HomeKarnatakaಪೋಷಕರಿಗೆ ಮುಖ್ಯ ಮಾಹಿತಿ : ವಿವಿಧ ವಸತಿ ಶಾಲೆಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ

ಪೋಷಕರಿಗೆ ಮುಖ್ಯ ಮಾಹಿತಿ : ವಿವಿಧ ವಸತಿ ಶಾಲೆಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ

ಬೆಂಗಳೂರು : 2023-24 ನೇ ಸಾಲಿನ 7ನೇ, 8ನೇ ಮತ್ತು 9ನೇ ತರಗತಿಯ ವಸತಿ ಶಾಲೆಯ ಪ್ರವೇಶಕ್ಕೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಆಸಕ್ತ ಪೋಷಕರು 7ನೇ, 8ನೇ ಮತ್ತು 9ನೇ ಒದುತ್ತಿರುವ ವಿದ್ಯಾಥಿಗಳು ತಮ್ಮ ಸಮೀಪದ ಮೊರಾರ್ಜಿ ದೇಸಾಯಿ / ಕಿತ್ತೂರು ರಾಣಿ ಚೆನ್ನಮ್ಮ / ಏಕಲವ್ಯ / ಶ್ರೀಮತಿ ಇಂದಿರಾ ಗಾಂಧಿ / ಡಾ|| ಡಿ. ಆರ್. ಅಂಬೇಡ್ಕರ ವಸತಿ ಶಾಲೆಗಳ ಪ್ರಾಂಶುಪಾಲರಿಂದ ಅರ್ಜಿಗಳನ್ನು ಸ್ವೀಕರಿಸಿ ಅಗತ್ಯ ದಾಖಲೆಗಳೊಂದಿಗೆ 15-06-2023 ರಿಂದ 21-06- 2023 ರವರೆಗೆ ಸಲ್ಲಿಸಬಹುದಾಗಿದೆ.

ಮುಂದುವರೆದು ಪ.ಜಾತಿ / ಪರಿಶಿಷ್ಟ ವರ್ಗ / ಹಿವರ್ಗದ ಪ್ರವರ್ಗ-1 / ಹಿಂ.ವರ್ಗ 2ಎ. 23. 3ಎ 39 / ವಿಶೇಷ ವರ್ಗ (ಅಂಗವಿಕಲ / ದೇವದಾಸಿ ಮಕ್ಕಳು / ವಿಧವಾ ಮಕ್ಕಳು / ಅನಾಥ ಮಕ್ಕಳು / ಸಫಾಯಿ ಕರ್ಮಚಾರಿಗಳ ಮಕ್ಕಳು ಇತ್ಯಾದಿ) ಅರ್ಜಿಸಲ್ಲಿಸುವರು ಅರ್ಜಿಯೊಂದಿಗೆ ಸಲ್ಲಿಸುವ ಪ್ರಮಾಣ ಪತ್ರಗಳ ಬಗ್ಗೆ ವಸತಿ ಶಾಲೆಯ ಪ್ರಾಂಶುಪಾಲರನ್ನು ಸಂಪರ್ಕಿಸಬಹುದು.ಹೆಚ್ಚಿನ ಮಾಹಿತಿಗಾಗಿ:ಶ್ರೀ ಶಿವರಾಮ ಚವ್ಹಾಣ, ಜಿಲ್ಲಾ ಸಮನ್ವಯಾಧಿಕಾರಿಗಳು, ಕ.ವ.ಶಿ.ಸ.ಸಂ, ಕಲಬುರಗಿ- 9902846643 ಇವರನ್ನು ಮತ್ತು ಆನಂದ ಕೆ ಹಾಗೂ ಶ್ರೀ ಕುಮಾರ ಸ್ವಾಮಿ, ಜಿಲ್ಲಾ ಮಾಹಿತಿ ಸಹಾಯಕರು, ಕ.ವ.ಶಿ.ಸ.ಸಂ.ಕಲಬುರಗಿ- 8095534843, 8971543125 ಇವರನ್ನು ಸಂಪರ್ಕಿಸಬಹುದೆಂದು ಮಾನ್ಯ ಜಂಟಿ ನಿರ್ದೇಶಕರು,ಸಮಾಜ ಕಲ್ಯಾಣ ಇಲಾಖೆ ಇವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular