HomeKarnatakaಅಕ್ರಮ ಮದ್ಯ ಸಾಗಾಟ: 400 ಲೀಟರ್ ಗೋವಾ ಮದ್ಯ ಜಪ್ತಿ; ಇಬ್ಬರು ಅರೆಸ್ಟ್

ಅಕ್ರಮ ಮದ್ಯ ಸಾಗಾಟ: 400 ಲೀಟರ್ ಗೋವಾ ಮದ್ಯ ಜಪ್ತಿ; ಇಬ್ಬರು ಅರೆಸ್ಟ್

ಖಾನಾಪುರ: ಗೋವಾದಿಂದ ಬೆಳಗಾವಿಗೆ ಅಕ್ರಮವಾಗಿ ಗೂಡ್ಸ್ ವಾಹನದಲ್ಲಿ ಸಾಗಿಸುತ್ತಿದ್ದ ಗೋವಾ ಮದ್ಯವನ್ನು ಅಬಕಾರಿ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಜಪ್ತಿ ಮಾಡಿರುವ ಘಟನೆ ಕರ್ನಾಟಕ-ಗೋವಾ ಗಡಿ ಭಾಗವಾದ ಕಣಕುಂಬಿ ಬಳಿ ನಡೆದಿದೆ.

ಅಬಕಾರಿ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಖಚಿತ ಮಾಹಿತಿ ಮೇರೆಗೆ ಈ ದಾಳಿ ನಡೆಸಿದ್ದಾರೆ. ಗೂಡ್ಸ್ ವಾಹನದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 400 ಲೀಟರ್ ಗೋವಾ ಮದ್ಯವನ್ನು ವಾಹನ ಸಮೇತ ವಶಕ್ಕೆ ಪಡೆದು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅಬಕಾರಿ ಇಲಾಖೆಯ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆ ಸಂದರ್ಭದಲ್ಲಿ ಕಣಕುಂಬಿ ತನಿಖಾ ಠಾಣೆಯ ಬಳಿ ಗೋವಾದಿಂದ ಬೆಳಗಾವಿಗೆ ಬರುತ್ತಿದ್ದ ಭಾರತ ಬೆಂಜ್ ಆರು ಚಕ್ರದ ಗೂಡ್ಸ್ ವಾಹನ ತಡೆದು ಪರಿಶೀಲಿಸಿದಾಗ ಗೂಡ್ಸ್ ವಾಹನದ ಹಿಂಭಾಗದಲ್ಲಿ ಯಾರಿಗೂ ಗೊತ್ತಾಗದಂತೆ ಪಾರ್ಟಿಷನ್ ಮಾಡಿ ಅಪಾರ ಪ್ರಮಾಣದ ಮದ್ಯವನ್ನು ಅಡಗಿಸಿಟ್ಟಿದ್ದು ಪತ್ತೆಯಾಗಿದೆ.

ಅಕ್ರಮ ಗೋವಾ ಮದ್ಯ ಮಾರಾಟ ಪ್ರಕರಣದಲ್ಲಿ ಯರಗಟ್ಟಿ ತಾಲ್ಲೂಕಿನ ಮಾಡಮಗೇರಿಯ ಸಿದ್ದಪ್ಪ ಮಾರುತಿ ಬೆಳ್ಳಿಕುಂಪಿ ಮತ್ತು ಸವದತ್ತಿ ತಾಲ್ಲೂಕು ಕಡಬಿ ಗ್ರಾಮದ ಮಂಜುನಾಥ ಹನಮಂತಪ್ಪ ದೇಸಾಯಿ ಅವರನ್ನು ಮಾಲಿನ ಸಮೇತ ವಶಕ್ಕೆ ಪಡೆದಿದ್ದು, ಇವರ ವಿರುದ್ಧ ಕರ್ನಾಟಕ ಅಬಕಾರಿ ಕಾಯ್ದೆ 1965ರ ಅನ್ವಯ ಬಂಧಿಸಿ ಪ್ರಕರಣ ದಾಖಲಿಸಲಾಗಿದೆ.

ವಶಕ್ಕೆ ಪಡೆದ ಮದ್ಯ ಹಾಗೂ ವಾಹನದ ಅಂದಾಜು ಮೌಲ್ಯ ರೂ. 10 ಲಕ್ಷ 40 ಸಾವಿರರಷ್ಟಿದೆ ಎಂದು ಹೇಳಲಾಗಿದ್ದು, ಖಾನಾಪುರದ ಅಬಕಾರಿ ನಿರೀಕ್ಷಕ ಮಲ್ಲೇಶಿ ಉಪ್ಪಾರ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಅಬಕಾರಿ ಸಬ್ ಇನ್ಸಪೆಕ್ಟರ್ ಗಳಾದ ನೂರುಲ್ಲಾ ಖಾನ್, ಬಾಳಗೌಡ ಪಾಟೀಲ ಹಾಗೂ ಸಿಬ್ಬಂದಿ ಗುಂಡು ಪೂಜೇರಿ, ಬಸವರಾಜ ವಿವೇಕಿ, ಪ್ರಕಾಶ್ ನಂದಿಯವರ ಹಾಗೂ ಗೃಹ ರಕ್ಷಕದವರು ಭಾಗವಹಿಸಿದ್ದರು. ಖಾನಾಪುರ ಅಬಕಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗಾಂಜಾ ನಶೆಯಲ್ಲಿ ರೈಲಿನ ಬೋಗಿಗೆ ಬೆಂಕಿ ಇಟ್ಟನಾ ದುಷ್ಕರ್ಮಿ? ಓರ್ವ ಆರೋಪಿ ಅರೆಸ್ಟ್

ಬೆಂಗಳೂರು: ಬೆಂಗಳೂರಿನ ಮೆಜೆಸ್ಟಿಕ್‌ ರೈಲ್ವೆ ನಿಲ್ದಾಣದಲ್ಲಿ ಖಾಲಿ ನಿಂತಿದ್ದ ರೈಲಿನ ಬೋಗಿಗೆ ಬೆಂಕಿ ತಗುಲಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಓರ್ವ ವ್ಯಕ್ತಿಯನ್ನ ರೈಲ್ವೆ ಪೊಲೀಸರು ಬಂಧಿಸಿದ್ದಾರೆ.

ಮೆಜೆಸ್ಟಿಕ್ ರೈಲು ನಿಲ್ದಾಣದಲ್ಲಿ ಹಳೆಯ ರೈಲು ಬೋಗಿಗೆ ಬೆಂಕಿ ಬಿದ್ದಿತ್ತು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ. ಗಾಂಜಾ ನಶೆಯಲ್ಲಿ ವ್ಯಕ್ತಿ ಬೆಂಕಿ ಹಚ್ಚಿರುವ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಆರೋಪಿಯನ್ನು ಬಂಧಿಸಲಾಗಿದೆ.

ಮಹಾರಾಷ್ಟ್ರದ ನಾಶಿಕ್ ಜಿಲ್ಲೆಯ ರವಿ ಗೋರಖ್ ತಿರ್ವ ಬಂಧಿತ ಆರೋಪಿ. ಈತ ಮಲಗಲು ಖಾಲಿ ಬೋಗಿಗೆ ಹೋಗಿದ್ದ. ಗಾಂಜಾ ನಶೆಯಲ್ಲಿದ್ದ ಆಸಾಮಿ, ಸಿಗರೇಟ್ ಸೇದಿ ರೈಲಿನ ಬೋಗಿಯಲ್ಲಿ ಬಿಸಾಡಿದ್ದಾನೆ. ಅದು ಸಣ್ಣ ಕಿಡಿಯಾಗಿ, ನಿಧಾನಕ್ಕೆ ದೊಡ್ಡ ಪ್ರಮಾಣದಲ್ಲಿ ಬೆಂಕಿ ಹೊತ್ತಿಕೊಂಡಿದೆ. ಬೆಂಕಿ ವ್ಯಾಪಿಸುತ್ತಿದ್ದಂತೆ ತಕ್ಷಣ ರೈಲಿನಿಂದ ಇಳಿದ ವ್ಯಕ್ತಿ ಅಲ್ಲಿಂದ ಪರಾರಿಯಾಗಿದ್ದಾನೆ.

ಬೆಂಗಳೂರಿನಲ್ಲಿ ಈ ಘಟನೆ ಸಂಬಂಧ ಆರ್‌ಪಿಎಫ್ ಹಾಗೂ ನಗರ ರೈಲ್ವೆ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದರು. ಸಿಸಿಟಿವಿಗಳನ್ನ ಪರಿಶೀಲಿಸಿದ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ.

ಬಂಧಿತ ಆರೋಪಿ ಪೇಂಟರ್ ವೃತ್ತಿಯಲ್ಲಿದ್ದು, ಕಲ್ಯಾಣ ಮಂಟಪ, ಸಾರ್ವಜನಿಕ ಸ್ಥಳಗಳಲ್ಲಿ ಮಲಗುತ್ತಿದ್ದ ಎನ್ನಲಾಗಿದೆ. ಅದೇ ರೀತಿ ಭಾನುವಾರ ತಡರಾತ್ರಿ ಖಾಲಿ ಬೋಗಿಯಲ್ಲಿ ಆತ ಮಲಗಲು ಬಂದು ಸಿಗರೇಟ್ ಬಿಸಾಡಿ ಅವಾಂತರ ಸೃಷ್ಟಿಸಿದ್ದಾನೆ. ಆರೋಪಿಗೆ ಕೆಸಿ ಜನರಲ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿ, ನ್ಯಾಯಧೀಶರ ಮುಂದೆ ಹಾಜರುಪಡಿಸಲಾಗಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular