HomeIndiaBIG NEWS: ದೇಶದಲ್ಲಿ ಐಪಿಸಿ ಬದಲಿಗೆ ಹೊಸ ಕಾನೂನು ಜಾರಿ: ಸಂಸತ್ ನಲ್ಲಿ ಒಪ್ಪಿಗೆ ಪಡೆದ...

BIG NEWS: ದೇಶದಲ್ಲಿ ಐಪಿಸಿ ಬದಲಿಗೆ ಹೊಸ ಕಾನೂನು ಜಾರಿ: ಸಂಸತ್ ನಲ್ಲಿ ಒಪ್ಪಿಗೆ ಪಡೆದ ನ್ಯಾಯ ಸಂಹಿತಾ, ಸುರಕ್ಷಾ ಸಂಹಿತಾ, ಸಾಕ್ಷಿ ಮಸೂದೆಗೆ ರಾಷ್ಟ್ರಪತಿ ಒಪ್ಪಿಗೆ

ನವದೆಹಲಿ: 3 ಹೊಸ ಕಾನೂನುಗಳಿಗೆ ರಾಷ್ಟ್ರಪತಿ ಅನುಮೋದನೆ ನೀಡಿದ್ದಾರೆ. ಈ ಮೂಲಕ ಭಾರತವು ಹೊಸ ಅಪರಾಧ ಕಾನೂನುಗಳನ್ನು ಪಡೆದಿದೆ. ವಸಾಹತುಶಾಹಿ ಯುಗದ ಕೋಡ್‌ಗಳನ್ನು ಬದಲಿಸುವ ಮಸೂದೆಗಳು ರಾಷ್ಟ್ರಪತಿಗಳ ಅನುಮೋದನೆ ಪಡೆದುಕೊಂಡಿವೆ

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಭಾರತೀಯ ನ್ಯಾಯ ಸಂಹಿತಾ, ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ ಮತ್ತು ಭಾರತೀಯ ಸಾಕ್ಷಿ ಮಸೂದೆಗೆ ಒಪ್ಪಿಗೆ ನೀಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಭಾರತೀಯ ದಂಡ ಸಂಹಿತೆ(IPC), ಕ್ರಿಮಿನಲ್ ಪ್ರಕ್ರಿಯಾ ಸಂಹಿತೆ(CrPC) ಮತ್ತು ಎವಿಡೆನ್ಸ್ ಆಕ್ಟ್ ಅನ್ನು ಬದಲಿಸುವ ಮೂರು ಕ್ರಿಮಿನಲ್ ಮಸೂದೆಗಳಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಸೋಮವಾರ ಸಹಿ ಹಾಕಿದ್ದಾರೆ.

ಸೋಮವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಒಪ್ಪಿಗೆ ಪಡೆದ ನಂತರ ಭಾರತೀಯ ದಂಡ ಸಂಹಿತೆ(IPC), ಕ್ರಿಮಿನಲ್ ಪ್ರಕ್ರಿಯಾ ಸಂಹಿತೆ(CrPC) ಮತ್ತು ಎವಿಡೆನ್ಸ್ ಆಕ್ಟ್ ಅನ್ನು ಬದಲಿಸಲು ಮೂರು ಕ್ರಿಮಿನಲ್ ಮಸೂದೆಗಳು ಕಾನೂನಾಗಿ ಜಾರಿಗೆ ಬಂದವು.

ಇತ್ತೀಚೆಗೆ ಮುಕ್ತಾಯಗೊಂಡ ಚಳಿಗಾಲದ ಅಧಿವೇಶನದಲ್ಲಿ ಭಾರತೀಯ ಸಾಕ್ಷಿ ಸಂಹಿತಾ 2023, ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ ಮಸೂದೆ 2023 ಮತ್ತು ಭಾರತೀಯ ನ್ಯಾಯ ಸಂಹಿತಾ, 2023 ಅನ್ನು ಸಂಸತ್ತಿನ ಉಭಯ ಸದನಗಳು ಅಂಗೀಕರಿಸಿದವು. ರಾಷ್ಟ್ರಪತಿಗಳು ಕ್ರಿಮಿನಲ್ ಕಾನೂನುಗಳನ್ನು ಬದಲಿಸಲು 3 ಬಿಲ್‌ಗಳಿಗೆ ಒಪ್ಪಿಗೆ ನೀಡಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular