HomeLatest NewsBREAKING: 'ಲ್ಯಾಂಡ್ ಲಾರ್ಡ್' ಟೀಸರ್ ರಿಲೀಸ್ ವೇಳೆ ‘ಜೈ ಡಿ ಬಾಸ್’ ಘೋಷಣೆ: ಅರ್ಧಕ್ಕೇ ಮಾತು...

BREAKING: ‘ಲ್ಯಾಂಡ್ ಲಾರ್ಡ್’ ಟೀಸರ್ ರಿಲೀಸ್ ವೇಳೆ ‘ಜೈ ಡಿ ಬಾಸ್’ ಘೋಷಣೆ: ಅರ್ಧಕ್ಕೇ ಮಾತು ನಿಲ್ಲಿಸಿದ ನಟಿ ರಚಿತಾ ರಾಮ್

ಬೆಂಗಳೂರು: ‘ಲ್ಯಾಂಡ್ ಲಾರ್ಡ್’ ಟೀಸರ್ ಲಾಂಚ್ ವೇಳೆ ನಟಿ ರಚಿತಾರಾಮ್ ಮಾತನಾಡುತ್ತಿದ್ದ ವೇಳೆಯಲ್ಲಿ ‘ಜೈ ಡಿ ಬಾಸ್’ ಎಂದು ದರ್ಶನ್ ಅಭಿಮಾನಿಗಳು ಘೋಷಣೆ ಕೂಗಿದ್ದಾರೆ. ಇದಕ್ಕೆ ನಟಿ ರಚಿತರಾಮ್ ಬೇಸರ ವ್ಯಕ್ತಪಡಿಸಿದ್ದಾರೆ. ಕಾರ್ಯಕ್ರಮದ ವೇದಿಕೆಯಲ್ಲಿ ಅರ್ಧದಲ್ಲಿಯೇ ರಚಿತರಾಮ್ ಮಾತು ನಿಲ್ಲಿಸಿದ್ದಾರೆ.

ರಚಿತಾರಾಮ್ ಅವರು ಮಾತನಾಡುವಾಗ ದರ್ಶನ್ ಅಭಿಮಾನಿಗಳು ಜೈ ಡಿ ಬಾಸ್ ಎಂದು ಘೋಷಣೆ ಕೂಗಿದ್ದಾರೆ. ಈ ವೇಳೆ ರಚಿತಾ ರಾಮ್ ಅವರು, ನಾನು ಮಾತನಾಡುತ್ತೇನೆ. ನಾನು ಮಾತನಾಡಿ ಮುಗಿಸುತ್ತೇನೆ ಎಂದಿದ್ದಾರೆ. ಆದರೂ ಅಭಿಮಾನಿಗಳು ಘೋಷಣೆ ಕೂಗಿದ್ದಾರೆ. ಇದರಿಂದ ರಚಿತಾರಾಮ್ ಅವರು ಬೇಸರದಿಂದ ಅರ್ಧದಲ್ಲೇ ಮಾತು ನಿಲ್ಲಿಸಿದ್ದಾರೆ.

ಕನ್ನಡ ರಾಜ್ಯೋತ್ಸವದ ಅಂಗವಾಗಿ ನಗರದ ನವರಂಗ್ ಥಿಯೇಟರ್ ನಲ್ಲಿ ಇಂದು ನಟ ‘ದುನಿಯಾ’ ವಿಜಯ್ ಅಭಿನಯದ ‘ಲ್ಯಾಂಡ್ ಲಾರ್ಡ್’ ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ಘಟನೆ ನಡೆದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular