ಇತ್ತೀಚಿನ ದಿನಗಳಲ್ಲಿ ಬೆಳಗ್ಗೆ ಕಣ್ಣು ಬಿಟ್ಟಾಗಿನಿಂದ ರಾತ್ರಿ ಮಲಗುವವರೆಗೆ ಫೋನ್, ಲ್ಯಾಪ್‌ಟಾಪ್, ಆಫೀಸ್ ಕೆಲಸ ಹೀಗೆ ಪ್ರತಿಯೊಂದಕ್ಕೂ ನಮಗೆ ಇಂಟರ್ನೆಟ್ ಬೇಕೇ ಬೇಕು. ಜಗತ್ತಿನಲ್ಲೇ ಅತ್ಯಂತ ಅಗ್ಗದ ಡೇಟಾ ಪ್ಲಾನ್‌ಗಳು ಮತ್ತು ಕೈಗೆಟುಕುವ ಬೆಲೆಯ ಸ್ಮಾರ್ಟ್‌ಫೋನ್‌ಗಳು ಭಾರತದಲ್ಲಿ ಇಂಟರ್ನೆಟ್ ಕ್ರಾಂತಿಯನ್ನೇ ಸೃಷ್ಟಿಸಿವೆ. ಇಂಟರ್ನೆಟ್ ಈಗ ಕೇವಲ ಸೋಶಿಯಲ್ ಮೀಡಿಯಾಗೆ ಸೀಮಿತವಾಗಿಲ್ಲ ವೀಡಿಯೊ ಸ್ಟ್ರೀಮಿಂಗ್, ಆನ್‌ಲೈನ್ ಗೇಮಿಂಗ್ ಮತ್ತು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (AI) ಅಪ್ಲಿಕೇಶನ್‌ಗಳಿಂದಾಗಿ ಭಾರತೀಯರ ಡೇಟಾ ಹಸಿವು ಜಾಗತಿಕ ಮಟ್ಟದಲ್ಲಿ ಹೊಸ ದಾಖಲೆ ಬರೆದಿದೆ
ಹೌದು, ಇತ್ತೀಚಿನ ಜಾಗತಿಕ ವರದಿಗಳ ಪ್ರಕಾರ, ಭಾರತೀಯರು ಈಗ ವಿಶ್ವದಲ್ಲೇ ಅತಿ ಹೆಚ್ಚು ಮೊಬೈಲ್ ಡೇಟಾ ಬಳಸುವ ಗ್ರಾಹಕರಾಗಿದ್ದಾರೆ. ಹಾಗಾದರೆ ಒಬ್ಬ ಭಾರತೀಯ ದಿನಕ್ಕೆ ಮತ್ತು ತಿಂಗಳಿಗೆ ಎಷ್ಟು ಇಂಟರ್ನೆಟ್ ಖಾಲಿ ಮಾಡ್ತಾರೆ? ಇಲ್ಲಿದೆ ಕಂಪ್ಲೀಟ್ ಮಾಹಿತಿ
ಪ್ರಮುಖ ಜಾಗತಿಕ ವರದಿಗಳ ಪ್ರಕಾರ ಭಾರತೀಯರ ಇಂಟರ್ನೆಟ್ ಬಳಕೆ :
ನೋಕಿಯಾ ಮೊಬೈಲ್ ಬ್ರಾಡ್‌ಬ್ಯಾಂಡ್ ಸೂಚ್ಯಂಕ ವರದಿ
ಮಾಸಿಕ ಸರಾಸರಿ ಬಳಕೆ (Monthly Data): ಪ್ರತಿ ಬಳಕೆದಾರನಿಗೆ ತಿಂಗಳಿಗೆ 31 GB ಗಿಂತ ಹೆಚ್ಚು ಡೇಟಾ ಬಳಕೆ.
ದೈನಂದಿನ ಸರಾಸರಿ ಬಳಕೆ : ಪ್ರತಿದಿನ ಸರಾಸರಿ 1 GB ಗಿಂತ ಹೆಚ್ಚು ಡೇಟಾ ಬಳಕೆ.
ಎರಿಕ್ಸನ್ ಮೊಬಿಲಿಟಿ ವರದಿ
ಮಾಸಿಕ ಸರಾಸರಿ ಬಳಕೆ : ಪ್ರತಿ ಬಳಕೆದಾರನಿಗೆ ತಿಂಗಳಿಗೆ 36 GB ಗಿಂತ ಹೆಚ್ಚು ಡೇಟಾ ಬಳಕೆ.
ದೈನಂದಿನ ಸರಾಸರಿ ಬಳಕೆ : ಪ್ರತಿದಿನ ಸರಾಸರಿ 1.2 GB ಗಿಂತ ಹೆಚ್ಚು ಡೇಟಾ ಬಳಕೆ.
ಇದು ಕೇವಲ ದೇಶದ ಸರಾಸರಿ (Average) ಲೆಕ್ಕಾಚಾರವಾಗಿದೆ. ಆದರೆ ಹಗಲಿರುಳು ರೀಲ್ಸ್, ಆನ್‌ಲೈನ್ ಗೇಮಿಂಗ್, 4K ವಿಡಿಯೋ ಸ್ಟ್ರೀಮಿಂಗ್ ಮತ್ತು AI ಆಪ್ಸ್ ಬಳಸುವ ಯುವ ಪೀಳಿಗೆಯ ದೈನಂದಿನ ಬಳಕೆ ಇದಕ್ಕಿಂತ ಮೂರ್ನಾಲ್ಕು ಪಟ್ಟು ಹೆಚ್ಚಾಗಿದೆ
ಡೇಟಾ ಬಳಕೆ ಇಷ್ಟೊಂದು ಹೆಚ್ಚಾಗಲು ಅಸಲಿ ಕಾರಣಗಳೇನು?
5G ನೆಟ್‌ವರ್ಕ್ ಧಮಾಕಾ: ಭಾರತದಲ್ಲಿ 5G ನೆಟ್‌ವರ್ಕ್‌ಗಳ ಅದ್ಭುತ ವಿಸ್ತರಣೆಯು ಡೇಟಾ ಬಳಕೆಯನ್ನು ರಾಕೆಟ್ ವೇಗದಲ್ಲಿ ಹೆಚ್ಚಿಸಿದೆ. ಮೆಟ್ರೋ ನಗರಗಳ ಒಟ್ಟು ಮೊಬೈಲ್ ಡೇಟಾ ಟ್ರಾಫಿಕ್‌ನಲ್ಲಿ ಈಗ ಬರೋಬ್ಬರಿ ಶೇ. 58 ರಷ್ಟು ಕೇವಲ 5G ನೆಟ್‌ವರ್ಕ್ ಮೂಲಕವೇ ಬಳಕೆಯಾಗುತ್ತಿದೆ
ಹೈ-ಕ್ವಾಲಿಟಿ ವಿಡಿಯೋ ಸ್ಟ್ರೀಮಿಂಗ್: ಯೂಟ್ಯೂಬ್, ಒಟಿಟಿ ಮತ್ತು ಸೋಶಿಯಲ್ ಮೀಡಿಯಾಗಳಲ್ಲಿ 4K ಗುಣಮಟ್ಟದ ವಿಡಿಯೋಗಳನ್ನು ವೀಕ್ಷಿಸುವುದು ಹೆಚ್ಚಾಗಿದೆ.
ಸ್ಮಾರ್ಟ್ ಡಿವೈಸ್‌ಗಳ ಹಾವಳಿ: ದೇಶದಲ್ಲಿ ಸಕ್ರಿಯವಾಗಿರುವ 4G ಸಾಧನಗಳ ಸಂಖ್ಯೆ 892 ಮಿಲಿಯನ್ ತಲುಪಿದ್ದು, ಅದರಲ್ಲಿ 383 ಮಿಲಿಯನ್‌ಗಿಂತಲೂ ಹೆಚ್ಚು ಡಿವೈಸ್‌ಗಳು ಹೈ-ಸ್ಪೀಡ್ 5G ಅನ್ನು ಸಪೋರ್ಟ್ ಮಾಡುತ್ತಿವೆ.
ತಿಂಗಳಿಗೆ 27 ಎಕ್ಸಾಬೈಟ್ಸ್ (ಭಾರತದ ಒಟ್ಟು ಡೇಟಾ ಟ್ರಾಫಿಕ್)
ಭಾರತದ ಒಟ್ಟು ಮೊಬೈಲ್ ಡೇಟಾ ಟ್ರಾಫಿಕ್ ತಿಂಗಳಿಗೆ ಬರೋಬ್ಬರಿ 27 ಎಕ್ಸಾಬೈಟ್‌ಗಳಿಗಿಂತಲೂ (Exabytes) ಹೆಚ್ಚು ತಲುಪುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದೆ. ಇದರಲ್ಲಿ ಕೇವಲ 5G ಡೇಟಾ ಟ್ರಾಫಿಕ್ ವರ್ಷದಿಂದ ವರ್ಷಕ್ಕೆ ಶೇ. 70 ರಷ್ಟು ಭರ್ಜರಿ ಬೆಳವಣಿಗೆ ಕಂಡು, ತಿಂಗಳಿಗೆ 12.9 ಎಕ್ಸಾಬೈಟ್‌ಗಳನ್ನು ತಲುಪಿದೆ. ಅಂದರೆ ಒಟ್ಟು ಇಂಟರ್ನೆಟ್ ಬಳಕೆಯಲ್ಲಿ ಸುಮಾರು ಶೇ. 47 ರಷ್ಟು ಪಾಲು ಕೇವಲ 5G ಬಳಕೆದಾರರದ್ದಾಗಿದೆ

