HomeAstroಮನೆ ಬಿಡುವ ಮೊದಲು ಈ ʼಉಪಾಯʼ ಅನುಸರಿಸಿದ್ರೆ ಈಡೇರಲಿದೆ ಹೋದ ಕೆಲಸ

ಮನೆ ಬಿಡುವ ಮೊದಲು ಈ ʼಉಪಾಯʼ ಅನುಸರಿಸಿದ್ರೆ ಈಡೇರಲಿದೆ ಹೋದ ಕೆಲಸ

ಕೆಲವೊಂದು ದಿನ ಏನೇ ಕೆಲಸ ಮಾಡಿದ್ರೂ ಫಲ ಸಿಗೋದಿಲ್ಲ. ದಿನವಿಡಿ ಹೊರಗೆ ಕಳೆದ್ರೂ ಹೋದ ಕೆಲಸ ಆಗೋದಿಲ್ಲ. ಆಗ ಎಲ್ಲರ ಬಾಯಲ್ಲಿ ಬರುವ ಒಂದೇ ಮಾತು ಇಂದಿನ ದಿನ ಕೆಟ್ಟದಾಗಿತ್ತು. ಇದಕ್ಕೂ ನಮ್ಮ ಶಾಸ್ತ್ರದಲ್ಲಿ ಉಪಾಯವಿದೆ. ಹೊರಗೆ ಹೋಗುವ ಮುನ್ನ ಕೆಲವೊಂದು ಉಪಾಯ ಅನುಸರಿಸಿದ್ರೆ ಅಂದಿನ ದಿನ ಶುಭಕರವಾಗಿರುತ್ತೆ. ಹೋದ ಕೆಲಸ ಸುಲಭವಾಗುತ್ತೆ.

ಸೋಮವಾರ ಹೊರಗೆ ಹೋಗುವ ಮೊದಲು ಕನ್ನಡಿಯಲ್ಲಿ ನಿಮ್ಮ ಮುಖ ನೋಡಿಕೊಂಡು ಹೋಗಿ. ನಿಮ್ಮ ಕೆಲಸ ಸುಲಭವಾಗುತ್ತದೆ.

ಸಿಹಿ ಶುಭದ ಸಂಕೇತ. ಮಂಗಳವಾರ ಬೆಲ್ಲ ತಿಂದು ಮನೆಯಿಂದ ಹೊರಗೆ ಹೋಗಿ. ಆ ದಿನ ಶುಭಕರವಾಗಿರುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 ಬುಧವಾರ ಕೊತ್ತಂಬರಿ ಬೀಜವನ್ನು ತಿಂದು ಮನೆ ಬಿಡಿ. ನಂತ್ರ ಫಲಿತಾಂಶವನ್ನು ನೀವೇ ನೋಡಿ.

ಗುರುವಾರ ಹಳದಿ ಬಣ್ಣದ ಬಟ್ಟೆ ಹಾಕುವ ಜೊತೆಗೆ ಜೀರಿಗೆ ತಿನ್ನಿ. ದಿನ ಶುಭವಾಗಿರುವ ಜೊತೆಗೆ ಕೆಲಸ ಸುಲಭವಾಗುತ್ತದೆ.

ಬೆಲ್ಲದ ಜೊತೆ ಮೊಸರು ಕೂಡ ಶುಭಕರ. ಹಾಗಾಗಿ ಶುಕ್ರವಾರ ಮನೆಯಿಂದ ಹೊರಗೆ ಹೋಗುವ ಮೊದಲು ಮೊಸರು ಸೇವನೆ ಮಾಡಿ.

ಶನಿವಾರ ಶನಿದೇವನ ದಿನ. ಅಂದು ಶುಂಠಿಯನ್ನು ತಿಂದು ಹೊರಗೆ ಹೋಗಿ.

ರಜೆಯ ದಿನ ಭಾನುವಾರ ಮನೆಯಿಂದ ಹೊರಗೆ ಹೋಗುವುದಾದಲ್ಲಿ ಪಾನ್ ಸೇವನೆ ಮಾಡಿ. ನಿಮ್ಮ ಕೆಲಸ ಸುಲಭವಾಗಿ ಪೂರ್ಣಗೊಳ್ಳುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular