HomeAstroಸಾಲದಿಂದ ಮುಕ್ತಿ ಪಡೆಯಲು ಬಯಸಿದ್ದರೆ ಐದು ʼಗುಲಾಬಿʼ ಹೂಗಳನ್ನು ಬಿಳಿ ಬಟ್ಟೆಯಲ್ಲಿ ಕಟ್ಟಿ ಚಮತ್ಕಾರ ನೋಡಿ

ಸಾಲದಿಂದ ಮುಕ್ತಿ ಪಡೆಯಲು ಬಯಸಿದ್ದರೆ ಐದು ʼಗುಲಾಬಿʼ ಹೂಗಳನ್ನು ಬಿಳಿ ಬಟ್ಟೆಯಲ್ಲಿ ಕಟ್ಟಿ ಚಮತ್ಕಾರ ನೋಡಿ

ಎಲ್ಲರ ಜೀವನದಲ್ಲೂ ಸಮಸ್ಯೆ ಮಾಮೂಲಿ. ಆದ್ರೆ ಕೆಲವೊಂದು ಸಮಸ್ಯೆಗಳಿಂದ ಹೊರ ಬರುವುದು ಸುಲಭವಲ್ಲ. ಜೀವನದಲ್ಲಿ ಮುಂದೆ ಬರಲು ಜನರು ಅನೇಕ ಪರಿಹಾರದ ಮೊರೆ ಹೋಗ್ತಾರೆ.

ಆರ್ಥಿಕ ಸಂಕಷ್ಟ ಬಗೆ ಹರಿದು, ಮನೆಯಲ್ಲಿ ಸುಖ-ಶಾಂತಿ ನೆಲೆಸಿ, ನೆಮ್ಮದಿ ಜೀವನ ನಿಮ್ಮದಾಗಬೇಕೆಂದ್ರೆ ಈ ಕೆಳಗಿನ ಉಪಾಯಗಳನ್ನು ಅನುಸರಿಸಿ.

ಸೋಮವಾರ ಶಿವಲಿಂಗಕ್ಕೆ ಎಳ್ಳು ಮಿಶ್ರಿತ ಶುದ್ಧ ನೀರನ್ನು ಬಿಲ್ವಪತ್ರೆ ಜೊತೆ ಅರ್ಪಿಸಬೇಕು. ಮನೋಕಾಮನೆಗಳು ಈಡೇರುವ ಜೊತೆಗೆ ಯಶಸ್ಸು ನಿಮ್ಮದಾಗುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನೌಕರಿಯಲ್ಲಿ ಏಳ್ಗೆ ಬೇಕೆಂದ್ರೆ ಸೋಮವಾರದ ದಿನ ಓಂ ನಮಃ ಶಿವಾಯ ಅಥವಾ ಓಂ ಚಂದ್ರ ಪ್ರಭು ನಮೋಃನಮಃ ಮಂತ್ರವನ್ನು 108 ಬಾರಿ ಜಪಿಸಬೇಕು. ಐದು ಅಥವಾ 11 ಸೋಮವಾರ ಹೀಗೆ ಮಾಡಿದ್ರೆ ಫಲ ಪ್ರಾಪ್ತಿಯಾಗುತ್ತದೆ.

ಬಡತನ ದೂರ ಮಾಡಲು ಹಸುವಿಗೆ ಆಹಾರ ನೀಡಬೇಕು. ಐದು ಕೆ.ಜಿ ಕಾಕಂಬಿ ಹಾಗೂ ಐದು ಕೆ.ಜಿ ಗೋದಿ ಹಿಟ್ಟಿನಿಂದ ರೊಟ್ಟಿ ಮಾಡಿ, ಗುರುವಾರ ಸಂಜೆ ಹಸುಗಳಿಗೆ ನೀಡಬೇಕು. ಮೂರು ಗುರುವಾರ ಹೀಗೆ ಮಾಡಿದ್ರೆ ಬಡತನ ದೂರವಾಗುತ್ತದೆ. ಅಗತ್ಯವಿರುವವರಿಗೆ ಗುರುವಾರ ದಾನ ಮಾಡಬೇಕು.

ಸೌಭಾಗ್ಯ ಪ್ರಾಪ್ತಿಗಾಗಿ ಮನೆಯ ಮುಖ್ಯದ್ವಾರದ ಬಳಿ ಸ್ವಸ್ತಿಕ್ ಅಥವಾ ಓಂ ಚಿಹ್ನೆಯನ್ನು ಬಿಡಿಸಬೇಕು. ಸಾಧ್ಯವಾದ್ರೆ ಸಿಂಧೂರ ಬಳಿಸಿ ಈ ಚಿಹ್ನೆ ಬಿಡಿಸಬೇಕು.

ಸಾಲದಿಂದ ಮುಕ್ತಿ ಪಡೆಯಲು ಬಯಸಿದ್ದರೆ ಐದು ಗುಲಾಬಿ ಹೂಗಳನ್ನು ತೆಗೆದುಕೊಂಡು ಗಾಯತ್ರಿ ಮಂತ್ರ ಜಪಿಸುತ್ತ ಒಂದುವರೆ ಮೀಟರ್ ಬಿಳಿ ಬಟ್ಟೆಯಲ್ಲಿ ಕಟ್ಟಿ. ಇದನ್ನು ಪವಿತ್ರ ನದಿ ಅಥವಾ ಕೆರೆಗೆ ಹಾಕಿ. ಹೀಗೆ ಮಾಡಿದ್ರೆ ಸಾಲದ ಹೊರೆ ಕಡಿಮೆಯಾಗಿ ಯಶಸ್ಸು ಪ್ರಾಪ್ತಿಯಾಗುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular