HomeKarnatakaBIG NEWS: ಎಕ್ಸ್ ಪ್ರೆಸ್ ವೇನಲ್ಲಿ ವಾಹನಗಳ ವೇಗಕ್ಕೆ ಬ್ರೇಕ್ : 'ದಂಡ' ಪ್ರಯೋಗಕ್ಕೆ...

BIG NEWS: ಎಕ್ಸ್ ಪ್ರೆಸ್ ವೇನಲ್ಲಿ ವಾಹನಗಳ ವೇಗಕ್ಕೆ ಬ್ರೇಕ್ : ‘ದಂಡ’ ಪ್ರಯೋಗಕ್ಕೆ ಮುಂದಾದ ಪೊಲೀಸರು

ಬೆಂಗಳೂರು: ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇನಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಾಹನಗಳ ವೇಗಕ್ಕೆ ಕಡಿವಾಣ ಹಾಕಲು ಪೊಲೀಸರು ಮುಂದಾಗಿದ್ದಾರೆ.

ನಿಗದಿತ ವೇಗಕ್ಕಿಂತ ಹೆಚ್ಚು ವೇಗದಲ್ಲಿ ವಾಹನ ಚಲಾಯಿಸಿದರೆ ವಾಹನ ಸವಾರರಿಗೆ ದಂಡ ವಿಧಿಸಲು ರಾಮನಗರ ಪೊಲೀಸರು ನಿರ್ಧರಿಸಿದ್ದಾರೆ. ಈ ನಿಟ್ಟಿನಲ್ಲಿ ರಾಮನಗರ ಜಿಲ್ಲೆ ಚನ್ನಪಟ್ಟಣ ಬಳಿ ಇಂಟರ್ ಸೆಪ್ಟರ್ ಅಳವಡಿಸಿ ವಾಹನಗಳ ಸ್ಪೀಡ್ ಚೆಕ್ ಮಾಡಲಾಗುತ್ತಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವೇಗದ ಲಿಮಿಟ್ ಕ್ರಾಸ್ ಮಾಡುವ ವಾಹನ ಸವಾರರಿಗೆ 1000 ರೂ ದಂಡ ವಿಧಿಸಲಾಗುತ್ತಿದೆ. ಕಾರಿನ ವೇಗದ ಮಿತಿ 100, ಬೈಕ್ ವೇಗದ ಮಿತಿ 80 ಹಾಗೂ ಟ್ರಕ್, ಬಸ್, ಲಾರಿ ವೇಗದ ಮಿತಿ 60 ಕಿ.ಮೀ ನಿಗದಿಪಡಿಸಲಾಗಿದೆ. ನಿಗದಿ ಪಡಿಸಿದ ವೇಗಕ್ಕಿಂತ ಹೆಚ್ಚು ವೇಗದಲ್ಲಿ ವಾಹನ ಚಲಿಸಿದರೆ 1000 ರೂಪಾಯಿ ದಂಡ ವಿಧಿಸಲಾಗುತ್ತಿದೆ.

For Latest News Updates, Join Our Whatsapp Community🚩
RELATED ARTICLES

Most Popular