HomeLatest NewsALERT : ರಾಜ್ಯದಲ್ಲಿ ಬಿಸಿಲಿನ ತಾಪ ಹೆಚ್ಚಳ : ಸಾರ್ವಜನಿಕರಿಗೆ ಮಹತ್ವದ ಪ್ರಕಟಣೆ.!

ALERT : ರಾಜ್ಯದಲ್ಲಿ ಬಿಸಿಲಿನ ತಾಪ ಹೆಚ್ಚಳ : ಸಾರ್ವಜನಿಕರಿಗೆ ಮಹತ್ವದ ಪ್ರಕಟಣೆ.!

ರಾಜ್ಯದಲ್ಲಿ ಬೇಸಿಗೆಯ ತಾಪಮಾನ ದಿನೇ ದಿನೇ ಏರಿಕೆಯಾಗುತ್ತಿದ್ದು, ಬಿಸಿಲಿನ ಅಲೆ (Heat Wave) ಹೆಚ್ಚಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಬಳ್ಳಾರಿ  ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಯಲ್ಲಾ ರಮೇಶ್ ಬಾಬು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಫೆಬ್ರವರಿಯಲ್ಲೇ ಅಸಾಮಾನ್ಯ ಏರಿಕೆ: ಈ ವರ್ಷ ಫೆಬ್ರವರಿ ತಿಂಗಳಲ್ಲೇ ತಾಪಮಾನ ಸಾಮಾನ್ಯಕ್ಕಿಂತ ಹೆಚ್ಚಾಗಿ ದಾಖಲಾಗುತ್ತಿದೆ. ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿ ಉಷ್ಣಾಂಶದ ತೀವ್ರತೆ ಹೆಚ್ಚಿದೆ ಮಾರ್ಚ್‌ನಿಂದ ಮೇ 2026ರ ಅವಧಿಯಲ್ಲಿ ರಾಜ್ಯಾದ್ಯಂತ ವಾಡಿಕೆಗಿಂತ ಹೆಚ್ಚಿನ ತಾಪಮಾನ ಇರಲಿದೆ. ಉತ್ತರ ಕರ್ನಾಟಕದಲ್ಲಿ ತೀವ್ರ ಶಾಖದ ಅಲೆ (Severe Heat Wave) ಉಂಟಾಗುವ ಸಾಧ್ಯತೆಯಿದ್ದು, ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ ರಾಜಧಾನಿ ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ ಈಗಾಗಲೇ 31°C ದಾಟಿದ್ದು, ಏಪ್ರಿಲ್-ಮೇ ವೇಳೆಗೆ ಇದು 39°C ನಿಂದ 40°C ವರೆಗೆ ತಲುಪುವ ಅಂದಾಜಿದೆ.

ಬಿಸಿಲಿನ ಬೇಗೆಯಿಂದ ಉಂಟಾಗಬಹುದಾದ ಶಾಖಾಘಾತ (Heat Stroke) ಮತ್ತು ಇತರ ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟಲು ಈ ಕೆಳಗಿನ ಕ್ರಮಗಳನ್ನು ಪಾಲಿಸಲು ಸೂಚಿಸಲಾಗಿದೆ:

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬಿಸಿಲಿನಿಂದ ರಕ್ಷಿಸಿಕೊಳ್ಳಲು ಏನು ಮಾಡಬೇಕು?

  • ಉಡುಪು: ಸಡಿಲವಾದ, ತಿಳಿ ಬಣ್ಣದ ಹತ್ತಿ ಬಟ್ಟೆಗಳನ್ನು ಧರಿಸಿ. ಗಾಳಿಯಾಡುವಂತಹ ಪಾದರಕ್ಷೆಗಳನ್ನು ಬಳಸಿ.
  • ಪಾನೀಯ: ಬಾಯಾರಿಕೆ ಇಲ್ಲದಿದ್ದರೂ ಆಗಾಗ ನೀರು ಕುಡಿಯಿರಿ. ಉಪ್ಪು-ಸಕ್ಕರೆ ಮಿಶ್ರಿತ ನೀರು, ಹಣ್ಣಿನ ರಸ, ಮಜ್ಜಿಗೆ, ಎಳೆನೀರು ಮತ್ತು ಪಾನಕಗಳಿಗೆ ಆದ್ಯತೆ ನೀಡಿ.
  • ಆಹಾರ: ಮನೆಯಲ್ಲಿ ತಯಾರಿಸಿದ ತಾಜಾ, ಸಾತ್ವಿಕ ಮತ್ತು ಕಡಿಮೆ ಮಸಾಲೆಯುಕ್ತ ಆಹಾರ ಸೇವಿಸಿ.
  • ಪ್ರಯಾಣ: ಹೊರಗಡೆ ಹೋಗುವಾಗ ಕುಡಿಯುವ ನೀರಿನ ಬಾಟಲಿಯನ್ನು ತಪ್ಪದೇ ಜೊತೆಯಲ್ಲಿಟ್ಟುಕೊಳ್ಳಿ.

ಬಾಯಾರಿಕೆ ಇಲ್ಲದಿದ್ದರೂ ಆಗಾಗ ನೀರು, ಮಜ್ಜಿಗೆ ಅಥವಾ ಎಳೆನೀರು ಕುಡಿಯಿರಿ.ಸಡಿಲವಾದ, ತಿಳಿ ಬಣ್ಣದ ಹತ್ತಿ ಬಟ್ಟೆಗಳನ್ನು ಧರಿಸಿ ಮತ್ತು ಹೊರಹೋಗುವಾಗ ಛತ್ರಿ ಅಥವಾ ಟೋಪಿ ಬಳಸಿ. ಮಸಾಲೆ ರಹಿತ ಸಾತ್ವಿಕ ಆಹಾರಕ್ಕೆ ಆದ್ಯತೆ ನೀಡಿ, ರಸ್ತೆ ಬದಿಯ ಕತ್ತರಿಸಿದ ಹಣ್ಣುಗಳನ್ನು ತಿನ್ನಬೇಡಿ. ಶಾಖಾಘಾತದ ಲಕ್ಷಣಗಳು (ತಲೆಸುತ್ತು, ಅತಿಯಾದ ಸುಸ್ತು) ಕಂಡುಬಂದಲ್ಲಿ ತಕ್ಷಣ 104 ಅಥವಾ 108 ಸಹಾಯವಾಣಿಗೆ ಕರೆ ಮಾಡಿ.

ಶಾಖಾಘಾತಕ್ಕೊಳಗಾದಾಗ ಕೈಗೊಳ್ಳಬೇಕಾದ ತುರ್ತು ಕ್ರಮಗಳು

ಯಾರಾದರೂ ಬಿಸಿಲಿನಿಂದಾಗಿ ಪ್ರಜ್ಞೆ ತಪ್ಪಿದರೆ ಅಥವಾ ಅಸಂಬದ್ಧವಾಗಿ ಮಾತನಾಡುತ್ತಿದ್ದರೆ ತಕ್ಷಣ ಈ ಕ್ರಮ ಕೈಗೊಳ್ಳಿ:

  1. ವ್ಯಕ್ತಿಯನ್ನು ತಕ್ಷಣ ನೆರಳಿರುವ ತಂಪಾದ ಜಾಗಕ್ಕೆ ಸ್ಥಳಾಂತರಿಸಿ.
  2. ಕಾಲುಗಳನ್ನು ಸ್ವಲ್ಪ ಎತ್ತರದಲ್ಲಿರಿಸಿ ಮಲಗಿಸಿ ಮತ್ತು ಬಟ್ಟೆಗಳನ್ನು ಸಡಿಲಗೊಳಿಸಿ.
  3. ಹಣೆ, ಕತ್ತು ಮತ್ತು ಪಾದಗಳನ್ನು ಸಾಮಾನ್ಯ ನೀರಿನಿಂದ ಒರೆಸಿ. (ಗಮನಿಸಿ: ಅತಿ ತಣ್ಣಗಿನ ಅಥವಾ ಐಸ್ ನೀರನ್ನು ಬಳಸಬೇಡಿ).
  4. ಪರಿಸ್ಥಿತಿ ಗಂಭೀರವಾಗಿದ್ದರೆ ತಕ್ಷಣ 104 ಅಥವಾ 108 ಕ್ಕೆ ಕರೆ ಮಾಡಿ ಅಥವಾ ವೈದ್ಯರನ್ನು ಸಂಪರ್ಕಿಸಿ.

ವಾಂತಿ-ಭೇದಿ ತಡೆಗಟ್ಟಲು ಮುನ್ನೆಚ್ಚರಿಕೆ

ಬೇಸಿಗೆಯಲ್ಲಿ ಕಲುಷಿತ ನೀರಿನಿಂದ ರೋಗಗಳು ಹರಡುವ ಸಾಧ್ಯತೆ ಇರುವುದರಿಂದ:

  • ಶುದ್ಧೀಕರಿಸಿದ ಅಥವಾ ಕಾಯಿಸಿ ಆರಿಸಿದ ನೀರನ್ನೇ ಕುಡಿಯಿರಿ.
  • ಆಹಾರ ಸೇವನೆಗೆ ಮುನ್ನ ಕನಿಷ್ಠ 45 ಸೆಕೆಂಡ್‌ಗಳ ಕಾಲ ಕೈಗಳನ್ನು ಸಾಬೂನಿನಿಂದ ತೊಳೆಯಿರಿ.
  • ತೆರೆದಿಟ್ಟ ಆಹಾರ ಪದಾರ್ಥಗಳು ಹಾಗೂ ರಸ್ತೆಬದಿಯ ಕತ್ತರಿಸಿದ ಹಣ್ಣುಗಳನ್ನು ತಿನ್ನಬೇಡಿ.

ಏನನ್ನು ಮಾಡಬಾರದು?

   ಬಿಗಿಯಾದ ಅಥವಾ ಸಿಂಥೆಟಿಕ್ ಬಟ್ಟೆಗಳನ್ನು ಧರಿಸಬೇಡಿ.

ಕಾಫಿ, ಟೀ, ಅತಿಯಾದ ಸಕ್ಕರೆಯುಕ್ತ ಪಾನೀಯ ಹಾಗೂ ಮದ್ಯಪಾನವನ್ನು ವರ್ಜಿಸಿ.

ಬಿಸಿಲಿನಲ್ಲಿ ಸುಸ್ತಾದಾಗ ತಕ್ಷಣವೇ ಅತಿ ಶೀತಲೀಕರಿಸಿದ (Chilled) ನೀರಿನಿಂದ ಸ್ನಾನ ಮಾಡಬೇಡಿ; ಇದು ದೇಹದ ಒಳಗಿನ ಉಷ್ಣತೆಯನ್ನು ಹೆಚ್ಚಿಸಿ ಅಂಗಾಂಗಗಳಿಗೆ ಹಾನಿ ಮಾಡಬಹುದು.

ಕೆರೆ ಅಥವಾ ಕುಂಟೆಗಳ ನೀರನ್ನು ನೇರವಾಗಿ ಕುಡಿಯಬೇಡಿ.

ಲಕ್ಷಣಗಳು: ಸಂಭ್ರಾಂತಿ, ಅಸಂಗತ ಮಾತು, ವ್ಯತ್ಯಸ್ತ ಪ್ರಜ್ಞೆ, ಚರ್ಮ ಕೆಂಪಾಗುವುದು ಮತ್ತು ಉಸಿರಾಟದ ತೀವ್ರತೆ ಕಂಡುಬಂದರೆ ತಕ್ಷಣ ವೈದ್ಯಕೀಯ ನೆರವು ಪಡೆಯಿರಿ ಎಂದು ಡಿಹೆಚ್‌ಒ ಮನವಿ ಮಾಡಿದ್ದಾರೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular