ. ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಮುಗಿದಿಲ್ಲ, ಸದ್ಯಕ್ಕೆ ನಿಂತಿದೆ ಅಷ್ಟೇ ಎಂದು ಹೇಳಿದ್ದಾರೆ.

ಸರ್ಜಿಕಲ್ ಸ್ಟ್ರೈಕ್, ಏರ್ ಸ್ಟ್ರೈಕ್ ಬಳಿಕ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಮೂಲಕ ಉಗ್ರರನ್ನು ಸದೆಬಡಿದಿದ್ದೇವೆ. ನಮ್ಮ ಭಾರತದ ಪಡೆಗಳು ಹೋರಾಟಕ್ಕೆ ಸಿದ್ಧವಾಗಿವೆ. ಯಾವುದೇ ಉಗ್ರ ಕೃತ್ಯಕ್ಕೆ ಸಜ್ಜಾಗಿವೆ. ನಮ್ಮ ದಾಳಿಗೆ ಹೆದರಿದ ಪಾಕಿಸ್ತಾನ ಜಗತ್ತಿನ ಮುಂದೆ ಕಣ್ಣೀರಿಟ್ಟಿದೆ. ಮತ್ತೆ ಉಗ್ರವಾದ ಆದರೆ ನಮ್ಮದೇ ರೀತಿಯಲ್ಲಿ ಉತ್ತರಿಸುತ್ತೇವೆ. ರಣರಂಗದಲ್ಲಿ ಪಾಕಿಸ್ತಾನಕ್ಕೆ ಭಾರತ ಯಾವತ್ತೂ ಸೋತಿಲ್ಲ. ಹೊಸ ಯುಗದ ಯುದ್ಧದಲ್ಲಿಯೂ ಭಾರತದ ಶ್ರೇಷ್ಠತೆ ಇದೆ ಎಂದು ಹೇಳಿದ್ದಾರೆ.

ಮೇಡ್ ಇನ್ ಇಂಡಿಯಾ ಶಸ್ತ್ರಾಸ್ತ್ರಗಳ ಬಲವನ್ನು ನೋಡುತ್ತಿದ್ದಾರೆ. ಆಪರೇಷನ್ ಸಿಂಧೂರ ಒಂದು ಮಾನದಂಡವನ್ನು ರೂಪಿಸಿದೆ. ಮೇಡ್ ಇನ್ ಇಂಡಿಯಾ ರಕ್ಷಣಾ ವ್ಯವಸ್ಥೆಯ ಸಮಯ ಬಂದಿದೆ. ಯಾವುದೇ ನ್ಯೂಕ್ಲಿಯರ್ ಬ್ಲಾಕ್ ಮೇಲ್ ಗೆ ನಾವು ಹೆದುರುವುದಿಲ್ಲ. ಪಾಕಿಸ್ತಾನ ಉಗ್ರ ಸ್ಥಾನಗಳನ್ನು ಶುದ್ಧ ಮಾಡಲೇಬೇಕು. ಅಲ್ಲಿಯವರೆಗೆ ಶಾಂತಿಯ ಯಾವುದೇ ದಾರಿಯೂ ಇಲ್ಲ. ಉಗ್ರರು, ಉಗ್ರರಿಗೆ ಬೆಂಬಲ ನೀಡುವವರು ಇಬ್ಬರೂ ಒಂದೇ. ಪಾಕಿಸ್ತಾನ ಉಗ್ರ ಸ್ಥಾನಗಳನ್ನು ಶುದ್ಧ ಮಾಡಲೇಬೇಕು ಎಂದು ಮೋದಿ ಹೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಭಯೋತ್ಪಾದನೆ ನಿಲ್ಲಿಸದಿದ್ದರೆ ಪಾಕಿಸ್ತಾನಕ್ಕೆ ಉಳಿಗಾಲವಿಲ್ಲ ಎಂದು ನೇರ ಎಚ್ಚರಿಕೆ ನೀಡಿದ ಮೋದಿ ಪಾಕಿಸ್ತಾನ ಬದುಕಬೇಕು ಎಂದರೆ ಉಗ್ರವಾದ ನಿಲ್ಲಿಸಲೇಬೇಕು. ನೀರು ಮತ್ತು ರಕ್ತ ಒಂದೇ ದಾರಿಯಲ್ಲಿ ಹರಿಯುವುದಿಲ್ಲ. ಉಗ್ರವಾದ, ವ್ಯಾಪಾರ ಜೊತೆಗಿರಲು ಆಗುವುದಿಲ್ಲ ಎಂದಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular