HomeBeautyವಯಸ್ಸಿಗೂ ಮೊದಲೇ ಕೂದಲು ಬೆಳ್ಳಗಾಗ್ತಿದ್ರೆ ಇಲ್ಲಿದೆ 'ಪರಿಹಾರ'

ವಯಸ್ಸಿಗೂ ಮೊದಲೇ ಕೂದಲು ಬೆಳ್ಳಗಾಗ್ತಿದ್ರೆ ಇಲ್ಲಿದೆ ‘ಪರಿಹಾರ’

ವೃದ್ಯಾಪ್ಯ ಬಂದ್ಮೇಲೆ ಕೂದಲು ಬೆಳ್ಳಗಾಗುವುದು ಸಹಜ. ಆದ್ರೆ ಕೆಲವರಿಗೆ ಚಿಕ್ಕ ವಯಸ್ಸಿನಲ್ಲೇ ಕೂದಲು ನೆರೆತು ಹೋಗಲಾರಂಭಿಸುತ್ತದೆ. ಆನುವಂಶೀಯತೆ, ಪೋಷಕಾಂಶಗಳ ಕೊರತೆ ಹಾಗೂ ಪರಿಸರ ಸಂಬಂಧಿ ಸಮಸ್ಯೆಗಳು ಈ ರೀತಿ ವಯಸ್ಸಲ್ಲದ ವಯಸ್ಸಲ್ಲಿ ಕೂದಲು ಬೆಳ್ಳಗಾಗಲು ಕಾರಣ. ಕೆಲವೊಂದು ಆಹಾರಗಳ ಸೇವನೆಯಿಂದ ನೀವು ಕೂದಲು ಬೆಳ್ಳಗಾಗುವುದನ್ನು ತಡೆಯಬಹುದು.

ಕಿತ್ತಳೆ : ಕೂದಲು ಸೊಂಪಾಗಿ ಬೆಳೆಯುವಂತೆ ಮಾಡಬಲ್ಲ ಕೊಲ್ಲಾಜನ್ ಪ್ರೋಟಿನ್ ಅನ್ನು ಕಿತ್ತಳೆಯಲ್ಲಿರುವ ವಿಟಮಿನ್ ಸಿ ಮೂಲಕ ಪಡೆಯಬಹುದು. ಕಿತ್ತಳೆ ಸೇವನೆಯಿಂದ ಕೂದಲು ಬೆಳ್ಳಗಾಗದಂತೆ ತಡೆಯಬಹುದು.

ಹುದುಗಿಸಿದ ಆಹಾರ : ಆರೋಗ್ಯಕರ ಕೂದಲಿಗೆ ಬೇಕಾದ ಅಂಶಗಳು ಇದರಲ್ಲಿವೆ. ಮೊಸರು, ಸೋಯಾ, ವಿನಿಗರ್ ನಂತಹ ಪದಾರ್ಥಗಳ ಸೇವನೆಯಿಂದ ಕೂದಲು ಬೆಳ್ಳಗಾಗಲು ಕಾರಣವಾಗುವ ಕೊರತೆಯನ್ನು ನೀಗಿಸಿಕೊಳ್ಳಬಹುದು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮೊಟ್ಟೆ : ಮೊಟ್ಟೆಯಿಂದ ಮಾಡಿರೋ ಹೇರ್ ಮಾಸ್ಕ್ ಬಳಸೋದನ್ನು ಕೇಳಿರ್ತೀರಾ. ಮೊಟ್ಟೆಯಲ್ಲಿ ಹೇರಳವಾದ ಪ್ರೋಟೀನ್ ಇರುತ್ತದೆ, ಡ್ಯಾಮೇಜ್ ಆಗಿರೋ ಕೂದಲನ್ನು ಇದು ರಿಪೇರಿ ಮಾಡಬಲ್ಲದು. ವಿಟಮಿನ್ ಬಿ – 12 ಕೊರತೆಯಿಂದ ಕೂದಲು ಬೆಳ್ಳಗಾಗುತ್ತದೆ. ಕೂದಲಿಗೆ ಎಗ್ ಮಾಸ್ಕ್ ಹಾಕುವುದರಿಂದ ಇದನ್ನು ತಡೆಯಬಹುದು.

For Latest News Updates, Join Our Whatsapp Community🚩
RELATED ARTICLES

Most Popular