ನವದೆಹಲಿ: ನೀಟ್ ಯುಜಿ 2026 ಮರು ಪರೀಕ್ಷೆ ಫಲಿತಾಂಶವನ್ನು ಜುಲೈ 20ರೊಳಗೆ ಪ್ರಕಟಿಸಲಾಗುವುದು. ರಾಷ್ಟ್ರೀಯ ಪರೀಕ್ಷಾ ಸಂಸ್ಥೆ(NTA) ಹಿರಿಯ ಅಧಿಕಾರಿಗಳು ಈ ಕುರಿತಾಗಿ ಮಾಹಿತಿ ನೀಡಿದ್ದು, ನೀಟ್ ಮರು ಪರೀಕ್ಷೆ ಫಲಿತಾಂಶವನ್ನು ಜುಲೈ 20ರೊಳಗೆ ಪ್ರಕಟಿಸುವುದಾಗಿ ಹೇಳಿದ್ದಾರೆ.
ನೀಟ್ ಮರು ಪರೀಕ್ಷೆ ಫಲಿತಾಂಶ ಪ್ರಕಟಿಸುವ ಕುರಿತಂತೆ ನಿಖರವಾದ ದಿನಾಂಕದ ಬಗ್ಗೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಯಾವುದೇ ಅಧಿಕೃತ ಪ್ರಕಟಣೆ ಹೊರಡಿಸಿಲ್ಲ. ಆದರೂ ಜುಲೈ 20ರೊಳಗೆ ಫಲಿತಾಂಶ ಪ್ರಕಟಿಸಲು ಸಮರೋಪಾದಿಯಲ್ಲಿ ಸಿದ್ಧತೆ ನಡೆಸಲಾಗಿದೆ ಎಂದು ಹೇಳಲಾಗಿದೆ.
ಮರು ಪರೀಕ್ಷೆಯಿಂದ ಉಂಟಾದ ಪ್ರವೇಶಾತಿ ವಿಳಂಬ ಪ್ರಸಕ್ತ ಸಾಲಿನ ಎಂಬಿಬಿಎಸ್ ಶೈಕ್ಷಣಿಕ ವರ್ಷ ಆರಂಭಕ್ಕೆ ಅಡ್ಡಿ ಆಗದಂತೆ ಕ್ರಮ ಕೈಗೊಳ್ಳಲಾಗಿದೆ. ಮೇ 3ರಂದು ನಡೆದ ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನೆಲೆಯಲ್ಲಿ ಜೂನ್ 21ರಂದು ಮರು ಪರೀಕ್ಷೆ ನಡೆಸಲಾಗಿತ್ತು. ಇದರ ಫಲಿತಾಂಶವನ್ನು ಜುಲೈ 20ರೊಳಗೆ ಪ್ರಕಟಿಸಲು NTA ಕಾರ್ಯೋನ್ಮುಖವಾಗಿದೆ ಹೇಳಲಾಗಿದೆ.

