HomeIndiaದೇಶದ ಜನತೆಗೆ ಮಹತ್ವದ ಸೂಚನೆ: ನಿಮಗೂ ಬಂದಿದೆಯಾ ಈ ವಿಭಿನ್ನ ಧ್ವನಿ, ಕಂಪನದ ಮೆಸೇಜ್; ಗಾಬರಿಯಾಗಬೇಡಿ,...

ದೇಶದ ಜನತೆಗೆ ಮಹತ್ವದ ಸೂಚನೆ: ನಿಮಗೂ ಬಂದಿದೆಯಾ ಈ ವಿಭಿನ್ನ ಧ್ವನಿ, ಕಂಪನದ ಮೆಸೇಜ್; ಗಾಬರಿಯಾಗಬೇಡಿ, ಇದು ಪ್ರಯೋಗವಷ್ಟೇ

ನವದೆಹಲಿ: ವಿಭಿನ್ನ ಧ್ವನಿ ಮತ್ತು ಕಂಪನದೊಂದಿಗೆ ತುರ್ತು ಪರಿಸ್ಥಿತಿಯ ಕುರಿತು ನಿಮ್ಮ ಮೊಬೈಲ್‌ನಲ್ಲಿ ಪರೀಕ್ಷಾ ಸಂದೇಶವನ್ನು ನೀವು ಸ್ವೀಕರಿಸಬಹುದು.

ದಯವಿಟ್ಟು ನೀವೇನು ಗಾಬರಿಯಾಗಬೇಡಿ, ಈ ಸಂದೇಶವು ನಿಜವಾದ ತುರ್ತು ಪರಿಸ್ಥಿತಿಯನ್ನು ಸೂಚಿಸುವುದಿಲ್ಲ. ಬದಲಿಗೆ ಯೋಜಿತ ಪ್ರಯೋಗ ಪ್ರಕ್ರಿಯೆಯ ಭಾಗವಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಹಯೋಗದೊಂದಿಗೆ ಭಾರತ ಸರ್ಕಾರದ ದೂರಸಂಪರ್ಕ ಇಲಾಖೆಯು ಈ ಸಂದೇಶವನ್ನು ಕಳುಹಿಸುತ್ತಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ತುರ್ತು ಸಂದರ್ಭದಲ್ಲಿ ದೇಶದ ಜನತೆಗೆ ಎಚ್ಚರಿಕೆ ಸಂದೇಶ ನೀಡುವ ಉದ್ದೇಶದಿಂದ ಈಗಾಗಲೇ ಅನೇಕ ಬಾರಿ ಇಂತಹ ಮೆಸೇಜ್ ಪರೀಕ್ಷಾರ್ಥ ಪ್ರಯೋಗ ನಡೆಸಲಾಗಿದೆ.

ಪ್ರಸ್ತುತ ಇಸ್ರೇಲ್ –ಹಮಾಸ್ ಯುದ್ಧದ ಸನ್ನಿವೇಶದಲ್ಲಿಯೂ ಇದೇ ರೀತಿಯ ಸಂದೇಶ ರವಾನಿಸಿ ಸುರಕ್ಷಿತರಾಗಿರುವ ತಿಳಿಸಲಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular