ಪದೇ ಪದೇ ಬಿಕ್ಕಳಿಕೆ ಕಾಡುತ್ತಿದ್ದರೆ ಹೀಗೆ ಹೇಳಿ ʼಗುಡ್ ಬೈʼ

ಪ್ರತಿಯೊಬ್ಬರಿಗೂ ಅಪರೂಪಕ್ಕೊಮ್ಮೆಯಾದ್ರೂ ಬಿಕ್ಕಳಿಕೆ ಬರುತ್ತದೆ. ಬಿಕ್ಕಳಿಸುವಿಕೆ ನೈಸರ್ಗಿಕ ಪ್ರಕ್ರಿಯೆ. ಇದು  ಯಾವಾಗ ಬೇಕಾದರೂ, ಯಾರಿಗಾದರೂ ಬರಬಹುದು. ಬಿಕ್ಕಳಿಕೆ ದೀರ್ಘಕಾಲದವರೆಗೆ ಮುಂದುವರಿದರೆ ಕಿರಿಕಿರಿಯಾಗುತ್ತದೆ. ಬಿಕ್ಕಳಿಕೆ ನಿಲ್ಲಿಸಲು ಇನ್ನಿಲ್ಲದ ಪ್ರಯತ್ನ ಶುರು ಮಾಡ್ತಾನೆ. ಬಿಕ್ಕಳಿಕೆ ಸುಲಭವಾಗಿ ದೂರ ಮಾಡುವ ಮನೆ ಮದ್ದುಗಳು ಇಲ್ಲಿವೆ.

ಮುಖ್ಯವಾಗಿ ಮೂರು ರೀತಿಯ ಬಿಕ್ಕಳಿಕೆಗಳಿರುತ್ತವೆ. 48 ಗಂಟೆಗಳಿಗಿಂತ ಕಡಿಮೆ ಇರುತ್ತದೆ. ಎರಡನೇಯದು 2 ದಿನಗಳಿಗಿಂತ ಹೆಚ್ಚು ಇರುತ್ತದೆ. ಮೂರನೇಯದು ಒಂದು ತಿಂಗಳಿಗಿಂತ ಹೆಚ್ಚು ಕಾಲ ನಿಮ್ಮನ್ನು ಕಾಡಬಹುದು. ಕಾರ್ಬೊನೇಟೆಡ್ ಪಾನೀಯಗಳ ಸೇವನೆ, ಹೆಚ್ಚು ಆಲ್ಕೊಹಾಲ್ ಕುಡಿಯುವುದು, ಹೆಚ್ಚು ಸೋಡಾವನ್ನು ಕುಡಿಯುತ್ತಿದ್ದರೆ ಹೀಗೆ ಬಿಕ್ಕಳಿಕೆ ಬರಲು ಅನೇಕ ಕಾರಣಗಳಿವೆ.

ದೀರ್ಘಕಾಲದವರೆಗೆ ಬಿಕ್ಕಳಿಕೆ ಬರ್ತಿದ್ದರೆ ನಿದ್ರೆ ಮತ್ತು ಆಹಾರ ಸೇವನೆಗೆ ಸಮಸ್ಯೆಯಾಗುತ್ತದೆ. ಇದರಿಂದಾಗಿ ನಿರ್ಜಲೀಕರಣ ಮತ್ತು ತೂಕ ಇಳಿಯುವ ಸಮಸ್ಯೆ ಕಾಡಬಹುದು. ತಣ್ಣೀರಿನಿಂದ ಗಾರ್ಗಲ್ ಮಾಡುವುದನ್ನು ತಪ್ಪಿಸಿ. ಹೆಚ್ಚು ಮತ್ತು ವೇಗವಾಗಿ ತಿನ್ನುವುದನ್ನು ತಪ್ಪಿಸಿ.

ಬಿಕ್ಕಳಿಕೆಯಿಂದ ಬಳಲುತ್ತಿರುವವರು ಒಂದು ಗ್ಲಾಸ್ ನೀರನ್ನು ನಿಧಾನವಾಗಿ ಕುಡಿಯಿರಿ. ಒಂದು ಟೀಸ್ಪೂನ್ ಸಕ್ಕರೆಯನ್ನು ಸೇವಿಸಬಹುದು. ನಿಂಬೆ ರಸ ಕುಡಿಯುವುದ್ರಿಂದ ಕೂಡ ಬಿಕ್ಕಳಿಕೆ ಕಡಿಮೆಯಾಗುತ್ತದೆ. ಒಂದು ಹನಿ ವಿನೆಗರ್ ಅನ್ನು ನಾಲಿಗೆಗೆ ಹಾಕಿ. ಇದು ಕೂಡ ಬಿಕ್ಕಳಿಕೆ ಕಡಿಮೆ ಮಾಡುತ್ತದೆ. ಬಹಳ ನಿಧಾನವಾಗಿ ಮತ್ತು ನಿಯಂತ್ರಿತವಾಗಿ ಉಸಿರಾಡಿ. ಇದನ್ನು 3-4 ಬಾರಿ ಪುನರಾವರ್ತಿಸಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read