HomeIndiaBREAKING NEWS: ಐಐಟಿ ಬಾಬಾ ಖ್ಯಾತಿಯ ಅಭಯ್ ಸಿಂಗ್ ಅರೆಸ್ಟ್!

BREAKING NEWS: ಐಐಟಿ ಬಾಬಾ ಖ್ಯಾತಿಯ ಅಭಯ್ ಸಿಂಗ್ ಅರೆಸ್ಟ್!

ಜೈಪುರ: ಮಹಾಕುಂಭ ಮೇಳದಲ್ಲಿ ಭಾರಿ ಗಮನ ಸೆಳೆದಿದ್ದ ಐಐಟಿ ಬಾಬಾ ಅಭಯ್ ಸಿಂಗ್ ನನ್ನು ರಾಜಸ್ಥಾನದಲ್ಲಿ ಪೊಲೀಸರು ಬಂಧಿಸಿದ್ದಾರೆ.

ಐಐಟಿ ಬಾಬಾ ಅಭಯ್ ಸಿಂಗ್ ವಿರುದ್ಧ ಡ್ರಗ್ಸ್ ಪ್ರಕರಣ ದಾಖಲಾಗಿದ್ದು, ಈ ಹಿನ್ನೆಲೆಯಲ್ಲಿ ರಾಜಸ್ಥಾನದ ಜೈಪುರದಲ್ಲಿ ಅವರನ್ನು ಬಂಧಿಸಲಾಗಿದೆ.

ಅಭಯ್ ಸಿಂಗ್ ವಿರುದ್ಧ ಗಂಜಾ ಸೇವನೆ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಎನ್ ಡಿಪಿಎಸ್ ಆಕ್ಟ್ ಅಡಿ ಪ್ರಕರಣ ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ವಿಚಾರಣೆಗೆಂದು ವಶಕ್ಕೆ ಪಡೆದಿದ್ದುಕೊಂಡಿದ್ದರು. ಇದೀಗ ಐಐಟಿ ಬಾಬಾ ಅಭಯ್ ಸಿಂಗ್ ಬಂಧನವಾಗಿದೆ ಎಂದು ತಿಳಿದುಬಂದಿದೆ. ಬಾಂಬೆ ಐಐಟಿ ಹಳೆ ವಿದ್ಯಾರ್ಥಿಯಾಗಿರುವ ಅಭಯ್ ಸಿಂಗ್, ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆದ ಮಹಾಕುಂಭ ಮೇಳದಲ್ಲಿ ಐಐಟಿ ಬಾಬಾ ಎಂದೇ ಗಮನ ಸೆಳೆದಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular