HomeBusinessಚೀನಾ ಹಿಂದಿಕ್ಕಿದ ಭಾರತ ಹೂಡಿಕೆಯ ಅತ್ಯಂತ ಆಕರ್ಷಕ ಮಾರುಕಟ್ಟೆ

ಚೀನಾ ಹಿಂದಿಕ್ಕಿದ ಭಾರತ ಹೂಡಿಕೆಯ ಅತ್ಯಂತ ಆಕರ್ಷಕ ಮಾರುಕಟ್ಟೆ

ನವದೆಹಲಿ: ಚೀನಾವನ್ನು ಹಿಂದಿಕ್ಕಿದ ಭಾರತ ಈಗ ಅತ್ಯಂತ ಆಕರ್ಷಕ ಉದಯೋನ್ಮುಖ ಹೂಡಿಕೆಯ ಮಾರುಕಟ್ಟೆಯಾಗಿದೆ.

85 ಸವರಿನ್ ಸಂಪತ್ತು ನಿಧಿಗಳು ಮತ್ತು 57 ಸೆಂಟ್ರಲ್ ಬ್ಯಾಂಕ್‌ಗಳ ಪ್ರಕಾರ ಒಟ್ಟು $21 ಟ್ರಿಲಿಯನ್ ಆಸ್ತಿಯನ್ನು ಪ್ರತಿನಿಧಿಸುವ EM ಸಾಲದಲ್ಲಿ ಹೂಡಿಕೆ ಮಾಡುವಲ್ಲಿ ಭಾರತ ಚೀನಾ ಹಿಂದಿಕ್ಕಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಭಾರತವು ತನ್ನ ಸುಧಾರಿತ ವ್ಯಾಪಾರ ಮತ್ತು ರಾಜಕೀಯ ಸ್ಥಿರತೆ, ಅನುಕೂಲಕರ ಜನಸಂಖ್ಯಾಶಾಸ್ತ್ರ, ನಿಯಂತ್ರಕ ಉಪಕ್ರಮಗಳು ಮತ್ತು ಸಾರ್ವಭೌಮ ಹೂಡಿಕೆದಾರರಿಗೆ ಸೌಹಾರ್ದ ವಾತಾವರಣಕ್ಕಾಗಿ ಹೆಚ್ಚು ಪಾಸಿಟಿವ್ ಆಗಿದೆ ಎಂದು ‘ಇನ್ವೆಸ್ಕೊ ಗ್ಲೋಬಲ್ ಸಾರ್ವಭೌಮ ಆಸ್ತಿ ನಿರ್ವಹಣಾ ಅಧ್ಯಯನ’ ವರದಿ ತಿಳಿಸಿದೆ.

ವರದಿಯು 142 ಮುಖ್ಯ ಹೂಡಿಕೆ ಅಧಿಕಾರಿಗಳು, 85 ಸಾರ್ವಭೌಮ ಸಂಪತ್ತು ನಿಧಿಗಳು ಮತ್ತು 57 ಕೇಂದ್ರೀಯ ಬ್ಯಾಂಕ್‌ಗಳ ಹಿರಿಯ ಪೋರ್ಟ್‌ಫೋಲಿಯೊ ತಂತ್ರಜ್ಞರೊಂದಿಗೆ ಆಸ್ತಿ ವರ್ಗಗಳ ಮುಖ್ಯಸ್ಥರ ಅಭಿಪ್ರಾಯಗಳನ್ನು ಒಳಗೊಂಡಿದೆ. ಸಾರ್ವಭೌಮ ಹೂಡಿಕೆದಾರರು ಬಯಸಿದ ಗುಣಲಕ್ಷಣಗಳನ್ನು ಭಾರತವು ಉದಾಹರಣೆಯಾಗಿ ತೋರಿಸುತ್ತದೆ. ಎಮರ್ಜಿಂಗ್ ಮಾರುಕಟ್ಟೆಯ ಸಾಲದಲ್ಲಿ ಹೂಡಿಕೆ ಮಾಡಲು ಭಾರತವು ಈಗ ಚೀನಾವನ್ನು ಹಿಂದಿಕ್ಕಿ ಅತ್ಯಂತ ಆಕರ್ಷಕ ಉದಯೋನ್ಮುಖ ಮಾರುಕಟ್ಟೆಯಾಗಿದೆ ಎಂದು ಹೇಳಲಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular