HomeLatest Newsಪಾಕಿಸ್ತಾನ ವಿರುದ್ಧ ಭಾರತಕ್ಕೆ 228 ರನ್ ಭರ್ಜರಿ ಜಯ: ಕೊಹ್ಲಿ, ರಾಹುಲ್ ಅಬ್ಬರ, ಕುಲದೀಪ್ ಗೆ...

ಪಾಕಿಸ್ತಾನ ವಿರುದ್ಧ ಭಾರತಕ್ಕೆ 228 ರನ್ ಭರ್ಜರಿ ಜಯ: ಕೊಹ್ಲಿ, ರಾಹುಲ್ ಅಬ್ಬರ, ಕುಲದೀಪ್ ಗೆ 5 ವಿಕೆಟ್

ಕೊಲಂಬೊ: ಏಷ್ಯಾಕಪ್ ಕ್ರಿಕೆಟ್ ಟೂರ್ನಿ ಸೂಪರ್ -4 ಹಂತದ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಭರ್ಜರಿ ಜಯಗಳಿಸಿದೆ.

ಭಾನುವಾರ ಆರಂಭವಾಗಿದ್ದ ಪಂದ್ಯ ಮಳೆಯ ಕಾರಣದಿಂದಾಗಿ ಸೋಮವಾರಕ್ಕೆ ಮುಂದೂಡಿಕೆಯಾಗಿತ್ತು. ಸೋಮವಾರ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಭಾರತ ವಿರಾಟ್ ಕೊಹ್ಲಿ ಮತ್ತು ಕೆ.ಎಲ್. ರಾಹುಲ್ ಭರ್ಜರಿ ಶತಕದಿಂದ 50 ಓವರ್ ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ 356 ರನ್ ಗಳ ಬೃಹತ್ ಮೊತ್ತ ದಾಖಲಿಸಿತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬೃಹತ್ ಮೊತ್ತದ ಗೆಲುವಿನ ಗುರಿ ಬೆನ್ನತ್ತಿದ ಪಾಕಿಸ್ತಾನ 32 ಓವರ್ ಗಳಲ್ಲಿ 128 ರನ್ ಗೆ ಆಲ್ ಔಟ್ ಆಯಿತು. ಭಾರತ 228 ರನ್ ಗಳ ಅಂತರದಿಂದ ಜಯಗಳಿಸಿದ್ದು, ಫೈನಲ್ ಗೇರುವ ನಿರೀಕ್ಷೆಯಲ್ಲಿದೆ.

ಭಾರತದ ಪರ ರೋಹಿತ್ ಶರ್ಮಾ 56, ಶುಭ ಮನ್ ಗಿಲ್ 58 ವಿರಾಟ್ ಕೊಹ್ಲಿ ಅಜೇಯ 122, ಕೆ.ಎಲ್. ರಾಹುಲ್ ಅಜೇಯ 111 ರನ್ ಗಳಿಸಿದರು.

ಪಾಕಿಸ್ತಾನ ಪರವಾಗಿ ಫಕರ್ ಜಮಾನ್ 27, ಆಗಾ ಸಲ್ಮಾನ್ 23, ಇಫ್ತಿಕಾರ್ ಅಹಮದ್ 23, ಬಾಬರ್ ಅಜಮ್ 10 ರನ್ ಹೊರತುಪಡಿಸಿ ಉಳಿದವರು ಎರಡು ಅಂಕಿ ತಲುಪಲಿಲ್ಲ. ಭಾರತದ ಪರವಾಗಿ ಕುಲದೀಪ್ ಯಾದವ್ 5, ಜಸ್ ಪ್ರೀತ್ ಬುಮ್ರಾ, ಹಾರ್ದಿಕ್ ಪಾಂಡ್ಯ, ಶಾರ್ದೂಲ್ ಠಾಕೂರ್ ತಲಾ ವಿಕೆಟ್ ಪಡೆದರು.

ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್ ನಲ್ಲಿ 47ನೇ ಶತಕ ಬಾರಿಸಿದ್ದಾರೆ. ಕೊಲಂಬೋದ ಪ್ರೇಮದಾಸ ಕ್ರೀಡಾಂಗಣದಲ್ಲಿ ಸತತ ನಾಲ್ಕನೇ ಶತಕ ಗಳಿಸಿದ್ದಾರೆ. ಅಲ್ಲದೇ, ಏಕದಿನ ಕ್ರಿಕೆಟ್ ನಲ್ಲಿ ವಿರಾಟ್ ಕೊಹ್ಲಿ 13 ಸಾವಿರ ರನ್ ಬಾರಿಸಿದ್ದಾರೆ.

278 ಏಕದಿನ ಪಂದ್ಯಗಳನ್ನಾಡಿರುವ ವಿರಾಟ್ ಕೊಹ್ಲಿ 13,024 ರನ್ ಗಳಿಸಿದ್ದಾರೆ. 47 ಶತಕ, 65 ಅರ್ಧ ಶತಕ ಸಿಡಿಸಿದ್ದಾರೆ.

ಕೆ.ಎಲ್. ರಾಹುಲ್ ಅಜೇಯ 111 ರನ್ ಗಳಿಸಿದ್ದಾರೆ. ಅವರು ಅಂತರರಾಷ್ಟ್ರೀಯ ಕ್ರಿಕೆಟ್ ನಲ್ಲಿ ಅವರು ಆರನೇ ಶತಕ ಬಾರಿಸಿದ್ದಾರೆ. 55 ಏಕದಿನ ಪಂದ್ಯಗಳನ್ನಾಡಿರುವ ವಿರಾಟ್ ಕೊಹ್ಲಿ 2097 ರನ್ ಗಳಿಸಿದ್ದಾರೆ. 6 ಶತಕ, 13 ಅರ್ಧಶತಕ ಬಾರಿಸಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular