ಬೆಂಗಳೂರು: ದೇಶಾದ್ಯಂತ 2025-26ರ ಸಾಲಿನ ಆದಾಯ ತೆರಿಗೆ ರಿಟರ್ನ್ಸ್ (ITR Filing) ಸಲ್ಲಿಕೆಗೆ ಕೌಂಟ್ಡೌನ್ ಶುರುವಾಗಿದೆ ತೆರಿಗೆ ಆಡಿಟ್ಗೆ ಒಳಪಡದ ವೇತನದಾರರು, ಪಿಂಚಣಿದಾರರು, ವಿದ್ಯಾರ್ಥಿಗಳು ಹಾಗೂ ಇತರ ವ್ಯಕ್ತಿಗಳಿಗೆ ರಿಟರ್ನ್ಸ್ ಸಲ್ಲಿಸಲು 2026ರ ಜುಲೈ 31 ಕೊನೆಯ ದಿನಾಂಕವಾಗಿದೆ.
ಆದಾಯ ತೆರಿಗೆ ಇಲಾಖೆಯ ಅಧಿಕೃತ ಇ-ಫೈಲಿಂಗ್ ಪೋರ್ಟಲ್ನಲ್ಲಿ ನೀವೇ ಉಚಿತವಾಗಿ ITR ಸಲ್ಲಿಸಬಹುದಾದರೂ, ಸಂಕೀರ್ಣ ಆದಾಯ, ಶೇರು ಮಾರುಕಟ್ಟೆ , ಕ್ಯಾಪಿಟಲ್ ಗೇನ್ಸ್ ಅಥವಾ ವಿದೇಶಿ ಆದಾಯ ಹೊಂದಿರುವವರಿಗೆ ಖಾಸಗಿ ವೆಬ್ಸೈಟ್ಗಳು ಹಾಗೂ ಚಾರ್ಟರ್ಡ್ ಅಕೌಂಟೆಂಟ್ ನೆರವು ಪಡೆಯುವುದು ಹೆಚ್ಚು ಸೂಕ್ತ.
ಎಫ್ಐಐ ಪಾಲು ಹೆಚ್ಚಿಸಿಕೊಂಡ ಪ್ರಮುಖ ಕಂಪನಿಗಳ ಪಟ್ಟಿ:
ಸ್ಟರ್ಲೈಟ್ ಟೆಕ್ನಾಲಜೀಸ್
6 ತಿಂಗಳ ರಿಟರ್ನ್ಸ್: 451%
ಪ್ರಸ್ತುತ ಬೆಲೆ: ₹518
FII ಪಾಲು ಏರಿಕೆ: 10.93% ನಿಂದ 18.22% ಗೆ
ಡಿ ಡೆವಲಪ್ಮೆಂಟ್
6 ತಿಂಗಳ ರಿಟರ್ನ್ಸ್: 234%
ಪ್ರಸ್ತುತ ಬೆಲೆ: ₹687
FII ಪಾಲು ಏರಿಕೆ: 0.77% ನಿಂದ 2.17% ಗೆ
ಇಂಡೋ ಟೆಕ್ ಟ್ರಾನ್ಸ್ಫಾರ್ಮರ್ಸ್
6 ತಿಂಗಳ ರಿಟರ್ನ್ಸ್: 139%
ಪ್ರಸ್ತುತ ಬೆಲೆ: ₹3,415
FII ಪಾಲು ಏರಿಕೆ: 0.19% ನಿಂದ 0.28% ಗೆ
ಕೆಎಸ್ಎಚ್ ಇಂಟರ್ನ್ಯಾಷನಲ್ (KSH International)
6 ತಿಂಗಳ ರಿಟರ್ನ್ಸ್: 138%
ಪ್ರಸ್ತುತ ಬೆಲೆ: ₹865
FII ಪಾಲು ಏರಿಕೆ: 3.72% ನಿಂದ 5.71% ಗೆ
ಖಾಸಗಿ ತೆರಿಗೆ ಸಲ್ಲಿಕೆ ವೆಬ್ಸೈಟ್ಗಳಲ್ಲಿ 2 ಪ್ರಮುಖ ಸೇವೆಗಳು:
ಎಐ (AI) ಆಧಾರಿತ ಸ್ವಯಂ ಫೈಲಿಂಗ್ : ಕಂಪ್ಯೂಟರ್ ಅಲ್ಗಾರಿದಮ್ ಅಥವಾ AI ತಂತ್ರಜ್ಞಾನವು ನಿಮ್ಮ ಫಾರ್ಮ್ 16, AIS, ಬ್ಯಾಂಕ್ ಸ್ಟೇಟ್ಮೆಂಟ್ ಹಾಗೂ ಕ್ಯಾಪಿಟಲ್ ಗೇನ್ಸ್ ಮಾಹಿತಿಗಳನ್ನು ಸ್ವಯಂಚಾಲಿತವಾಗಿ ಪ್ರಕ್ರಿಯೆಗೊಳಿಸಿ ITR ಫಾರ್ಮ್ನಲ್ಲಿ ಭರ್ತಿ ಮಾಡುತ್ತದೆ. ಇದನ್ನು ಒಮ್ಮೆ ಪರಿಶೀಲಿಸಿ ನೀವೇ ಸಲ್ಲಿಸಬೇಕು.
ಸಿಎ ಬೆಂಬಲಿತ ಫೈಲಿಂಗ್ : ಅನುಭವಿ ಚಾರ್ಟರ್ಡ್ ಅಕೌಂಟೆಂಟ್ (CA) ನೇರವಾಗಿ ನಿಮ್ಮ ತೆರಿಗೆ ಲೆಕ್ಕಾಚಾರ ಮಾಡಿ, ಸೂಕ್ತ ಹೂಡಿಕೆ ಸಲಹೆ ನೀಡಿ ನಿಮ್ಮ ಪರವಾಗಿ ಸರಿ ಹೊಂದುವ ITR ಸಿದ್ಧಪಡಿಸಿ ಸಲ್ಲಿಸುತ್ತಾರೆ.
ಎಐ ಆಧಾರಿತ ಸ್ವಯಂ ಫೈಲಿಂಗ್ ದರಗಳ ಪಟ್ಟಿ:
ನೀವೇ ಖುದ್ದಾಗಿ ದಾಖಲೆಗಳನ್ನು ಅಪ್ಲೋಡ್ ಮಾಡಿ ಪ್ರಕ್ರಿಯೆಗೊಳಿಸಲು ಪ್ರಮುಖ ವೆಬ್ಸೈಟ್ಗಳು ವಿಧಿಸುವ ಆರಂಭಿಕ ಮತ್ತು ಗರಿಷ್ಠ ಶುಲ್ಕಗಳು ಈ ಕೆಳಗಿನಂತಿವೆ:
ವಿವಿಧ ವೆಬ್ಸೈಟ್ಗಳ ITR ಫೈಲಿಂಗ್ ಶುಲ್ಕ
Quicko – ಉಚಿತ (Free)
ClearTax – ₹299 ರಿಂದ ₹2,999
Taxspanner – ₹399 ರಿಂದ ₹959
Tax2Win – ₹648 ರಿಂದ ₹1,787
TaxBuddy – ₹699 ರಿಂದ ₹2,999
ನಿಮ್ಮ ಆದಾಯದ ಮಾದರಿಗೆ ಸೂಕ್ತವಾದ ಪ್ಲಾಟ್ಫಾರ್ಮ್ ಆರಿಸಿಕೊಳ್ಳಿ:
ವಿದ್ಯಾರ್ಥಿಗಳು ಹಾಗೂ ಸರಳ ವೇತನದಾರರು: ಕೇವಲ ಫಾರ್ಮ್ 16 ಹೊಂದಿದ್ದು, ಇತರೆ ಯಾವುದೇ ಸಂಕೀರ್ಣ ಆದಾಯ ಇಲ್ಲದಿದ್ದರೆ Quicko ಸಂಪೂರ್ಣ ಉಚಿತ ಸೇವೆ ನೀಡುತ್ತದೆ. ಇನ್ನು Taxspanner ಹಾಗೂ TaxBuddy ಅತಿ ಕಡಿಮೆ ದರದಲ್ಲಿ ಸಿಎ ನೆರವು ನೀಡಿ ಸಲ್ಲಿಕೆ ಸರಳಗೊಳಿಸುತ್ತವೆ.
ಷೇರು ಮಾರುಕಟ್ಟೆ ಹಾಗೂ F&O ಹೂಡಿಕೆದಾರರು: ಶೇರು ಮಾರುಕಟ್ಟೆ ವಹಿವಾಟು ಹೆಚ್ಚಿದ್ದಲ್ಲಿ TaxBuddy ಅಥವಾ Quicko ಅತ್ಯಂತ ಆರ್ಥಿಕ ಬೆಲೆಯಲ್ಲಿ ಸೇವೆ ನೀಡುತ್ತವೆ. ಹೆಚ್ಚಿನ ಸಂಕೀರ್ಣ ವಹಿವಾಟುಗಳಿಗೆ ClearTax ಹಾಗೂ Tax2Win ಸಮಗ್ರ ಬೆಂಬಲ ನೀಡುತ್ತವೆ.
ಅನಿವಾಸಿ ಭಾರತೀಯರು : ಎನ್ಆರ್ಐ ತೆರಿಗೆದಾರರಿಗಾಗಿಯೇ ಪ್ರತ್ಯೇಕ ಸಿಎ ಪ್ಲಾನ್ಗಳು ಲಭ್ಯವಿದ್ದು, ಅವರ ವಿದೇಶಿ ಆದಾಯ ಮತ್ತು ಭಾರತದಲ್ಲಿನ ತೆರಿಗೆ ಹೊಂದಾಣಿಕೆಗೆ ಈ ವೆಬ್ಸೈಟ್ಗಳು ವಿಶೇಷ ನೆರವು ನೀಡುತ್ತವೆ.ಕೊನೆಯ ದಿನದವರೆಗೂ ಕಾಯದೆ ದಂಡ ಹಾಗೂ ತಾಂತ್ರಿಕ ಕಿರಿಕಿರಿ ತಪ್ಪಿಸಲು ಇಂದೇ ಸೂಕ್ತ ಮಾರ್ಗವನ್ನು ಆಯ್ದುಕೊಂಡು ನಿಮ್ಮ ITR ಫೈಲ್ ಮಾಡಿ.

