HomeCrimeInsta Fraud: ಯುವತಿ ಹೆಸರಿನಲ್ಲಿ ಟೆಕ್ಕಿಯಿಂದ ನಕಲಿ ಖಾತೆ; ಕೆಲಸ ಕೊಡಿಸುವ ನೆಪದಲ್ಲಿ ರೇಪ್

Insta Fraud: ಯುವತಿ ಹೆಸರಿನಲ್ಲಿ ಟೆಕ್ಕಿಯಿಂದ ನಕಲಿ ಖಾತೆ; ಕೆಲಸ ಕೊಡಿಸುವ ನೆಪದಲ್ಲಿ ರೇಪ್

ಪ್ರತಿಷ್ಠಿತ ಕಂಪನಿ ಒಂದರಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಟೆಕ್ಕಿಯೊಬ್ಬ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ ನಲ್ಲಿ ಮೋನಿಕಾ ಎಂಬ ಹೆಸರಿನಲ್ಲಿ ನಕಲಿ ಖಾತೆ ತೆರೆದು ಯುವತಿಯೊಬ್ಬಳಿಗೆ ಕೆಲಸದ ಆಮಿಷ ಒಡ್ಡಿ ಅತ್ಯಾಚಾರವೆಸಗಿರುವ ಘಟನೆ ನಡೆದಿದೆ.

ಆಂಧ್ರ ಪ್ರದೇಶದ ಚಿತ್ತೂರು ಮೂಲದ ದಿಲೀಪ್ ಪ್ರಸಾದ್ ಇಂತಹ ಹೇಯ ಕೃತ್ಯವೆಸಗಿದ ಆರೋಪಿಯಾಗಿದ್ದು, ಇದೀಗ ಆತನನ್ನು ಪೊಲೀಸರು ಬಂಧಿಸಿದ್ದಾರೆ. ಯುವತಿಯರ ಹೆಸರಿನಲ್ಲಿ ನಕಲಿ ಖಾತೆ ತೆರೆದಿದ್ದ ಈತ ಸಂತ್ರಸ್ತೆ ಜೊತೆ ಸ್ನೇಹ ಬೆಳೆಸಿದ್ದ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆಕೆಗೆ ಕೆಲಸದ ಅವಶ್ಯಕತೆ ಇದ್ದ ಹಿನ್ನೆಲೆಯಲ್ಲಿ ತಾನು ಒಳ್ಳೆಯ ಕಂಪನಿಯಲ್ಲಿ ಕೆಲಸ ಕೊಡಿಸುವುದಾಗಿ ಆಮಿಷ ಒಡ್ಡಿದ್ದ. ಬಳಿಕ ಲಾಡ್ಜ್ ಒಂದಕ್ಕೆ ಸಂತ್ರಸ್ತ ಯುವತಿಯನ್ನು ಕರೆಸಿಕೊಂಡ ವೇಳೆ ಆಕೆಗೆ ಈತ ಪುರುಷ ಎಂಬ ಸಂಗತಿ ತಿಳಿದು ಬಂದಿತ್ತು.

ಆದರೂ ಕೆಲಸ ಕೊಡಿಸುತ್ತಾನೆ ಎಂಬ ನಂಬಿಕೆ ಮೇಲೆ ದಿಲೀಪ್ ಪ್ರಸಾದ್ ಜೊತೆ ಆತ್ಮೀಯಳಾಗಿದ್ದಳು. ಇದನ್ನು ದುರುಪಯೋಗಪಡಿಸಿಕೊಂಡ ಆತ ಯುವತಿಯ ಖಾಸಗಿ ಫೋಟೋ ಹಾಗೂ ವಿಡಿಯೋಗಳನ್ನು ತನ್ನ ಮೊಬೈಲ್ ನಲ್ಲಿ ಸೆರೆ ಹಿಡಿದು ನಾಲ್ಕೈದು ಬಾರಿ ಅತ್ಯಾಚಾರ ಎಸಗಿದ್ದ ಎಂದು ಹೇಳಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular